Just In
- 6 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 7 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಸ್ಟ್ ಲುಕ್ ರಿವ್ಯೂ: ಸ್ಪೆಷಲ್ ಎಡಿಷನ್‌ನಲ್ಲಿ ಮಿಂಚಿದ ಪೋರ್ಷೆ ಪನಾಮೆರಾ 4
ಭಾರತದ ಮೊದಲ ಪನಾಮೆರಾ 4 10 ಇಯರ್ ಎಡಿಶನ್ ಅನ್ನು ಇತ್ತೀಚೆಗೆ ಬೆಂಗಳೂರಿನ ಪೋರ್ಷೆ ಕೇಂದ್ರದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ವಿಶೇಷ ಆವೃತ್ತಿಯ ಮಾದರಿಯ ಫಸ್ಟ್ ಲುಕ್ ಹಾಗೂ ವಾಕ್ ಅರೌಂಡ್ ಬಗೆ ಮಾಹಿತಿ ನೀಡಲು ಡ್ರೈವ್‌ಸ್ಪಾರ್ಕ್‌ಗೆ ವಿಶೇಷ ಪ್ರವೇಶವನ್ನು ನೀಡಲಾಗಿತ್ತು.

ಪೋರ್ಷೆ ಇಂಡಿಯಾ ತನ್ನ ಐಷಾರಾಮಿ ಸ್ಪೋರ್ಟ್ಸ್ ಮಾದರಿಯಾದ 10 ಇಯರ್ ಎಡಿಶನ್ ಪನಾಮೆರಾ 4 ಅನ್ನು 2020ರ ಜೂನ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಹೊಸ ಪೋರ್ಷೆ ಪನಾಮೆರಾ 4 10 ಇಯರ್ ಎಡಿಶನ್ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.60 ಕೋಟಿಗಳಾಗಿದೆ. ಈ ಸ್ಪೋರ್ಟ್ಸ್ ಮಾದರಿಯಲ್ಲಿ ಹಲವಾರು ಕಾಸ್ಮೆಟಿಕ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ಅಪ್ ಡೇಟ್ ಮಾಡಲಾಗಿದೆ.

ಈ ಐಷಾರಾಮಿ ಸ್ಪೋರ್ಟ್ಸ್ ಮಾದರಿಯ 10ನೇ ವರ್ಷದ ಉತ್ಪಾದನೆಯನ್ನು ಆಚರಿಸಲು ಈ ವರ್ಷದ ಆರಂಭದಲ್ಲಿ ಪೋರ್ಷೆ ಪನಾಮೆರಾ 4 10 ಇಯರ್ ಎಡಿಶನ್ ಅನ್ನು ಬಿಡುಗಡೆಗೊಳಿಸಲಾಯಿತು.

2009ರಲ್ಲಿ ಮೊದಲ ಬಾರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಪನಾಮೆರಾ ಕಾರು ಇದುವರೆಗೂ 2.50 ಲಕ್ಷ ಯೂನಿಟ್‌ಗಳ ಮಾರಾಟವನ್ನು ಕಂಡಿದೆ.

ನಾಲ್ಕು ಡೋರುಗಳ, ನಾಲ್ಕು ಸೀಟುಗಳ ಈ ಐಷಾರಾಮಿ ಸ್ಪೋರ್ಟ್ಸ್ ಕಾರು ಎರಡು-ಡೋರುಗಳ ಸ್ಪೋರ್ಟ್ಸ್ ಕಾರಿನಂತೆಯೇ ಹೆಚ್ಚಿನ ಪರ್ಫಾಮೆನ್ಸ್ ನೀಡುತ್ತದೆ. ಈ ಕಾರಣಕ್ಕೆ ವಿಶ್ವಾದ್ಯಂತ ಜನಪ್ರಿಯವಾಗಿದೆ. ಈ 10 ಇಯರ್ ಎಡಿಶನ್ ಕಾರಿನಲ್ಲಿರುವ ವಿಶೇಷತೆಗಳನ್ನು ಈ ಲೇಖನದಲ್ಲಿ ನೋಡೋಣ.

ಡಿಸೈನ್ ಹಾಗೂ ಸ್ಟೈಲಿಂಗ್
ಪೋರ್ಷೆ ಪನಾಮೆರಾ 4 10 ಇಯರ್ ಎಡಿಶನ್ ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿರುವಂತಹ ವಿನ್ಯಾಸ ಹಾಗೂ ಸಿಲೂಯೆಟ್ ಅನ್ನು ಹೊಂದಿದೆ. ಅದರ ಒಟ್ಟಾರೆ ಸ್ಟೈಲಿಂಗ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆದರೂ 10 ಇಯರ್ ಎಡಿಶನ್ ಕೆಲವು ವಿಶೇಷ ವಿನ್ಯಾಸ ಅಂಶಗಳನ್ನು ಹೊಂದಿದೆ.

