ಕರೋನಾ ವೈರಸ್ ಎಫೆಕ್ಟ್: ಇಎಂಐ ಅವಧಿ ವಿಸ್ತರಿಸಿದ ಆರ್‌ಬಿಐ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾರು ಸಾಲ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಕಾರು ಸಾಲಗಳ ಮೇಲಿನ ಇಎಂಐ ಪಾವತಿ ಅವಧಿಯನ್ನು 2020ರ ಆಗಸ್ಟ್ 31ರವರೆಗೆ ವಿಸ್ತರಿಸಿದೆ. ಗ್ರಾಹಕರು ಬಯಸಿದರೆ ಆಗಸ್ಟ್ 31ರವರೆಗೆ ತಮ್ಮ ವಾಹನ ಸಾಲದ ಇಎಂಐ ಅನ್ನು ಮನ್ನಾ ಮಾಡಿಕೊಳ್ಳಬಹುದು. ಅದನ್ನು ಸಾಲದ ಅವಧಿಯ ಕೊನೆಯಲ್ಲಿ ಮರುಪಾವತಿಸಬೇಕಾಗುತ್ತದೆ.

ಕರೋನಾ ವೈರಸ್ ಎಫೆಕ್ಟ್; ಇಎಂಐ ಅವಧಿ ವಿಸ್ತರಿಸಿದ ಆರ್‌ಬಿಐ

ಆರ್‌ಬಿಐನ ಈ ನಿರ್ಧಾರದಿಂದಾಗಿ ಲಾಕ್‌ಡೌನ್‌ನಿಂದ ಸಂಕಷ್ಟವನ್ನು ಅನುಭವಿಸಿದ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಆರ್‌ಬಿಐನ ಈ ನಿರ್ಧಾರದಿಂದ ಕಾರು ಸಾಲದ ಇಎಂಐ ಪಾವತಿಸಲು ಸಾಧ್ಯವಾಗದವರು ಆಗಸ್ಟ್ 31ರ ನಂತರ ಇಎಂಐ ಪಾವತಿಸಬಹುದು. ಇದಕ್ಕೂ ಮುಂಚೆ ಆರ್‌ಬಿಐ ಇಎಂಐ ತೊರೆಯುವ ಕೊನೆಯ ದಿನವನ್ನು ಮೇ 31ಕ್ಕೆ ನಿಗದಿಪಡಿಸಿತ್ತು.

ಕರೋನಾ ವೈರಸ್ ಎಫೆಕ್ಟ್; ಇಎಂಐ ಅವಧಿ ವಿಸ್ತರಿಸಿದ ಆರ್‌ಬಿಐ

ಆದರೆ ಈ ಇಎಂಐಗಳ ಮೇಲೆ ವಿಧಿಸಲಾಗುವ ಬಡ್ಡಿ ಹಾಗೆಯೇ ಮುಂದುವರೆಯಲಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಮುಂದಿನ ದಿನಗಳಲ್ಲಿ ಆರ್‌ಬಿಐ ಈ ಬಡ್ಡಿಯ ಮೇಲೂ ರಿಯಾಯಿತಿಯನ್ನು ಪ್ರಕಟಿಸಬಹುದು. ಆರ್‌ಬಿಐ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಗೊಳಿಸಿದ್ದು, ಸಾಲವು ಮತ್ತಷ್ಟು ಅಗ್ಗವಾಗಲಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್; ಇಎಂಐ ಅವಧಿ ವಿಸ್ತರಿಸಿದ ಆರ್‌ಬಿಐ

ಭಾರತೀಯ ವಾಹನ ತಯಾರಕರ ಸಂಘವು ಆರ್‌ಬಿಐನ ಈ ನಿರ್ಧಾರವನ್ನು ಸ್ವಾಗತಿಸಿದೆ. ರೆಪೊ ದರವನ್ನು ಕಡಿಮೆ ಮಾಡಿರುವುದರಿಂದ ಕಾರು ಸಾಲವು ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದ್ದು, ವಾಹನ ಉದ್ಯಮಕ್ಕೆ ನೆರವಾಗಲಿದೆ.

ಕರೋನಾ ವೈರಸ್ ಎಫೆಕ್ಟ್; ಇಎಂಐ ಅವಧಿ ವಿಸ್ತರಿಸಿದ ಆರ್‌ಬಿಐ

ಆರ್‌ಬಿಐನ ಈ ನಿರ್ಧಾರವು ವಾಹನ ಸಾಲವನ್ನು ಪಾವತಿಸುತ್ತಿರುವ ಹಾಗೂ ಹೊಸ ಕಾರು ಸಾಲವನ್ನು ಪಡೆಯುವ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. 4% ರೆಪೊ ದರದೊಂದಿಗೆ, ಬ್ಯಾಂಕುಗಳು ಗ್ರಾಹಕರಿಗೆ ಮೊದಲಿಗಿಂತ ಕಡಿಮೆ ದರದಲ್ಲಿ ಸಾಲ ನೀಡುವ ನಿರೀಕ್ಷೆಗಳಿವೆ. ಕಂತುಗಳನ್ನು ಪಾವತಿಸದಿದ್ದರೂ ಗ್ರಾಹಕರನ್ನು ಡಿಫಾಲ್ಟರ್ ಎಂದು ಪರಿಗಣಿಸುವುದಿಲ್ಲ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್; ಇಎಂಐ ಅವಧಿ ವಿಸ್ತರಿಸಿದ ಆರ್‌ಬಿಐ

ಕರೋನಾ ವೈರಸ್‌ನಿಂದ ಆಟೋ ಮೊಬೈಲ್ ಉದ್ಯಮಕ್ಕೆ ಹಾನಿಯಾಗಲಿದೆ ಎಂದು ಭಾರತೀಯ ವಾಹನ ತಯಾರಕರ ಸಂಘದ ಅಧ್ಯಕ್ಷರಾದ ರಾಜನ್ ವಧೇರಾ ಎಚ್ಚರಿಕೆ ನೀಡಿದ್ದಾರೆ. ಇತರ ದೇಶಗಳಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಕಚ್ಚಾ ವಸ್ತುಗಳಿಗೆ ಕೊರತೆಯುಂಟಾಗಲಿದೆ ಎಂದು ಅವರು ಹೇಳಿದ್ದಾರೆ.

ಕರೋನಾ ವೈರಸ್ ಎಫೆಕ್ಟ್; ಇಎಂಐ ಅವಧಿ ವಿಸ್ತರಿಸಿದ ಆರ್‌ಬಿಐ

ಕಚ್ಚಾ ವಸ್ತುಗಳ ಕೊರತೆಯಿಂದಾಗಿ ವಾಹನ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮಗಳುಂಟಾಗುತ್ತವೆ. ಭಾರತದಲ್ಲಿ ಪ್ರಯಾಣಿಕರ ವಾಹನ, ಕಮರ್ಷಿಯಲ್ ವಾಹನ, ತ್ರಿಚಕ್ರ ವಾಹನ, ದ್ವಿಚಕ್ರ ವಾಹನ ಹಾಗೂ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಉಂಟಾಗಲಿದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಮೇಲೆ ಹೆಚ್ಚು ಪರಿಣಾಮ ಬೀಳಲಿದೆ.

Most Read Articles

Kannada
English summary
RBI extends auto loans EMI payment by 3 months. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X