Just In
- 4 min ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 1 hr ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 2 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 2 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Movies Amruthadhaare ; ತವರು ಮನೆಗಾಗಿ ಮಿಡಿದ ಭೂಮಿಕಾ ; ಒಡವೆಗಳನ್ನು ಅಡವಿಡುತ್ತಾಳಾ..?
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಬಿಡುಗಡೆಯಾಗಲಿದೆ ಪೋರ್ಷೆ ಪನಾಮೆರಾ ಫೇಸ್ಲಿಫ್ಟ್ ಕಾರು
ಜರ್ಮನ್ ಮೂಲದ ಸ್ಪೋರ್ಟ್ ಕಾರು ತಯಾರಕ ಕಂಪನಿಯಾದ ಪೋರ್ಷೆ ತನ್ನ 2021ರ ಪನಾಮೆರಾ ಫೇಸ್ಲಿಫ್ಟ್ ಕಾರನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಇದೀಗ ಪೋರ್ಷೆ ತನ್ನ ಅಧಿಕೃತ ಭಾರತೀಯ ವೆಬ್ಸೈಟ್ನಲ್ಲಿ ಪನಾಮೆರಾ ಫೇಸ್ಲಿಫ್ಟ್ ಕಾರಿನ ಹೆಸರನ್ನು ಸೇರಿಸಲಾಗಿದೆ.
ಪೋರ್ಷೆ ಇಂಡಿಯಾ ಕಂಪನಿಯು ತನ್ನ ವೆಬ್ಸೈಟ್ನಲ್ಲಿ ಪನಾಮೆರಾ ಫೇಸ್ಲಿಫ್ಟ್ ಕಾರಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ 2021ರ ಪೋರ್ಷೆ ಪನಾಮೆರಾ ಫೇಸ್ಲಿಫ್ಟ್ ಬೇಸ್, ಜಿಟಿಎಸ್, ಟರ್ಬೊ ಎಸ್ ಮತ್ತು ಟರ್ಬೊ ಎಸ್ ಇ-ಹೈಬ್ರಿಡ್ ಎಂಬ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಈ ಹೊಸ ಪನಾಮೆರಾ ಫೇಸ್ಲಿಫ್ಟ್ ಕಾರಿ ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ, ಈ ಹೊಸ ಪೋರ್ಷೆ ಪನಾಮೆರಾ ಕಾರಿನ ಮುಂಭಾಗದಲ್ಲಿ ನವೀಕರಿಸಿದ ಏರ್ ಇನ್ ಟೆಕ್ ಗ್ರಿಲ್, ದೊಡ್ಡ ಸೈಡ್ ಕೂಲಿಂಗ್ ಓಪನಿಂಗ್ಸ್ ಮತ್ತು ಸಿಂಗಲ್-ಬಾರ್ ಫ್ರಂಟ್ ಲೈಟ್ ಮಾಡ್ಯೂಲ್ ಅನ್ನು ಹೊಂದಿದೆ.
ಈ ಐಷಾರಾಮಿ ಕಾರಿನ ಹಿಂಭಾಗದಲ್ಲಿ ನವೀಕರಿಸಿದ ಲೈಟ್ ಸ್ಟ್ರಿಪ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಎರಡು ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್ಗಳನು ಒಳಗೊಂಡಿದೆ. ಪನಾಮೆರಾದ ಜಿಟಿಎಸ್ ಮಾದರಿಗಳಲ್ಲಿ ಹೊಸ ಕಪ್ಪಾದ ಎಕ್ಸ್ಕ್ಲೂಸಿವ್ ಡಿಸೈನ್ ಟೈಲ್ ಲೈಟ್ ಕ್ಲಸ್ಟರ್ಗಳನ್ನು ಡೈನಾಮಿಕ್ ಕಮಿಂಗ್/ಹೋಮ್ ಫಂಕ್ಷನ್ ಸ್ಟ್ಯಾಂಡರ್ಡ್ ಆಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ಈ ಹೊಸ ಪೋರ್ಷೆ ಪನಾಮೆರಾ ಫೇಸ್ಲಿಫ್ಟ್ ಕಾರಿನ ಇಂಟಿರಿಯರ್ ನಲ್ಲಿ ಸುಧಾರಿತ ವಾಯ್ಸ್ ಪೈಲಟ್ ಆನ್ಲೈನ್ ವಾಯ್ಸ್ ಕಂಟ್ರೋಲ್, ಅಪಾಯದ ಮುನ್ನಚ್ಚರಿಕೆಯನ್ನು ನೀಡಲು ರಿಸ್ಕ್ ರಾಡಾರ್, ವೈರ್ಲೆಸ್ ಆಪಲ್ ಕಾರ್ಪ್ಲೇ ಮುಂತಾದ ಹೆಚ್ಚುವರಿ ಡಿಜಿಟಲ್ ಫೀಚರ್ ಗಳನ್ನು ಹೊಂದಿವೆ.
