ಸೆಪ್ಟೆಂಬರ್‌ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ರೆನಾಲ್ಟ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಇಂಡಿಯಾ 2020ರ ಸೆಪ್ಟೆಂಬರ್‌ ತಿಂಗಳ ಮಾರಾಟದ ವರದಿಯನ್ನು ಪ್ರಕಟಿಸಿದೆ. ರೆನಾಲ್ಟ್ ಕಂಪನಿಯು 2020ರ ಸೆಪ್ಟೆಂಬರ್‌ ತಿಂಗಳಲ್ಲಿ ಒಟ್ಟು 8,805 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಸೆಪ್ಟೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ರೆನಾಲ್ಟ್

2020ರ ಸೆಪ್ಟೆಂಬರ್‌ ತಿಂಗಳಲ್ಲಿ ರೆನಾಲ್ಟ್ ಕಂಪನಿಯ ಮಾರಾಟದಲ್ಲಿ ಶೇ.6 ರಷ್ಟು ಬೆಳವಣಿಗೆಯನ್ನು ಕಂಡಿದೆ. ಕ್ವಿಡ್ ಕಳೆದ ತಿಂಗಳು ಭಾರತದಲ್ಲಿ ಫ್ರೆಂಚ್ ಉತ್ಪಾದಕರಿಗೆ ಹೆಚ್ಚು ಮಾರಾಟವಾದ ಮಾದರಿಯಾಗಿ ಮುಂದುವರಿಯಿತು. 2020ರ ಸೆಪ್ಟೆಂಬರ್‌ ತಿಂಗಳಲ್ಲಿ ರೆನಾಲ್ಟ್ ಕ್ವಿಡ್ 4,513 ಯುನಿಟ್‌ಗಳು ಮಾರಾಟವಾಗಿವೆ. ರೆನಾಲ್ಟ್ ಕ್ವಿಡ್ ಮಾರಾಟದಲ್ಲಿ ಶೇ.52 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಸೆಪ್ಟೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ರೆನಾಲ್ಟ್

ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ರೆನಾಲ್ಟ್ ಟ್ರೈಬರ್ 4,710 ಯುನಿಟ್‌ಗಳು ಮಾರಾಟವಾಗಿತ್ತು. ಇನ್ನು ಈ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ರೆನಾಲ್ಟ್ ಟ್ರೈಬರ್ 4,159 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳ ಮಾರಟವನ್ನು ಈ ವರ್ಷದ ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ ಶೇ.12 ರಷ್ಟು ಕುಸಿತವಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸೆಪ್ಟೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ರೆನಾಲ್ಟ್

ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ರೆನಾಲ್ಟ್ ಡಸ್ಟರ್ 544 ಯುನಿಟ್‌ಗಳು ಮಾರಾಟವಾಗಿತ್ತು. ಆದರೆ ಈ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಒಟ್ಟು 133 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ ಈ ವರ್ಷ ಶೇ.76 ರಷ್ಟು ಕುಸಿತವಾಗಿದೆ.

ಸೆಪ್ಟೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ರೆನಾಲ್ಟ್

ಒಟ್ಟಾರೆಯಾಗಿ ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಕ್ವಿಡ್ ಮಾದರಿಯ ಕೊಡುಗೆ ಅಪಾರವಿದೆ. ರೆನಾಲ್ಟ್ ಕಂಪನಿಯು ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಕ್ವಿಡ್ ಕಾರಿನ ಹೊಸ ಸ್ಪೆಷಲ್ ಎಡಿಷನ್ ನಿಯೋಟೆಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಸಿತ್ತು.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸೆಪ್ಟೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ರೆನಾಲ್ಟ್

ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್‌ನ ಸ್ಪೆಷಲ್ ಎಡಿಷನ್ ಇಂಟಿರಿಯರ್ ನಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಸ್ಟೀಯರಿಂಗ್ ವ್ಹೀಲ್, ಟ್ರಿಮ್ ಸರೌಂಡ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸೀಟ್ ಅಪ್ಹೋಲ್ಸ್ಟರಿ ಸೇರಿವೆ.

ಸೆಪ್ಟೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ರೆನಾಲ್ಟ್

ಇನ್ನು ರೆನಾಲ್ಟ್ ಇಂಡಿಯಾ ಕಂಪನಿಯು ವೈದ್ಯರು, ಶಿಕ್ಷಕರು ಸೇರಿದಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಕಂಪನಿಯು ಈ ವಿಶೇಷ ಕೊಡುಗೆಯಲ್ಲಿ ರೂ.22,000ಗಳ ಹೆಚ್ಚುವರಿ ರಿಯಾಯಿತಿಯನ್ನು ನೀಡಲಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸೆಪ್ಟೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ರೆನಾಲ್ಟ್

ರೆನಾಲ್ಟ್ ಕಂಪನಿಯು 1.3-ಲೀಟರ್ ಮಾದರಿಗಳ ಮೇಲೆ ರೂ.20,000ಗಳ ಲಾಯಲ್ಟಿ ಬೋನಸ್ ಹಾಗೂ ಡಸ್ಟರ್‌ ಕಾರಿನ ಮೇಲೆ ರೂ.70,000 ರಿಯಾಯಿತಿಯನ್ನು ನೀಡುತ್ತಿದೆ. ಇದರೊಂದಿಗೆ ಮೂರು ವರ್ಷ ಅಥವಾ 50,000 ಕಿ.ಮೀಗಳ ಈಸಿ ಮೆಂಟೆನೆನ್ಸ್ ಪ್ಯಾಕೇಜ್ ಅನ್ನು ನೀಡಲಾಗುತ್ತಿದೆ.

ಸೆಪ್ಟೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ರೆನಾಲ್ಟ್

ಕಂಪನಿಯು ತನ್ನ ರೆನಾಲ್ಟ್ ಕ್ವಿಡ್ ಮೇಲೆ ರೂ.40,000 ಹಾಗೂ ರೆನಾಲ್ಟ್ ಟ್ರೈಬರ್ ಮೇಲೆ ರೂ.30,000ಗಳ ರಿಯಾಯಿತಿ ನೀಡುತ್ತಿದೆ. ಈ ಯೋಜನೆಯು ಕೇಂದ್ರ ಸರ್ಕಾರವು ತನ್ನ ನೌಕರರಿಗೆ ನೀಡಿದ ಹಾಲಿಡೇ ಟ್ರಾವೆಲ್ ರಿಯಾಯಿತಿ (ಎಲ್‌ಟಿಸಿ) ವೋಚರ್ ಗಳಿಗೆ ಅನುಸಾರವಾಗಿ ಇದೆ ಎಂದು ರೆನಾಲ್ಟ್ ಇಂಡಿಯಾ ಕಂಪನಿಯು ಹೇಳಿದೆ.

Most Read Articles

Kannada
English summary
Renault September 2020 Sales Analysis. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X