ಕರೋನಾ ಅಬ್ಬರದ ನಂತರ ಚೇತರಿಕೆ ಹಾದಿಯಲ್ಲಿ ರೆನಾಲ್ಟ್ ಕಾರುಗಳ ಮಾರಾಟ

ಕರೋನಾ ವೈರಸ್‌ನಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ರೆನಾಲ್ಟ್ ಕಾರುಗಳ ಮಾರಾಟವು ಸಹ ಕಳೆದ ಮೇ ನಂತರ ಇದುವರೆಗೆ ಶೇ.79ರಷ್ಟು ಸುಧಾರಣೆ ಕಂಡುಬಂದಿದೆ.

ಕರೋನಾ ಅಬ್ಬರದ ನಂತರ ಚೇತರಿಕೆ ಹಾದಿಯಲ್ಲಿ ರೆನಾಲ್ಟ್ ಕಾರುಗಳ ಮಾರಾಟ

ರೆನಾಲ್ಟ್ ಕಂಪನಿಯು ಬಿಎಸ್-6 ಜಾರಿ ನಂತರ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆಯ ಹೊರತಾಗಿಯು ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಡೀಸೆಲ್ ಕಾರುಗಳ ಮಾರಾಟವು ಸಂಪೂರ್ಣವಾಗಿ ಸ್ಥಗಿತ ನಡುವೆಯೂ ಪೆಟ್ರೋಲ್ ಕಾರುಗಳ ಮಾರಾಟದಲ್ಲೇ ಭರ್ಜರಿ ಬೇಡಿಕೆ ಪಡೆದುಕೊಂಡಿದೆ. ಡೀಸೆಲ್ ವಾಹನಗಳ ಮಾರಾಟವಿದ್ದ ಸಂದರ್ಭದಲ್ಲೇ ಕಳೆದ ವರ್ಷದ ಜುಲೈ ಅವಧಿಯಲ್ಲಿ 3,600 ಕಾರುಗಳನ್ನು ಮಾರಾಟ ಮಾಡಿದ್ದ ರೆನಾಲ್ಟ್ ಕಂಪನಿಯು ಈ ವರ್ಷದ ಜುಲೈ ಅವಧಿಯಲ್ಲಿ 6,500 ಯುನಿಟ್ ಮಾರಾಟ ಮಾಡುವ ಮೂಲಕ ಶೇ.79ರಷ್ಟು ಬೆಳವಣಿಗೆ ಸಾಧಿಸಿದೆ.

ಕರೋನಾ ಅಬ್ಬರದ ನಂತರ ಚೇತರಿಕೆ ಹಾದಿಯಲ್ಲಿ ರೆನಾಲ್ಟ್ ಕಾರುಗಳ ಮಾರಾಟ

ಇನ್ನು ಕರೋನಾ ವೈರಸ್ ಪರಿಣಾಮ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟವು ಇದೀಗ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ವಾಹನ ಮಾರಾಟವು ಮೊದಲಿನ ಸ್ಥಿತಿಗೆ ಮರುಳುವ ವಿಶ್ವಾಸ ಆಟೋ ಕಂಪನಿಗಳಲ್ಲಿ ಬಲವಾಗಿದೆ.

ಕರೋನಾ ಅಬ್ಬರದ ನಂತರ ಚೇತರಿಕೆ ಹಾದಿಯಲ್ಲಿ ರೆನಾಲ್ಟ್ ಕಾರುಗಳ ಮಾರಾಟ

ಹೀಗಾಗಿ ಹೊಸ ವಾಹನ ಬಿಡುಗಡೆ ಪ್ರಕ್ರಿಯೆ ಜೋರಾಗುತ್ತಿದ್ದು, ಜೊತೆಗೆ ವಾಹನ ಮಾರಾಟ ಮಳಿಗೆಗಳ ಸಂಖ್ಯೆಯು ಹೆಚ್ಚುತ್ತಿದೆ. ವೈರಸ್ ಭೀತಿಯಿಂದಾಗಿ ಮತ್ತಷ್ಟು ವಾಹನಗಳು ಮಾರಾಟವಾಗಬಹುದಾದ ಲೆಕ್ಕಾಚಾರಗಳು ಶುರುವಾಗಿದ್ದು, ಸ್ವಂತ ವಾಹನ ಬಳಕೆಯು ಹೆಚ್ಚುತ್ತಿರುವುದು ಹೊಸ ವಾಹನ ಬಿಡುಗಡೆ ಪ್ರಕ್ರಿಯೆಗೆ ಮರುಜೀವ ಸಿಕ್ಕಂತಾಗಿದೆ.

ಕರೋನಾ ಅಬ್ಬರದ ನಂತರ ಚೇತರಿಕೆ ಹಾದಿಯಲ್ಲಿ ರೆನಾಲ್ಟ್ ಕಾರುಗಳ ಮಾರಾಟ

ಈ ಹಿನ್ನಲೆಯಲ್ಲಿ ಬಜೆಟ್ ಬೆಲೆಯ ಕಾರು ಮಾರಾಟ ಕಂಪನಿಯಾದ ರೆನಾಲ್ಟ್ ಕೂಡಾ ಹೊಸ ಯೋಜನೆಗಳನ್ನು ರೂಪಿಸಿದ್ದು, ಕಾರು ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ. ಭಾರತದಲ್ಲಿ ಕಳೆದ 4 ತಿಂಗಳಲ್ಲಿನಲ್ಲಿ ಬರೋಬ್ಬರಿ 17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳ ಜೊತೆಗೆ ಮತ್ತಷ್ಟು ಹೊಸ ಬಜೆಟ್ ಕಾರುಗಳ ಬಿಡುಗಡೆಗೆ ಸಿದ್ದವಾಗಿದೆ.