ಈ ಕಾರಿನ ಮುಂಭಾಗದಲ್ಲಿ ಕಂಪನಿಯ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಪಿಡಿಎಲ್ಎಸ್ ಪ್ಲಸ್ (ಪೋರ್ಷೆ ಡೈನಾಮಿಕ್ ಲೈಟಿಂಗ್ ಸಿಸ್ಟಂ) ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಈ ಕಾರು 21 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. 10 ಇಯರ್ ಎಡಿಶನ್ ವಿಶೇಷ ಸ್ಯಾಟಿನ್-ಗ್ಲೋಸ್ ವೈಟ್ ಗೋಲ್ಡ್ ಮೆಟಾಲಿಕ್ ಬಣ್ಣದ ಫಿನಿಷಿಂಗ್ ಹೊಂದಿದೆ.

ಈ ಕಾರಿನ ಮುಂಭಾಗದ ಡೋರುಗಳಲ್ಲಿ 10 ವರ್ಷಗಳ ಉತ್ಪಾದನೆಯನ್ನು ಸೂಚಿಸುವ ಸಲುವಾಗಿ 'ಪನಾಮೆರಾ 10' ಲೋಗೋ ನೀಡಲಾಗಿದೆ. ಈ ಬ್ಯಾಡ್ಜಿಂಗ್ ಸಹ ವೈಟ್ ಗೋಲ್ಡ್ ಮೆಟಾಲಿಕ್ ಬಣ್ಣವನ್ನು ಹೊಂದಿದೆ. 10 ಇಯರ್ ಎಡಿಶನ್ ಕಪ್ಪು-ರೂಫ್ ಹಾಗೂ ಪನೋರಾಮಿಕ್ ಸನ್ ರೂಫ್ ಅನ್ನು ಹೊಂದಿದೆ.

ಪನಾಮೆರಾ 4 ವಿಶೇಷ ಮಾದರಿಯ ಹಿಂಭಾಗದಲ್ಲಿ ಎಲ್ಇಡಿ ಸ್ಟೈಲ್ ಮೂಲಕ ಕನೆಕ್ಟ್ ಆಗಿರುವ ಎಲ್ಇಡಿ ಟೇಲ್ ಲೈಟ್ ಗಳಿವೆ. ಮಧ್ಯದಲ್ಲಿ 3 ಡಿ 'ಪೋರ್ಷೆ' ಬ್ಯಾಡ್ಜಿಂಗ್, ಅದರ ಕೆಳಗೆ ಪನಾಮೆರಾ 4 'ಲೋಗೊಗಳಿವೆ. ಹಿಂಭಾಗವು ಡ್ಯುಯಲ್ ಎಕ್ಸಾಸ್ಟ್ ಟಿಪ್ಸ್ ಹಾಗೂ ಸ್ಪಾಯ್ಲರ್ ಅನ್ನು ಸಹ ಹೊಂದಿದೆ. ಇವುಗಳು ಕಾರಿನ ಸ್ಪೋರ್ಟಿ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಇಂಟಿರಿಯರ್ ಹಾಗೂ ಫೀಚರ್
ಈ ವಿಶೇಷ ಆವೃತ್ತಿಯ ಕಾರಿನಲ್ಲಿ 'ಪನಾಮೆರಾ 10' ಲೋಗೋ ಹೊಂದಿರುವ ಮೆಟಲ್ ಡೋರ್ ಸಿಲ್ ಗಳಿವೆ. ಈ ಲೋಗೊಗಳನ್ನು ಮುಂಭಾಗದ ಪ್ರಯಾಣಿಕರ ಟ್ರಿಮ್ ಪ್ಯಾನೆಲ್‌ನಲ್ಲಿಯೂ ಸಹ ಕಾಣಬಹುದು. ಇದೂ ಸಹ ವೈಟ್ ಗೋಲ್ಡ್ ಮೆಟಾಲಿಕ್ ಬಣ್ಣವನ್ನು ಹೊಂದಿದೆ. ಡೋರ್ ಪ್ಯಾನೆಲ್ ಗಳು ವಿಶೇಷ ಬಣ್ಣದ ಪಿನ್-ಸ್ಟ್ರೈಪ್ ಗಳನ್ನು ಹೊಂದಿವೆ.