ಇನ್ನು ಈ ಕಾರಿನಲ್ಲಿ ಸ್ಟ್ಯಾಂಡರ್ಡ್ ಲೇನ್ ಕೀಪಿಂಗ್ ಅಸಿಸ್ಟ್, ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ನೈಟ್ ವಿಷನ್ ಅಸಿಸ್ಟ್, ಲೇನ್ ಚೇಂಜ್ ಅಸಿಸ್ಟ್, ಪಿಡಿಎಲ್ಎಸ್ ಸೇರಿದಂತೆ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ಲೈಟ್ಗಳನ್ನು ಹೊಂದಿವೆ. ಇದರೊಂದಿಗೆ ಸರೌಂಡ್ ವ್ಯೂ, ಹೆಡ್-ಅಪ್ ಡಿಸ್ ಪ್ಲೇ ಮತ್ತು ಪಾರ್ಕ್ ಅಸಿಸ್ಟ್ ಅನ್ನು ಹೊಂದಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ
ಹೊಸ ಪೋರ್ಷೆ ಪನಾಮೆರಾ ಫೇಸ್ಲಿಫ್ಟ್ ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ 4-ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 621 ಬಿಹೆಚ್ಪಿ ಪವರ್ ಮತ್ತು 820 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇದರೊಂದಿಗೆ 2.9-ಲೀಟರ್ ವಿ6 ಬಿಟರ್ಬೊ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 326 ಬಿಹೆಚ್ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಪರ್ಫಾಮೆನ್ಸ್ ನಲ್ಲಿ ಯಾವುದೇ ಬದಲಾವಣೆಗಳಿಲ್ಲ.
MOST READ: ಐಷಾರಾಮಿ ಫೋಕ್ಸ್ವ್ಯಾಗನ್ ಎಸ್ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ
ಈ ಐಷಾರಾಮಿ ಪನಾಮೆರಾ ಫೇಸ್ಲಿಫ್ಟ್ ಕಾರು ಸ್ಪೋರ್ಟ್ ಪ್ಲಸ್ ಮೋಡ್ನಲ್ಲಿ ಕೇವಲ 3.1 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಹೊಸ ಕಾರು ಗಂಟೆಗೆ 315 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಈ ಕಾರಿನಲ್ಲಿ ಪರ್ಫಾಮೆನ್ಸ್ ಹೆಚ್ಚಿಸಲು, ಮೂರು-ಚೇಂಬರ್ ಏರ್ ಸಸ್ಪೆಂಕ್ಷನ್ , ಪೋರ್ಷೆ ಆಕ್ಟಿವ್ ಸಸ್ಪೆಂಕ್ಷನ್ ಮ್ಯಾನೇಜ್ಮೆಂಟ್ (ಪಿಎಎಸ್ಎಂ) ಮತ್ತು ರೋಲ್ ಸ್ಟೆಬಿಲೈಸೇಶನ್ ಸಿಸ್ಟಮ್ ಪೋರ್ಷೆ ಸೇರಿದಂತೆ ಪೋರ್ಷೆ ಡೈನಾಮಿಕ್ ಚಾಸಿಸ್ ಕಂಟ್ರೋಲ್ ಸ್ಪೋರ್ಟ್ (ಪಿಡಿಸಿಸಿ ಸ್ಪೋರ್ಟ್) ಟಾರ್ಕ್ ವೆಕ್ಟರಿಂಗ್ ಪ್ಲಸ್ (ಪಿಟಿವಿ ಪ್ಲಸ್) ಅನ್ನು ಪ್ರತಿ ನಿರ್ದಿಷ್ಟ ಮಾದರಿಗೆ ಕಸ್ಟಮೈಸ್ ಮಾಡಲಾಗಿದೆ