ಕರೋನಾ ಅಬ್ಬರದ ನಂತರ ಚೇತರಿಕೆ ಹಾದಿಯಲ್ಲಿ ರೆನಾಲ್ಟ್ ಕಾರುಗಳ ಮಾರಾಟ

ಎಂಟ್ರಿ ಲೆವಲ್ ಕಾರುಗಳ ಮೂಲಕ ಜನಪ್ರಿಯಗೊಂಡಿರುವ ಮಾರುತಿ ಸುಜುಕಿ ಕಂಪನಿಗೆ ಪೈಪೋಟಿ ನೀಡಲು ಮುಂದಾಗಿರುವ ರೆನಾಲ್ಟ್ ಕಂಪನಿಯು ಭಾರತದಲ್ಲಿ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಯೋಜನೆ ರೂಪಿಸಿದ್ದು, ಗ್ರಾಮೀಣ ವಿಭಾಗದ ಗ್ರಾಹಕರನ್ನು ಗುರಿಯಾಗಿಸಿ ಹೊಸ ಎಂಟ್ರಿ ಲೆವಲ್ ಕಾರುಗಳನ್ನು ರಸ್ತೆಗಿಳಿಸಲು ಮುಂದಾಗಿದೆ.

ಕರೋನಾ ಅಬ್ಬರದ ನಂತರ ಚೇತರಿಕೆ ಹಾದಿಯಲ್ಲಿ ರೆನಾಲ್ಟ್ ಕಾರುಗಳ ಮಾರಾಟ

ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಕಾರು ಮಾರಾಟ ಪ್ರಮಾಣವು ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದು, ಮಾಹಾನಗರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ವಿಭಾಗದಲ್ಲೂ ಕೂಡಾ ಕಾರು ಖರೀದಿಯ ಭರಾಟೆ ಜೋರಾಗುತ್ತಿದೆ. ಇದಕ್ಕಾಗಿ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಫ್ರೆಂಚ್ ಆಟೋ ಉತ್ಪಾದನಾ ಕಂಪನಿಯಾದ ರೆನಾಲ್ಟ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಎಂಟ್ರಿ ಲೆವಲ್ ಕಾರುಗಳ ಬಿಡುಗಡೆಗೆ ಮಾಡುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಕರೋನಾ ಅಬ್ಬರದ ನಂತರ ಚೇತರಿಕೆ ಹಾದಿಯಲ್ಲಿ ರೆನಾಲ್ಟ್ ಕಾರುಗಳ ಮಾರಾಟ

ಸದ್ಯ ಮಾರುಕಟ್ಟೆಯಲ್ಲಿ ಕ್ವಿಡ್, ಟ್ರೈಬರ್, ಡಸ್ಟರ್ ಮತ್ತು ಕ್ಯಾಪ್ಚರ್ ಕಾರುಗಳನ್ನು ಮಾರಾಟ ಮಾಡುತ್ತಿರುವ ರೆನಾಲ್ಟ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಜೆಟ್ ಬೆಲೆಯಲ್ಲಿಯೇ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಕರೋನಾ ಅಬ್ಬರದ ನಂತರ ಚೇತರಿಕೆ ಹಾದಿಯಲ್ಲಿ ರೆನಾಲ್ಟ್ ಕಾರುಗಳ ಮಾರಾಟ

ಇದಕ್ಕಾಗಿ ವಿವಿಧ ಹಂತದ ಮಾರುಕಟ್ಟೆ ಅಧ್ಯಯನ ನಡೆಸಿರುವ ರೆನಾಲ್ಟ್ ಕಂಪನಿಯು ಹೊಸ ಕಾರುಗಳ ಉತ್ಪನ್ನಗಳೊಂದಿಗೆ ಹೊಸದಾಗಿ 330 ಹೊಸ ಕಾರು ಮಾರಾಟ ಮಳಿಗೆಗಳನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತೆರೆಯಲು ಸಿದ್ದವಾಗಿವೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಕರೋನಾ ಅಬ್ಬರದ ನಂತರ ಚೇತರಿಕೆ ಹಾದಿಯಲ್ಲಿ ರೆನಾಲ್ಟ್ ಕಾರುಗಳ ಮಾರಾಟ

ಗ್ರಾಮೀಣ ವಿಭಾಗದ ಗ್ರಾಹಕರನ್ನೇ ಗುರಿಯಾಗಿಸಿ ವಿವಿಧ ಮಾದರಿಯ ಬಜೆಟ್ ಕಾರುಗಳನ್ನು ಸಿದ್ದಪಡಿಸುತ್ತಿರುವುದಾಗಿ ಸಂದರ್ಶನದೊಂದರಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಮಾರುತಿ ಸುಜುಕಿ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Renault Posted 79 Percentage Growth In UV Sales In Four Months. Read in Kannada.
Story first published: Thursday, August 20, 2020, 21:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X