ಈ ಕಾರಿನ ಕ್ಯಾಬಿನ್ ನಲ್ಲಿ ಸ್ಟ್ಯಾಂಡರ್ಡ್ ಆಗಿ ಪ್ರೀಮಿಯಂ ಲೆದರ್ ಅಪ್ ಹೊಲೆಸ್ಟರಿಯನ್ನು ನೀಡಲಾಗಿದೆ. ಕಾರಿನ ಆಕರ್ಷಣೆಯನ್ನು ಹೆಚ್ಚಿಸಲು ಇದನ್ನು 'ವೈಟ್ ಗೋಲ್ಡ್' ಸ್ಟಿಚಿಂಗ್ ನಲ್ಲಿ ನೀಡಲಾಗಿದೆ.

ಪೋರ್ಷೆ ಪನಾಮೆರಾ 4 10 ಇಯರ್ ಎಡಿಶನ್ ಕಾರಿನಲ್ಲಿ 14-ವೇ ಎಲೆಕ್ಟ್ರಾನಿಕ್ ಅಡ್ಜಸ್ಟಬಲ್ ಸೀಟ್, ಡಿಜಿಟಲ್ ರೇಡಿಯೋ, ಬೋಸ್ ಸರೌಂಡ್ ಸೌಂಡ್ ಸಿಸ್ಟಂ, ಸಾಫ್ಟ್-ಕ್ಲೋಸ್ ಡೋರ್ಸ್, ಪೋರ್ಷೆ ಕ್ರೆಸ್ಟ್ ಆನ್ ಹೆಡ್ ರಿಸ್ಟ್ರೆನ್ ಗಳನ್ನು ನೀಡಲಾಗಿದೆ.

ಈ ವಿಶೇಷ ಆವೃತ್ತಿಯ ಕಾರಿನಲ್ಲಿ ಅನಲಾಗ್ ರೆವ್ ಕೌಂಟರ್ ಹೊಂದಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎರಡೂ ಬದಿಯಲ್ಲಿ ಎರಡು ಡಿಜಿಟಲ್ ಡಿಸ್ ಪ್ಲೇ, 12 ಇಂಚಿನ ದೊಡ್ಡ ರೆಸಲ್ಯೂಶನ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಮಲ್ಟಿ-ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಟಚ್‌ಸ್ಕ್ರೀನ್ ಡಿಸ್ ಪ್ಲೇ, 4 ಜೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.

ಪೋರ್ಷೆ ಕಂಪನಿಯು ಈ ಕಾರಿನಲ್ಲಿ ಸುರಕ್ಷತೆಗಾಗಿ ಪಿಎಎಸ್ಎಮ್ (ಪೋರ್ಷೆ ಆಕ್ಟಿವ್ ಸಸ್ಪೆನ್ಷನ್ ಮ್ಯಾನೇಜ್ಮೆಂಟ್), ಲೇನ್ ಚೇಂಜ್ ಅಸಿಸ್ಟ್, ಪಾರ್ಕ್ ಅಸಿಸ್ಟ್, ರಿವರ್ಸಿಂಗ್ ಕ್ಯಾಮೆರಾ ಮತ್ತು ಪವರ್ ಸ್ಟೀಯರಿಂಗ್ ಪ್ಲಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಎಂಜಿನ್ ಹಾಗೂ ಪರ್ಫಾಮೆನ್ಸ್
ಪೋರ್ಷೆ ಪನಾಮೆರಾ 4 10 ಇಯರ್ ಎಡಿಶನ್ ಕಾರಿನಲ್ಲಿ 2.9 ಲೀಟರಿನ ಬೈ-ಟರ್ಬೊ ವಿ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 5200 ಆರ್‌ಪಿಎಂನಲ್ಲಿ 326 ಬಿಹೆಚ್‌ಪಿ ಪವರ್ ಹಾಗೂ 1750 ಆರ್‌ಪಿಎಂನಲ್ಲಿ 450 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಕಾರಿನಲ್ಲಿರುವ ಕಂಪನಿಯ ಪಿಡಿಕೆ ಟ್ರಾನ್ಸ್ ಮಿಷನ್ ಯೂನಿಟ್ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಪೋರ್ಷೆ ಪನಾಮೆರಾ 4 10 ಇಯರ್ ಎಡಿಶನ್ ಕಾರು ಕೇವಲ 5.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 262 ಕಿ.ಮೀಗಳಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಪನಾಮೆರಾ 4ರ ವಿಶೇಷ ಕಾರನ್ನು 10 ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಉತ್ಪಾದಿಸಲಾಗಿದೆ. ಪೋರ್ಷೆ ಪನಾಮೆರಾ 4 10 ಇಯರ್ ಎಡಿಶನ್ ಬಿಎಂಡಬ್ಲ್ಯು 8 ಸೀರೀಸ್ ಕೂಪೆ, ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ 4-ಡೋರ್ ಕೂಪೆ ಹಾಗೂ ಆಡಿ ಆರ್ ಎಸ್ 7 ಸ್ಪೋರ್ಟ್‌ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.