Just In
Don't Miss!
- News
ಜನರಿಗೆ ಐಎಂಎ ಠೇವಣಿ ಯಾವಾಗ ವಾಪಸ್ ಕೊಡ್ತೀರಿ?: ಹೈಕೋರ್ಟ್
- Movies
ಶಿವಣ್ಣನಿಗೆ ಕೃಷ್ಣ-ಮಿಲನಾ ಜೋಡಿಯ ಮದುವೆ ಆಮಂತ್ರಣ- ಡಿ ಬಾಸ್ ಗೆ ಯಾವಾಗ ಕೊಡ್ತೀರಾ ಎನ್ನುತ್ತಿದ್ದಾರೆ ಅಭಿಮಾನಿಗಳು
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಬ್ರಿಸ್ಬೇನ್, ಅಂತಿಮ ದಿನದಾಟ Live ಸ್ಕೋರ್
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೀಪಾವಳಿ ಹಬ್ಬದ ಅವಧಿಯಲ್ಲಿ ಭರ್ಜರಿಯಾಗಿ ಮಾರಾಟವಾಯ್ತು ರೆನಾಲ್ಟ್ ಕಾರುಗಳು
ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ದೀಪಾವಳಿ ಹಬ್ಬದ ಅವಧಿಯಲ್ಲಿ ಭರ್ಜರಿ ಕಾರು ಮಾರಾಟವನ್ನು ನಡೆಸಿದೆ. ದೀಪಾವಳಿ ಹಬ್ಬದ ಅವಧಿಯಲ್ಲಿ ರೆನಾಲ್ಟ್ ಕಾರುಗಳು ಉತ್ತಮ ಬೇಡಿಯನ್ನು ಪಡೆದುಕೊಂಡಿತ್ತು.

ದೀಪಾವಳಿ ಮತ್ತು ಧಂತೇರಸ್ ಸಮಯದಲ್ಲಿ ರೆನಾಲ್ಟ್ ಬೃಹತ್ ಸಂಖ್ಯೆಯಲ್ಲಿ ವಿತರಣೆಯನ್ನು ಮಾಡಿದ್ದಾರೆ. ಕಂಪನಿಯ ಮೂಲಗಳ ಪ್ರಕಾರ, ರೆನಾಲ್ಟ್ ಇಂಡಿಯಾ ದೀಪಾವಳಿ ಮತ್ತು ಧಂತೇರಸ್ ಅವಧಿಯಲ್ಲಿ ಒಟ್ಟು 3000 ಕಾರುಗಳನ್ನು ವಿತರಿಸಿದೆ. ಹಬ್ಬದ ಸೀಸನ್ ನಲ್ಲಿ ರೆನಾಲ್ಟ್ ಕಾರು ಉತ್ತಮ ಬೇಡಿಕೆಯನ್ನು ಪಡೆದುಕೊಳ್ಳುವಲ್ಲಿ ಯಶ್ವಸಿಯಾಗಿದೆ. ಇನ್ನು ವಿಶೇಷವಾಗಿ ನವರಾತ್ರಿ ಮತ್ತು ದಸರಾ ಹಬ್ಬದ 9 ದಿನಗಳ ಅವಧಿಯಲ್ಲಿ ಕಂಪನಿಯು ಭಾರತದಲ್ಲಿ 5000 ಕಾರುಗಳನ್ನು ವಿತರಿಸಿದೆ.

ಎಲ್ಲಾವನ್ನು ಪರಿಗಣಿಸಿದಾಗ ಕಾರು ತಯಾರಕರು ಕೇವಲ 2 ದಿನಗಳಲ್ಲಿ ಮಾರಾಟದಲ್ಲಿ ಅದರ ಶೇ.60 ಕ್ಕಿಂತ ಹೆಚ್ಚು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿಯು ಧಂತೇರಸ್ ದಿನದಂದು ಹೆಚ್ಚಿನ ಸಂಖ್ಯೆಯ ರೆನಾಲ್ಟ್ ಕಾರುಗಳು ಮಾರಾಟವಾಗಿವೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಧಂತೇರಸ್ ಎಂದರೆ ದೀಪಾವಳಿ ಹಬ್ಬದ ಮೊದಲ ದಿನ. ಇದನ್ನು ಹೆಚ್ಚಾಗಿ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಆಚರಿಸಲಾಗುತ್ತದೆ. ಉತ್ತರ ಮತ್ತು ಪಶ್ಚಿಮ ಭಾರತ ಜನರಿಗೆ ಈ ದಿನವನ್ನು ಬಹಳ ಶುಭದಿನವಾಗಿದೆ.

ಧಂತೇರಸ್ ಎಂಬ ಶುಭದಿನದಂದು ಹೆಚ್ಚಾಗಿ ಚಿನ್ನ, ಬೆಳ್ಳಿ ಅಥವಾ ಇನ್ನಾವುದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತಾರೆ. ಈ ದಿನದಂದು ಕಾರುಗಳು ಹೆಚ್ಚಾಗಿ ಮಾರಾಟವಾಗುತ್ತದೆ. ಇದರಿಂದ ಕಾರು ತಯಾರಕರಿಗೂ ಇದು ಶುಭ ದಿನವೆಂದು ಹೇಳಬಹುದು.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಲಾಕ್ ಡೌನ್ ಬಳಿಕ ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಗಣನೀಯ ಬೆಳವಣಿಗೆಯನ್ನು ಕಂಡಿದೆ. ಪ್ರಸ್ತುತ ರೆನಾಲ್ಟ್ ಕಂಪನಿಯು 2020ರಲ್ಲಿ ಶೇ.3.2 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ, ಇದು ಕಳೆದ ವರ್ಷಕ್ಕಿಂತ 0.7 ಶೇಕಡಾ ಪಾಯಿಂಟ್ಗಳ ಬೆಳವಣಿಗೆಯಾಗಿದೆ. 2020ರ ಅಕ್ಟೋಬರ್ನಲ್ಲಿ ಕಂಪನಿಯು ಭಾರತದಲ್ಲಿ 11,005 ಯುನಿಟ್ಗಳನ್ನು ಮಾರಾಟ ಮಾಡಿತು

ಈ ತಿಂಗಳು ರೆನಲ್ಟ್ ಕಾರುಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಯಾಕೆಂದರೆ ದೀಪಾವಳಿ ಹಬ್ಬದ ಪ್ರಯುಕ್ತ ರೆನಾಲ್ಟ್ ಕಾರುಗಳಿಗೆ ಭರ್ಜರಿ ರಿಯಾಯಿತಿ ನೀಡಿದೆ. ಈ ತಿಂಗಳ ಅಂತ್ಯದವರೆಗೂ ಕ್ವಿಡ್, ಡಸ್ಟರ್ ಮತ್ತು ಟ್ರೈಬರ್ ಸೇರಿದಂತೆ ಇತರ ರೆನಾಲ್ಟ್ ಕಾರುಗಳಿಗೆ ರೂ.1 ಲಕ್ಷದವರೆಗೆ ರಿಯಾಯಿತಿಯನ್ನು ನೀಡಲಾಗಿದೆ.
MOST READ: ಕ್ರ್ಯಾಶ್ ಟೆಸ್ಟ್ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ರೆನಾಲ್ಟ್ ಇಂಡಿಯಾ ಕಂಪನಿಯ ಸಣ್ಣ ಹ್ಯಾಚ್ಬ್ಯಾಕ್ ಕ್ವಿಡ್ ಮತ್ತು ಸಬ್ಕಾಂಪ್ಯಾಕ್ಟ್ ಎಂಪಿವಿ, ಟ್ರೈಬರ್ಗೆ ಬಲವಾದ ಬೇಡಿಕೆಯಿಂದಾಗಿ ಮಾರಾಟದಲ್ಲಿ ಚೇತರಿಕೆಯ ಹಾದಿಯಲ್ಲಿದೆ. ಇವೆರಡೂ ತಿಂಗಳಿಗೆ ಸರಾಸರಿ 5000ಕ್ಕೂ ಹೆಚ್ಚು ಯುನಿಟ್ ಗಳು ಮಾರಾಟವಾಗುತ್ತೀವೆ.

ಇನ್ನು ರೆನಾಲ್ಟ್ ಕಂಪನಿಯು ತನ್ನ ಕಿಗರ್ ಎಂಬ ಮೊದಲ ಸಬ್ ಕಾಂಪ್ಯಾಕ್ಟ್ ಎಸ್ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಸಬ್ ಕಾಂಪ್ಯಾಕ್ಟ್ ಎಸ್ಯುವಿಯ ಟೀಸರ್ ಅನ್ನು ಕಂಪನಿಯು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.