ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಹೊಸ ದಾಖಲೆ

ಭಾರತದಲ್ಲಿ ಜಂಟಿಯಾಗಿ ಕಾರು ಉತ್ಪಾದನೆ ಕೈಗೊಳ್ಳುತ್ತಿರುವ ರೆನಾಲ್ಟ್, ನಿಸ್ಸಾನ್ ಮತ್ತು ಅಂಗಸಂಸ್ಥೆಯಾದ ದಟ್ಸನ್ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಉತ್ಪಾದನೆ ಮಾಡಲಾದ ಕಾರುಗಳನ್ನು ವಿಶ್ವದ ಪ್ರಮುಖ ಮಾರುಕಟ್ಟೆಗೆ ರಫ್ತುಗೊಳಿಸುತ್ತಿದ್ದು, ಮೊದಲ ಬಾರಿಗೆ ಕಾರು ರಫ್ತು ಪ್ರಮಾಣದಲ್ಲಿ 1 ಮಿಲಿಯನ್(10 ಲಕ್ಷ) ಗುರಿಸಾಧನೆ ತಲುಪಿವೆ.

ಕಾರುಗಳ ರಫ್ತು ಪ್ರಮಾಣದಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಹೊಸ ದಾಖಲೆ

ನಿಸ್ಸಾನ್, ರೆನಾಲ್ಟ್ ಮತ್ತು ದಟ್ಸನ್ ಕಂಪನಿಗಳು ಜಂಟಿಯಾಗಿ ಚೆನ್ನೈ ಹೊರವಲಯದಲ್ಲಿರುವ ಒರಗಡಂ ಕಾರು ಉತ್ಪಾದನಾ ಘಟಕದಲ್ಲಿ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾದರಿಗಳ ಜೊತೆಗೆ ರಫ್ತು ಕಾರು ಮಾದರಿಗಳನ್ನು ಸಹ ಉತ್ಪಾದನೆ ಕೈಗೊಳ್ಳುತ್ತಿದ್ದು, ರಫ್ತು ಕಾರುಗಳ ಮಾದರಿಗಳಲ್ಲಿ ರೆನಾಲ್ಟ್ ಕ್ವಿಡ್ ಮತ್ತು ಟ್ರೈಬರ್, ನಿಸ್ಸಾನ್ ಸನ್ನಿ ಮತ್ತು ದಟ್ಸನ್ ಗೊ ಪ್ಲಸ್ ಕಾರು ಮಾದರಿಗಳು ಅಗ್ರಸ್ಥಾನದಲ್ಲಿವೆ.

ಕಾರುಗಳ ರಫ್ತು ಪ್ರಮಾಣದಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಹೊಸ ದಾಖಲೆ

ಕೈಗೆಟುಕುವ ಬೆಲೆಯೊಂದಿಗೆ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೊಂಡ ಕೆಲವೇ ತಿಂಗಳಿನಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ವಿದೇಶಿ ಮಾರುಕಟ್ಟೆಯಲ್ಲೂ ಕೂಡಾ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಕಾರುಗಳ ರಫ್ತು ಪ್ರಮಾಣದಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಹೊಸ ದಾಖಲೆ

ರಫ್ತು ಪ್ರಮಾಣದಲ್ಲಿನ ಏರಿಕೆಯಲ್ಲಿ ರೆನಾಲ್ಟ್ ಟ್ರೈಬರ್ ಕಾರು ಮಾದರಿಯು ಅಗ್ರಸ್ಥಾನ ಪಡೆದುಕೊಂಡಿದ್ದು, ಶೀಘ್ರದಲ್ಲೇ ಹೊಸ ಕಾರು ಮಾದರಿಗಳಾದ ಮ್ಯಾಗ್ನೈಟ್ ಮತ್ತು ಕಿಗರ್ ಆವೃತ್ತಿಗಳ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

ಕಾರುಗಳ ರಫ್ತು ಪ್ರಮಾಣದಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಹೊಸ ದಾಖಲೆ

ಬಜೆಟ್ ಬೆಲೆಯಲ್ಲಿ ಹಲವಾರು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿರುವ ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತನ್ನದೆ ಜನಪ್ರಿಯತೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಎರಡು ಕಂಪನಿಯು ಪ್ರತ್ಯೇಕವಾಗಿ ಎರಡು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿವೆ. ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ತಾಂತ್ರಿಕವಾಗಿ ಒಂದೇ ಮಾದರಿಯಾಗಿದ್ದು, ವಿನ್ಯಾಸ ಮತ್ತು ವಿವಿಧ ಫೀಚರ್ಸ್‌ಗಳೊಂದಿಗೆ ಅಭಿವೃದ್ದಿಗೊಂಡಿವೆ.

ಕಾರುಗಳ ರಫ್ತು ಪ್ರಮಾಣದಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಹೊಸ ದಾಖಲೆ

ಟ್ರೈಬರ್ ಮಿನಿ ಎಂಪಿವಿ ನಂತರ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸಿರುವ ರೆನಾಲ್ಟ್ ಕಂಪನಿಗೆ ಇದೀಗ ಮತ್ತೊಂದು ಬಲ ಎಂದರೆ ಅದು ಬಿಡುಗಡೆಗೆ ಸಿದ್ದವಾಗಿರುವ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಾರುಗಳ ರಫ್ತು ಪ್ರಮಾಣದಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಹೊಸ ದಾಖಲೆ

ಕಿಗರ್ ಕಾರು ಮಾದರಿಯು ರೆನಾಲ್ಟ್ ಕಾರು ಮಾರಾಟದ ದಿಕ್ಕನ್ನೇ ಬದಲಿಸುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಮುಂಬರುವ ಕೆಲವೇ ತಿಂಗಳಿನಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಿಗೆ ಭಾರೀ ಪ್ರಮಾಣದ ಬೇಡಿಕೆ ಹರಿದುಬರುತ್ತಿರುವುದೆ ಕಿಗರ್ ಕಾರಿನ ಮೇಲೆ ರೆನಾಲ್ಟ್ ಕಂಪನಿಯು ಹೆಚ್ಚು ನೀರಿಕ್ಷೆ ಇಟ್ಟುಕೊಂಡಿದೆ.

ಕಾರುಗಳ ರಫ್ತು ಪ್ರಮಾಣದಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಹೊಸ ದಾಖಲೆ

ಹಾಗೆಯೇ ನಿಸ್ಸಾನ್ ಕಂಪನಿಯು ಸಹ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಮ್ಯಾಗ್ನೈಟ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಈ ಕಾರು ಮುಂದಿನ ತಿಂಗಳು 5ಕ್ಕೆ ಬಿಡುಗಡೆಯಾಗಲಿಗದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕಾರುಗಳ ರಫ್ತು ಪ್ರಮಾಣದಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಹೊಸ ದಾಖಲೆ

ರೆನಾಲ್ಟ್ ಕಿಗರ್ ಕಾರು ಮಾದರಿಯು ಮ್ಯಾಗ್ನೈಟ್ ಬಿಡುಗಡೆಯಾದ ಕೆಲವು ತಿಂಗಳ ನಂತರ ಬಿಡುಗಡೆಯಾಗಲಿದ್ದು, ಎರಡು ಕಾರು ಮಾದರಿಗಳಲ್ಲೂ ಒಂದೇ ಮಾದರಿಯ ಎಂಜಿನ್ ಬಳಕೆ ಮಾಡಲಾಗಿದೆ. ಪ್ರೀಮಿಯಂ ಫೀಚರ್ಸ್‌ಗಳಲ್ಲಿ ಮಾತ್ರ ವಿಭಿನ್ನತೆ ಹೊಂದಿರುವ ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ಎಂಡ್ ಮಾದರಿಗಳು ರೂ.9.50 ಲಕ್ಷ ಬೆಲೆಯೊಳಗೆ ಬಿಡುಗಡೆಯಾಗಲಿವೆ.

Source: Rushlane

Most Read Articles

Kannada
English summary
Renault-Nissan Export Milestone: touches 1 million. Read in Kannada.
Story first published: Wednesday, November 25, 2020, 16:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X