ಲಾಕ್‌ಡೌನ್ ಸಂಕಷ್ಟ ಸಮಯದಲ್ಲೂ ಉದ್ಯೋಗಿಗಳ ವೇತನ ಹೆಚ್ಚಿಸಿದ ರೆನಾಲ್ಟ್

ಮಹಾಮಾರಿ ಕರೋನಾ ವೈರಸ್‌ ಪರಿಣಾಮ ಬಹುತೇಕ ಆಟೋ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿವೆ. ಹೀಗಿರುವಾಗ ತನ್ನ ಫ್ರೆಂಚ್ ಕಾರು ಉತ್ಪಾದನಾ ಕಂಪನಿ ರೆನಾಲ್ಟ್ ತನ್ನ ಉದ್ಯೋಗಿಗಳಿಗೆ ಬಂಪರ್ ಕೊಡುಗೆ ನೀಡಿದೆ.

ಲಾಕ್‌ಡೌನ್ ಸಂಕಷ್ಟ ಸಮಯದಲ್ಲೂ ಉದ್ಯೋಗಿಗಳ ವೇತನ ಹೆಚ್ಚಿಸಿದ ರೆನಾಲ್ಟ್

ಸದ್ಯ ವೈರಸ್ ಭೀತಿ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಮೇ ಅವಧಿಯಲ್ಲಿ ಕನಿಷ್ಠ ಪ್ರಮಾಣದ ವಾಹನ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಬಹುತೇಕ ವಾಹನಗಳ ಮಾರಾಟದಲ್ಲಿ ಶೇ.70ರಿಂದ ಶೇ.97ರಷ್ಟು ಕುಸಿತ ಕಂಡುಬಂದಿದೆ. ವೈರಸ್ ಭೀತಿ ಹಿನ್ನಲೆಯಲ್ಲಿ ಹೊಸ ವಾಹನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, ಬಹುತೇಕ ಆಟೋ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ.

ಲಾಕ್‌ಡೌನ್ ಸಂಕಷ್ಟ ಸಮಯದಲ್ಲೂ ಉದ್ಯೋಗಿಗಳ ವೇತನ ಹೆಚ್ಚಿಸಿದ ರೆನಾಲ್ಟ್

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವೆಚ್ಚ ನಿರ್ವಹಣೆಯನ್ನು ಸರಿದೂಗಿಸಲು ಉದ್ಯೋಗ ಕಡಿತಕ್ಕೆ ಮುಂದಾಗುತ್ತಿವೆ.

ಲಾಕ್‌ಡೌನ್ ಸಂಕಷ್ಟ ಸಮಯದಲ್ಲೂ ಉದ್ಯೋಗಿಗಳ ವೇತನ ಹೆಚ್ಚಿಸಿದ ರೆನಾಲ್ಟ್

ಲಾಕ್‌ಡೌನ್ ಕಾರಣಕ್ಕೆ ಉದ್ಯೋಗ ಕಡಿತ ಮಾಡದಿರುವಂತೆ ಕೇಂದ್ರ ಸರ್ಕಾರದ ಆದೇಶದ ಹೊರತಾಗಿ ಈಗಾಗಲೇ ಹಲವಾರು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದ್ದು, ಇನ್ನು ಕೆಲವು ಕಂಪನಿಗಳು ಉದ್ಯೋಗಿಗಳ ವೇತನದಲ್ಲಿ ಇಂತಿಷ್ಟು ಪ್ರಮಾಣವನ್ನು ಕಡಿತ ಮಾಡುತ್ತಿವೆ.

ಲಾಕ್‌ಡೌನ್ ಸಂಕಷ್ಟ ಸಮಯದಲ್ಲೂ ಉದ್ಯೋಗಿಗಳ ವೇತನ ಹೆಚ್ಚಿಸಿದ ರೆನಾಲ್ಟ್

ಇನ್ನು ಕೆಲವು ಕಂಪನಿಗಳಲ್ಲಿ ಸರಿಯಾಗಿ ವೇತನವನ್ನೇ ನೀಡಿಲ್ಲವಾದ್ದರಿಂದ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದು, ರೆನಾಲ್ಟ್ ಇಂಡಿಯಾ ಕಂಪನಿ ಮಾತ್ರ ತನ್ನ ಉದ್ಯೋಗಿಗಳ ವೇತನ ಪ್ರಮಾಣದಲ್ಲಿ ಶೇ.15ರಷ್ಟು ಹೆಚ್ಚಳ ಮಾಡಿ ಇತರೆ ಆಟೋ ಕಂಪನಿಗಳಿಗೆ ಅಚ್ಚರಿ ಉಂಟುಮಾಡಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಲಾಕ್‌ಡೌನ್ ಸಂಕಷ್ಟ ಸಮಯದಲ್ಲೂ ಉದ್ಯೋಗಿಗಳ ವೇತನ ಹೆಚ್ಚಿಸಿದ ರೆನಾಲ್ಟ್

ಪ್ರತಿ ವರ್ಷ ಶೇ.10 ರಿಂದ ಶೇ.12ರಷ್ಟು ವೆೇತನ ಪ್ರಮಾಣವನ್ನು ಹೆಚ್ಚಳ ಮಾಡುತ್ತಿದ್ದ ರೆನಾಲ್ಟ್ ಕಂಪನಿಯು ಈ ಬಾರಿ ಅಚ್ಚರಿ ಎಂಬಂತೆ ಶೇ.15ರಷ್ಟು ವೇತನವನ್ನು ಹೆಚ್ಚಿಸಿದ್ದು, ಉದ್ಯೋಗದ ಅಭ್ರದತೆಯಲ್ಲಿದ್ದ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದೆ.

ಲಾಕ್‌ಡೌನ್ ಸಂಕಷ್ಟ ಸಮಯದಲ್ಲೂ ಉದ್ಯೋಗಿಗಳ ವೇತನ ಹೆಚ್ಚಿಸಿದ ರೆನಾಲ್ಟ್

ಜೊತೆಗೆ 30ಕ್ಕೂ ಹೆಚ್ಚು ಉನ್ನತ ಅಧಿಕಾರಿಗಳಿಗೆ ಬಡ್ತಿ ನೀಡಿರುವ ರೆನಾಲ್ಟ್ ಇಂಡಿಯಾ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೆಳವಣಿಗೆ ಕಾಣುವ ಗುರಿಹೊಂದಿದ್ದು, ಕಳೆದ ವರ್ಷ ಪರಿಚಯಿಸಲಾದ ಹೊಸ ಕಾರು ಉತ್ಪನ್ನಗಳು ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಲಾಕ್‌ಡೌನ್ ಸಂಕಷ್ಟ ಸಮಯದಲ್ಲೂ ಉದ್ಯೋಗಿಗಳ ವೇತನ ಹೆಚ್ಚಿಸಿದ ರೆನಾಲ್ಟ್

ವಿಶೇಷ ವಿನ್ಯಾಸದ ಟ್ರೈಬರ್ ಮಿನಿ ಎಂಪಿವಿ ಮತ್ತು ಹೊಸ ಡಸ್ಟರ್ ಆವೃತ್ತಿಯು ರೆನಾಲ್ಟ್ ಕಾರು ಮಾರಾಟ ಪ್ರಮಾಣವನ್ನು ಮುಂಚೂಣಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಕಿಗರ್ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Renault India Hikes Employees’ Salary Upto 15%. Read in Kannada.
Story first published: Saturday, June 6, 2020, 21:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X