ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿರುವ ಸಜ್ಜಾಗಿರುವ ಪ್ರವೈಗ್ ಡೈನಾಮಿಕ್ ನಿರ್ಮಾಣದ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಸೆಡಾನ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳ್ಳುತ್ತಿದ್ದು, 2021ರ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ತೀವ್ರಗೊಳಿಸಲಾಗಿದೆ.

ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಹೊಸ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರಿನ ಫೋಟೋಟೈಪ್ ಆವೃತ್ತಿಯನ್ನು ಅನಾವರಣಗೊಳಿಸುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಭರವಸೆ ಹುಟ್ಟುಹಾಕಿರುವ ಬೆಂಗಳೂರು ಮೂಲದ ಪ್ರವೈಗ್ ಡೈನಾಮಿಕ್ ಕಂಪನಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲಿದ್ದು, ಮಧ್ಯಮ ಕ್ರಮಾಂಕದ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ಫೀಚರ್ಸ್‌ಗಳ ಮೂಲಕ ಅತ್ಯುತ್ತಮ ಮೈಲೇಜ್ ಹೊಂದಿರಲಿದೆ.

ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಉತ್ಪಾದನಾ ಕಾರು ಆವೃತ್ತಿಯು ಫೋಟೋಟೈಪ್ ಮಾದರಿಗಿಂತಲೂ ತುಸು ಬದಲಾವಣೆಗಳನ್ನು ಪಡೆದುಕೊಳ್ಳಲಿದ್ದು, ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಬ್ಯಾಟರಿ ಪ್ಯಾಕ್ ಸೌಲಭ್ಯಗಳು ಕಾನ್ಸೆಪ್ಟ್ ಮಾದರಿಯಲ್ಲೇ ಮುಂದುವರಿಯಲಿವೆ.

ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಸದ್ಯಕ್ಕೆ ಟೆಸ್ಟಿಂಗ್ ಮಾದರಿಯಲ್ಲಿನ ಫೀಚರ್ಸ್‌ಗಳು ಉತ್ಪಾದನಾ ಮಾದರಿಯಲ್ಲೂ ಅಳವಡಿಸಬಹುದಾದ ಸಾಧ್ಯತೆಗಳಿದ್ದು, ವಿವಿಧ ಡ್ರೈವಿಂಗ್ ಮೋಡ್, ಆರಾಮದಾಯಕವಾದ ಆಸನ ಸೌಲಭ್ಯ, ದೊಡ್ಡ ಗಾತ್ರದ ಇನ್ಪೋಟೈನ್ ಸಿಸ್ಟಂ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಲಿವೆ.

ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಜೊತೆಗೆ ಹೊಸ ಕಾರಿನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ವೆಹಿಕಲ್ ಮ್ಯಾನೆಜ್‌ಮೆಂಟ್ ಸಿಸ್ಟಂ ನೀಡಲಾಗಿದ್ದು, ಟೆಸ್ಟಿಂಗ್ ಮಾದರಿಯಾಗಿರುವುದರಿಂದ ಹೊಸ ಕಾರಿನ ಇಂಟಿರಿಯರ್ ಸೌಲಭ್ಯ ಹೊಸ ಬದಲಾವಣೆ ಪಡೆದುಕೊಳ್ಳಲಿದೆ. ಪ್ರವೈಗ್ ಡೈನಾಮಿಕ್ ಕಂಪನಿಯ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರು ಮಾದರಿಯು ಮೆಲ್ನೋಟಕ್ಕೆ ಟೆಸ್ಲಾ ಕಾರಿನಂತೆ ಕಂಡರೂ ವಿಭಿನ್ನ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿವೆ.

ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಎಕ್ಸ್ಟಿಷನ್ ಎಂಕೆ1 ಹೈ ಎಂಡ್ ಕಾರು ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 504ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಸಾಮಾನ್ಯ ಕಾರುಗಳಂತೆ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರು ಕೂಡಾ ಫರ್ಪಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಹೀಗಾಗಿ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸಲಿರುವ ಪ್ರವೈಗ್ ಕಂಪನಿಯು ವಾರ್ಷಿಕವಾಗಿ 2,500 ಯುನಿಟ್ ಉತ್ಪಾದನಾ ಗುರಿಹೊಂದಿದ್ದು, ಹೂಡಿಕೆದಾರರ ಆಧಾರದ ಮೇಲೆ ಕಾರು ಉತ್ಪಾದನಾ ಪ್ರಮಾಣವು ಮತ್ತಷ್ಟು ಹೆಚ್ಚಳವಾಗಲಿದೆ.

ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ತಾಂತ್ರಿಕ ಅಂಶಗಳನ್ನು ಹೊಂದಿರುವ ಹೊಸ ಕಾರು ಬೆಲೆಯಲ್ಲೂ ಗಮನಸೆಳೆಯಲಿದ್ದು, 96kWh ಲೀ-ಅಯಾನ್ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 30 ನಿಮಿಷಗಳಲ್ಲಿ ಗರಿಷ್ಠ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ.

ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಹಾಗೆಯೇ ಹೊಸ ಕಾರಿನಲ್ಲಿ ವಿವಿಧ ಡ್ರೈವ್ ಮೊಡ್‌ಗಳನ್ನು ನೀಡಲಾಗಿದ್ದು, 201.5-ಬಿಎಚ್‌ಪಿ ಉತ್ಪಾದನೆಯೊಂದಿಗೆ ಗಂಟೆಗೆ ಗರಿಷ್ಠ 196 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಳ್ಳುವ ವೈಶಿಷ್ಟ್ಯತೆ ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇದರೊಂದಿಗೆ ಹೊಸ ಕಾರಿನ ಹೊರಭಾಗದ ವಿನ್ಯಾಸವು ಸಹ ಸೆಡಾನ್ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಕಾನ್ಸೆಪ್ಟ್ ಮಾದರಿಯನ್ನು ಟೂ ಡೋರ್ ಕೂಪೆ ಮಾದರಿಯಲ್ಲಿ ಸಿದ್ದಪಡಿಸಲಾಗಿದೆ. ಆದರೆ ಉತ್ಪಾದನಾ ಆವೃತ್ತಿಯು ಫೋರ್ ಡೋರ್ ಮಾದರಿಯಾಗಿರಲಿದ್ದು, ಭಾರತೀಯ ಕಾರು ಖರೀದಿದಾರರ ಅಭಿರುಚಿಗೆ ತಕ್ಕಂತೆ ಹೊಸ ಕಾರನ್ನು ಸಿದ್ದಪಡಿಸಲಾಗುತ್ತಿದೆ.

ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಹೊಸ ಕಾರಿನ ಕಾನ್ಸೆಪ್ಟ್ ಮಾದರಿಯೊಂದಿಗೆ ಮೈಲೇಜ್ ಮಾಹಿತಿಯ ಹೊರತಾಗಿ ಒಳಭಾಗದ ತಾಂತ್ರಿಕ ಅಂಶಗಳನ್ನು ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಿದ್ದು, ಕಾನ್ಸೆಪ್ಟ್ ಮಾದರಿಯಲ್ಲಿನ ವಿನ್ಯಾಸವನ್ನೇ ಉತ್ಪಾದನಾ ಆವೃತ್ತಿಯಲ್ಲೂ ಉಳಿಸಿಕೊಳ್ಳುವ ಸುಳಿವು ನೀಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಪ್ರವೈಗ್ ಇವಿ ಕಾರು

ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಸೆಡಾನ್ ಕಾರಿನ ಉತ್ಪಾದನಾ ಮಾದರಿಯನ್ನು 2021ರ ಆರಂಭದಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿದ್ದು, 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

Most Read Articles

Kannada
English summary
Pravaig Extinction MK1 First Look Walkaround Video. Read in Kannada.
Story first published: Saturday, December 26, 2020, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X