ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ

ಲಾಕ್‌ಡೌನ್ ತೆಗೆದುಹಾಕಿದ ನಂತರ ದೆಹಲಿಯಲ್ಲಿನ ಆರ್ಥಿಕ ಚಟುವಟಿಕೆಗಳು ಚೇತರಿಕೆ ಹಾದಿಯಲ್ಲಿವೆ. ವಾಹನ ಮಾರಾಟದಲ್ಲಿ ಸತತ ಮೂರು ತಿಂಗಳ ಕಾಲ ಮಂದಗತಿಯನ್ನು ಕಂಡಿದ್ದ ಆಟೋಮೊಬೈಲ್ ಕಂಪನಿಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಮೇ ತಿಂಗಳಿಗೆ ಹೋಲಿಸಿದರೆ ದೆಹಲಿಯಲ್ಲಿನ ಕಾರು ಮಾರಾಟವು ಜೂನ್ ತಿಂಗಳಿನಲ್ಲಿ ಹೆಚ್ಚಾಗಿದೆ.

ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ

ಮೇ ತಿಂಗಳಿನಲ್ಲಿ 8,455 ವಾಹನಗಳು ಮಾರಾಟವಾಗಿದ್ದರೆ, ಜೂನ್‌ ತಿಂಗಳಿನಲ್ಲಿ 23,000ಕ್ಕೂ ಹೆಚ್ಚು ವಾಹನಗಳು ಮಾರಾಟವಾಗಿವೆ. ಜೂನ್‌ ತಿಂಗಳಿನಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮಾರಾಟವು ಹೆಚ್ಚಾಗಿದೆ ಎಂದು ದೆಹಲಿ ಸಾರಿಗೆ ಇಲಾಖೆ ವರದಿ ಮಾಡಿದೆ. ಅನ್ ಲಾಕ್ -1 ಘೋಷಣೆಯ ನಂತರ ಜೂನ್ ತಿಂಗಳಿನಲ್ಲಿ 23,940 ವಾಹನಗಳನ್ನು ರಿಜಿಸ್ಟರ್ ಮಾಡಲಾಗಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ

ಅಂಕಿಅಂಶಗಳ ಪ್ರಕಾರ ರಿಜಿಸ್ಟರ್ ಮಾಡಲಾದ ವಾಹನಗಳಲ್ಲಿ 18,741 ದ್ವಿಚಕ್ರ ವಾಹನಗಳು, 4,755 ನಾಲ್ಕು ಚಕ್ರ ವಾಹನಗಳು ಸೇರಿವೆ. ಇವುಗಳ ಜೊತೆಗೆ 74 ತ್ರಿಚಕ್ರ ವಾಹನ ಹಾಗೂ 280 ಇ-ರಿಕ್ಷಾಗಳನ್ನು ಸಹ ರಿಜಿಸ್ಟರ್ ಮಾಡಲಾಗಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ

ಮೇ ತಿಂಗಳಿನಲ್ಲಿ 6,711 ದ್ವಿಚಕ್ರ ವಾಹನ, 1,650 ಕಾರು, 7 ತ್ರಿಚಕ್ರ ವಾಹನ ಹಾಗೂ 72 ಇ-ರಿಕ್ಷಾಗಳನ್ನು ರಿಜಿಸ್ಟರ್ ಮಾಡಲಾಗಿತ್ತು. ಆದರೂ ಸಹ ಜೂನ್‌ ತಿಂಗಳ ಮಾರಾಟದ ಅಂಕಿಅಂಶಗಳು ಕಳೆದ ವರ್ಷಕ್ಕೆ ಹೊಲಿಸಿದರೆ ಕಡಿಮೆಯಾಗಿವೆ.

ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ

ಕೋವಿಡ್ -19 ಸಾಂಕ್ರಾಮಿಕ ರೋಗ ಆರಂಭವಾಗುವ ಮೊದಲು ದೆಹಲಿಯಲ್ಲಿ ಪ್ರತಿ ತಿಂಗಳು 40 ಸಾವಿರದಿಂದ 45 ಸಾವಿರ ವಾಹನಗಳ ಮಾರಾಟ ಮಾಡಲಾಗುತ್ತಿತ್ತು. ಮಹಾಮಾರಿ ಕೋವಿಡ್ -19 ಆಟೋಮೊಬೈಲ್ ಉದ್ಯಮದ ಪ್ರತಿಯೊಂದು ವಲಯಕ್ಕೂ ಹಾನಿಯನ್ನುಂಟು ಮಾಡಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ

ಈ ಸಾಂಕ್ರಾಮಿಕ ರೋಗವು ವಾಹನ ತಯಾರಕ ಕಂಪನಿಗಳಿಗೆ, ಡೀಲರ್ ಗಳಿಗೆ ಹಾಗೂ ಬಿಡಿ ಭಾಗಗಳ ತಯಾರಕರಿಗೆ ಭಾರಿ ಆರ್ಥಿಕ ನಷ್ಟವನ್ನುಂಟು ಮಾಡಿದೆ. ಹೊಸ ಕಾರು ಖರೀದಿಸುವುದಕ್ಕಿಂತ ಕಡಿಮೆ ಬೆಲೆಗೆ ಹಳೆಯ ಕಾರನ್ನು ಖರೀದಿಸುವುದಕ್ಕೆ ಜನರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ

ದೆಹಲಿಯಲ್ಲಿ ರೂ.2 ಲಕ್ಷದಿಂದ ರೂ.8 ಲಕ್ಷದವರೆಗಿನ ಕಾರುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹಣಕಾಸಿನ ತೊಂದರೆಯಿಂದಾಗಿ, ಗ್ರಾಹಕರು ದುಬಾರಿ ಬೆಲೆಯ ಹೈ ಎಂಡ್ ಕಾರುಗಳನ್ನು ಖರೀದಿಸುವುದನ್ನು ತಪ್ಪಿಸುತ್ತಿದ್ದಾರೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ

ಇದೇ ಪರಿಸ್ಥಿತಿ 2020ರ ಕೊನೆಯವರೆಗೂ ಇರಲಿದೆ ಎಂದು ಆಟೋ ಮೊಬೈಲ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೊಸ ವರ್ಷದಿಂದ ಹೊಸ ಕಾರುಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Post lockdown more than 23000 vehicles sold in Delhi. Read in Kannada.
Story first published: Tuesday, July 14, 2020, 12:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X