Just In
- 30 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 12 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 12 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‌ಯುವಿ
Don't Miss!
- News
ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, Live ಸ್ಕೋರ್: ಭಾರತದ ಆರಂಭಿಕ ವಿಕೆಟ್ ಪತನ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ವರ್ಷನ್
ಫ್ರೆಂಚ್ ಕಾರು ಉತ್ಪಾದನಾ ಕಂಪನಿ ರೆನಾಲ್ಟ್ ಭಾರತದಲ್ಲಿ ಹಲವಾರು ಬದಲಾವಣೆಗಳೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಡಸ್ಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

2020ರ ಎಪ್ರಿಲ್ 1ರಿಂದ ಜಾರಿಗೆ ಕಡ್ಡಾಯವಾಗಿ ಬಂದಿರುವ ಬಿಎಸ್-6 ಎಮಿಷನ್ ನಿಯಮ ಅನುಸಾರವಾಗಿ ಬಹುತೇಕ ಕಾರು ಉತ್ಪಾದನಾ ಕಂಪನಿಗಳು ಹೊಸ ಮಾದರಿಯ ಎಂಜಿನ್ ಆಯ್ಕೆಗಳನ್ನು ಪರಿಚಯಿಸಿದ್ದು, ರೆನಾಲ್ಟ್ ಕೂಡಾ ತನ್ನ ಪ್ರಮುಖ ಕಾರುಗಳ ಎಂಜಿನ್ ಆಯ್ಕೆಯಲ್ಲಿ ಭಾರೀ ಬದಲಾವಣೆ ತಂದಿದೆ. ತನ್ನ ಜನಪ್ರಿಯ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಮಾರಾಟವನ್ನು ಸ್ಥಗಿತಗೊಳಿಸಿರವ ರೆನಾಲ್ಟ್ ಕಂಪನಿಯು ಕೇವಲ ಪೆಟ್ರೋಲ್ ಮಾದರಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ರೆನಾಲ್ಟ್ ಕಂಪನಿಯು ಕಂಪನಿಯು ಈಗಾಗಲೇ ಡಸ್ಟರ್ ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಮಾರಾಟ ಮಾಡುತ್ತಿದ್ದು, ಇದೀಗ 1.3-ಲೀಟರ್ ಸಾಮರ್ಥ್ಯದ ಟರ್ಬೋ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಈ ಮೊದಲಿನ ಯೋಜನೆಯೆಂತೆ ಹೊಸ ಕಾರನ್ನು ಜೂನ್‌ನಲ್ಲಿಯೇ ಬಿಡುಗಡೆ ಮಾಡಬೇಕಿದ್ದ ರೆನಾಲ್ಟ್ ಕಂಪನಿಯು ಕರೋನಾ ವೈರಸ್ ಪರಿಣಾಮ ಇದೀಗ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, 1.3-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಸಹಭಾಗೀತ್ವದ ಯೋಜನೆ ಅಡಿ ಅಭಿವೃದ್ದಿಗೊಳಿಸಿವೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯನ್ನು ಈಗಾಗಲೇ ಬಿಎಸ್-6 ಕಿಕ್ಸ್ ಎಸ್‌ಯುವಿ ಮಾದರಿಯಲ್ಲಿ ಜೋಡಣೆ ಮಾಡಿ ಬಿಡುಗಡೆಗೊಳಿಸಲಾಗಿದ್ದು, ಇದೀಗ ಡಸ್ಟರ್ ಟರ್ಬೋ ಪೆಟ್ರೋಲ್ ಮಾದರಿಯು ಕೂಡಾ ಅದೇ 1.3-ಲೀಟರ್ ಎಂಜಿನ್ ಅನ್ನೇ ಪಡೆದುಕೊಳ್ಳಲಿದೆ.

ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚು ಪರ್ಫಾಮೆನ್ಸ್ ಉತ್ಪಾದನೆ ಮಾಡುವ 1.3-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 7-ಸ್ಟೇಪ್ ಎಂ-ಮೋಡ್ ಟ್ರಾನ್ಸ್‌ಮಿಷನ್‌ನೊಂದಿಗೆ 156-ಬಿಎಚ್‌ಪಿ ಮತ್ತು 254-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಇದು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ಅತಿ ಬಿಎಚ್‌ಪಿ ಉತ್ಪಾದನಾ ಮಾದರಿಯಾಗಿದ್ದು, ಸಾಮಾನ್ಯ ಮಾದರಿಯಾದ 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 105-ಬಿಎಚ್‌ಪಿ ಮತ್ತು 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಸಾಮಾನ್ಯ ಮಾದರಿಗಿಂತ ಟರ್ಬೋ ಆವೃತ್ತಿಯು ಹಲವು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬೆಲೆಯಲ್ಲೂ ತುಸು ದುಬಾರಿಯಾಗಿರಲಿದ್ದು, ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಡಸ್ಟರ್ ಬಿಎಸ್-6 ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯ 9.99 ಲಕ್ಷ ಬೆಲೆ ಹೊಂದಿದ್ದು, ಇದೀಗ ಬಿಡುಗಡೆಯಾಗಲಿರುವ ಟರ್ಬೋ ಮಾದರಿಯು ಆರಂಭಿಕವಾಗಿ ರೂ. 11 ಲಕ್ಷದಿಂದ ರೂ.12.50 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗಲಿದೆ.