ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಖ್ಯಾತ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಕಾರುಗಳ ಮೇಲೆ ವಿಶೇಷ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ. ರೆನಾಲ್ಟ್ ಇಂಡಿಯಾ ಕಂಪನಿಯು ವೈದ್ಯರು, ಶಿಕ್ಷಕರು ಸೇರಿದಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.

ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಕಂಪನಿಯು ಈ ವಿಶೇಷ ಕೊಡುಗೆಯಲ್ಲಿ ರೂ.22,000ಗಳ ಹೆಚ್ಚುವರಿ ರಿಯಾಯಿತಿಯನ್ನು ನೀಡಲಿದೆ. ರೆನಾಲ್ಟ್ ಕಂಪನಿಯು 1.3-ಲೀಟರ್ ಮಾದರಿಗಳ ಮೇಲೆ ರೂ.20,000ಗಳ ಲಾಯಲ್ಟಿ ಬೋನಸ್ ಹಾಗೂ ಡಸ್ಟರ್‌ ಕಾರಿನ ಮೇಲೆ ರೂ.70,000 ರಿಯಾಯಿತಿಯನ್ನು ನೀಡುತ್ತಿದೆ.

ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಇದರೊಂದಿಗೆ ಮೂರು ವರ್ಷ ಅಥವಾ 50,000 ಕಿ.ಮೀಗಳ ಈಸಿ ಮೆಂಟೆನೆನ್ಸ್ ಪ್ಯಾಕೇಜ್ ಅನ್ನು ಸಹ ಸೇರಿಸಲಾಗಿದೆ. ಕಂಪನಿಯು ತನ್ನ ರೆನಾಲ್ಟ್ ಕ್ವಿಡ್ ಮೇಲೆ ರೂ.40,000 ಹಾಗೂ ರೆನಾಲ್ಟ್ ಟ್ರೈಬರ್ ಮೇಲೆ ರೂ.30,000ಗಳ ರಿಯಾಯಿತಿ ನೀಡುತ್ತಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಈ ಯೋಜನೆಯು ಕೇಂದ್ರ ಸರ್ಕಾರವು ತನ್ನ ನೌಕರರಿಗೆ ನೀಡಿದ ಹಾಲಿಡೇ ಟ್ರಾವೆಲ್ ರಿಯಾಯಿತಿ (ಎಲ್‌ಟಿಸಿ) ವೋಚರ್ ಗಳಿಗೆ ಅನುಸಾರವಾಗಿ ಇದೆ ಎಂದು ರೆನಾಲ್ಟ್ ಇಂಡಿಯಾ ಹೇಳಿದೆ.

ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಹೆಚ್ಚುವರಿ ರಿಯಾಯಿತಿ ನಿಡುವುದರೊಂದಿಗೆ ಖರೀದಿದಾರರಿಗೆ ಹಣಕಾಸು ಆಯ್ಕೆಗಳನ್ನು ರೆನಾಲ್ಟ್ ಕಂಪನಿಯು ಪರಿಚಯಿಸಿದೆ. ಈ ಹಣಕಾಸು ಆಯ್ಕೆಯು ಕ್ವಿಡ್ ಹಾಗೂ ಟ್ರೈಬರ್ ಕಾರುಗಳನ್ನು ಒಳಗೊಂಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಈ ಹಣಕಾಸು ಯೋಜನೆಯಲ್ಲಿ ಕಂಪನಿಯು 3.99%ನಷ್ಟು ರಿಯಾಯಿತಿ ಬಡ್ಡಿದರವನ್ನು ನೀಡಲಿದೆ. ಗ್ರಾಹಕರು ಕಂಪನಿಯ ಡೀಲರ್ ಗಳನ್ನು ಭೇಟಿ ಮಾಡಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ರೆನಾಲ್ಟ್ ಕಂಪನಿ ಹೇಳಿದೆ.

ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಈ ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ, ಕಂಪನಿಯು ಇತ್ತೀಚೆಗಷ್ಟೇ ಕ್ವಿಡ್‌ನ ನಿಯೋಟೆಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.4.29 ಲಕ್ಷಗಳಾಗಿದೆ. ರೆನಾಲ್ಟ್ ಕಂಪನಿಯು ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಈ ಕಾರನ್ನು ಬಿಡುಗಡೆಗೊಳಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಈ ಕಾರಿನಲ್ಲಿ 0.8-ಲೀಟರ್ ಹಾಗೂ 1.0-ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. 0.8-ಲೀಟರ್ ಎಂಜಿನ್ 53 ಬಿಹೆಚ್‌ಪಿ ಪವರ್ ಹಾಗೂ 72 ಎನ್ಎಂ ಟಾರ್ಕ್ ಉತ್ಪಾದಿಸಿದರೆ, 1.0-ಲೀಟರ್ ಎಂಜಿನ್ 67 ಬಿಹೆಚ್‌ಪಿ ಪವರ್ ಹಾಗೂ 91 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Renault offers special discount for government employees. Read in Kannada.
Story first published: Thursday, October 22, 2020, 18:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X