ಮತ್ತೊಮ್ಮೆ ಸ್ಥಗಿತಗೊಂಡ ಟೊಯೊಟಾ ಉತ್ಪಾದನಾ ಘಟಕ

ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ಬಿಡದಿಯಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿನ ಉತ್ಪಾದನೆಯನ್ನು ಮತ್ತೊಮ್ಮೆ ಸ್ಥಗಿತಗೊಳಿಸಿರುವುದಾಗಿ ಮಂಗಳವಾರ ಪ್ರಕಟಿಸಿದೆ. ಮೂಲಗಳ ಪ್ರಕಾರ, ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಕಂಪನಿಯು ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಮತ್ತೊಮ್ಮೆ ಸ್ಥಗಿತಗೊಂಡ ಟೊಯೊಟಾ ಉತ್ಪಾದನಾ ಘಟಕ

ಕರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂದು ಕಂಪನಿ ಹೇಳಿದೆ. ಕರ್ನಾಟಕ ರಾಜ್ಯ ಸರ್ಕಾರವು ಜುಲೈ 14ರಿಂದ ಜುಲೈ 22ರವರೆಗೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಲಾಕ್ ಡೌನ್ ಜಾರಿಗೊಳಿಸಿದೆ.

ಮತ್ತೊಮ್ಮೆ ಸ್ಥಗಿತಗೊಂಡ ಟೊಯೊಟಾ ಉತ್ಪಾದನಾ ಘಟಕ

ಟೊಯೊಟಾದ ಬಿಡದಿ ಉತ್ಪಾದನಾ ಘಟಕದಲ್ಲಿನ ಕೆಲವು ಸಿಬ್ಬಂದಿಗಳು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ಉತ್ಪಾದನಾ ಘಟಕದಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಮತ್ತೊಮ್ಮೆ ಸ್ಥಗಿತಗೊಂಡ ಟೊಯೊಟಾ ಉತ್ಪಾದನಾ ಘಟಕ

ಟೊಯೊಟಾ ಕಂಪನಿಯು ಎರಡನೇ ಬಾರಿಗೆ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದೆ. ಈ ಮೊದಲು ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ಜಾರಿಯಾಗಿದ್ದ ಸಂದರ್ಭದಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.

ಮತ್ತೊಮ್ಮೆ ಸ್ಥಗಿತಗೊಂಡ ಟೊಯೊಟಾ ಉತ್ಪಾದನಾ ಘಟಕ

ಟೊಯೊಟಾ ಕಂಪನಿಯ ಕಾರ್ಪೊರೇಟ್ ಕಚೇರಿ ಸಿಬ್ಬಂದಿ ಹಾಗೂ ಪ್ರಾದೇಶಿಕ ಕಚೇರಿ ಸಿಬ್ಬಂದಿಗಳಿಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಲಾಗಿದೆ. ಕರೋನಾ ಪಾಸಿಟಿವ್ ಕಂಡುಬಂದ ಉದ್ಯೋಗಿಗಳಿಗೆ ಪೂರ್ಣ ರೀತಿಯ ನೆರವು ನೀಡಲಾಗುವುದೆಂದು ಕಂಪನಿ ತಿಳಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮತ್ತೊಮ್ಮೆ ಸ್ಥಗಿತಗೊಂಡ ಟೊಯೊಟಾ ಉತ್ಪಾದನಾ ಘಟಕ

ಯಾವುದೇ ನೌಕರನು ಕರೋನಾ ಸೋಂಕಿಗೆ ಒಳಗಾದಾಗ ಆತನ ಸಂಪರ್ಕದಲ್ಲಿದ್ದ ಎಲ್ಲಾ ಉದ್ಯೋಗಿಗಳನ್ನು ಪರೀಕ್ಷಿಸಿ, ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ ಎಂದು ಟೊಯೊಟಾ ಕಂಪನಿ ಸ್ಪಷ್ಟಪಡಿಸಿದೆ.

ಮತ್ತೊಮ್ಮೆ ಸ್ಥಗಿತಗೊಂಡ ಟೊಯೊಟಾ ಉತ್ಪಾದನಾ ಘಟಕ

ಇಷ್ಟು ಮಾತ್ರವಲ್ಲದೇ ಸೋಂಕಿತ ಸಿಬ್ಬಂದಿಗೆ ಎಲ್ಲಾ ರೀತಿಯ ನೆರವನ್ನು ನೀಡಲಾಗುತ್ತಿದೆ. ಉತ್ಪಾದನಾ ಘಟಕವನ್ನು ಪ್ರತಿದಿನವೂ ಸ್ವಚ್ವಗೊಳಿಸಿ, ನೈರ್ಮಲ್ಯವನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಕಂಪನಿ ಹೇಳಿದೆ.

Most Read Articles

Kannada
Read more on ಟೊಯೊಟಾ toyota
English summary
Production in Toyota Kirloskar Bidadi plant suspended again. Read in Kannada.
Story first published: Wednesday, July 15, 2020, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X