ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಮುಂಬರುವ ಏಪ್ರಿಲ್ 1ರಿಂದಲೇ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ರೆನಾಲ್ಟ್ ಸಂಸ್ಥೆಯು ತನ್ನ ಜನಪ್ರಿಯ ಮಿನಿ ಎಂಪಿವಿ ಆವೃತ್ತಿಯಾದ ಟ್ರೈಬರ್ ಹೊಸ ಕಾರನ್ನು ಬಿಡುಗಡೆ ಮಾಡಿದೆ.

ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಹೊಸ ಎಂಜಿನ್ ಪ್ರೇರಿತ ರೆನಾಲ್ಟ್ ಟ್ರೈಬರ್ ಆವೃತ್ತಿಯು ಬಿಎಸ್-6 ಎಂಜಿನ್ ಹೊರತುಪಡಿಸಿ ಉಳಿದೆಲ್ಲಾ ತಾಂತ್ರಿಕ ಅಂಶಗಳು ಬಿಎಸ್-4 ಮಾದರಿಯಲ್ಲಿರುವಂತೆ ಮುಂದುವರಿದಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ರೂ. 4.99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಆವೃತ್ತಿಯನ್ನು ರೂ.6.78 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹೊಸ ದರಗಳು ಬಿಎಸ್ ಮಾದರಿಯ ಬೆಲೆಗಿಂತ ಆರಂಭಿಕವಾಗಿ ರೂ.4 ಸಾವಿರ ಮತ್ತು ಟಾಪ್ ಎಂಡ್ ಬೆಲೆಯು ರೂ.15 ಸಾವಿರ ಹೆಚ್ಚುವರಿ ಬೆಲೆ ಪಡೆದಿವೆ.

ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಹೊಸ ಎಂಜಿನ್ ಪ್ರೇರಿತ ಟ್ರೈಬರ್ ಆವೃತ್ತಿಯಲ್ಲಿ ಈ ಹಿಂದಿನಂತಯೇ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನೇ ಮುಂದುವರಿಸಲಾಗಿದ್ದು, ಬಿಎಸ್-6 ನಿಯಮ ಅಳವಡಿಕೆ ನಂತರವು ಹೊಸ ಕಾರಿನ ಪರ್ಫಾಮೆನ್ಸ್‌ನಲ್ಲೂ ಯಾವುದೇ ಬದಲಾವಣೆಗಳಾಗಿಲ್ಲ.

ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಟ್ರೈಬರ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಟರ್ಬೋ ಪೆಟ್ರೋಲ್ ಎಂಜಿನ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಲಿದೆ.

ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಬಿಎಸ್-6 ಟ್ರೈಬರ್ ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್ ಬಿಎಸ್-6 ಎಂಜಿನ್ ಬೆಲೆ ಬಿಎಸ್-6 ಎಂಜಿನ್ ಬೆಲೆ ಹೆಚ್ಚಳವಾದ ದರ
ಆರ್‌ಎಕ್ಸ್ಇ ರೂ. 4.99 ಲಕ್ಷ ರೂ. 4.95 ಲಕ್ಷ ರೂ. 4,000
ಆರ್‌ಎಕ್ಸ್ಎಲ್ ರೂ. 5.74 ಲಕ್ಷ ರೂ. 5.59 ಲಕ್ಷ ರೂ. 15,000
ಆರ್‌ಎಕ್ಸ್‌ಟಿ ರೂ. 6.24 ಲಕ್ಷ ರೂ. 6.09 ಲಕ್ಷ ರೂ. 15,000
ಆರ್‌ಎಕ್ಸ್‌ಜೆಡ್ ರೂ. 6.78 ಲಕ್ಷ ರೂ. 6.63 ಲಕ್ಷ ರೂ. 15,000
ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಇನ್ನು ಕಳೆದ ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಗೊಂಡಿದ್ದ ಟ್ರೈಬರ್ ಎಂಪಿವಿ ಕಾರು ರೆನಾಲ್ಟ್ ನಿರ್ಮಾಣದ ಕಾರುಗಳ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ್ದು, ಕಾರು ಮಾರಾಟದಲ್ಲಿ ಹೆಚ್ಚು ಮಾರಾಟ ದಾಖಲಿಸಿರುವ ಮೂಲಕ ರೆನಾಲ್ಟ್ ಸಂಸ್ಥೆಯು ದೇಶದ 5ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ರೆನಾಲ್ಟ್ ಸಂಸ್ಥೆಯು ಫೇಸ್‌ಲಿಫ್ಟ್ ಕಾರುಗಳ ಚಾರ್ಸಿ ತಂತ್ರಜ್ಞಾನವನ್ನು ಸಂಪೂರ್ಣ ಬದಲಾವಣೆಗೊಳಿಸಿದ್ದು, ಫೇಸ್‌ಲಿಫ್ಟ್ ಕ್ವಿಡ್ ಮಾದರಿಯಲ್ಲೇ ಇದೀಗ ಟ್ರೈಬರ್ ಎಂಪಿವಿ ಕಾರು ಕೂಡಾ ಹೊಸ ತಂತ್ರಜ್ಞಾನದಡಿಯಲ್ಲೇ ಅಭಿವೃದ್ಧಿಗೊಳಿಸಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಈ ಮೂಲಕ ಎಂಟ್ರಿ ಲೆವಲ್ ಎಂಪಿವಿ ಕಾರುಗಳಲ್ಲಿ ವಿಭಿನ್ನ ಎನ್ನಿಸುವ ಹೊಸ ಕಾರು ತಾಂತ್ರಿಕವಾಗಿ ಬಲಿಷ್ಠವಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, ಪವರ್ ವಿಂಡೋ, ಕೀ ಲೆಸ್ ಎಂಟ್ರಿ, ಮೂರು ಸಾಲುಗಳಲ್ಲೂ ಎಸಿ ವೆಂಟ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮೊಬೈಲ್ ಫೋನ್ ಚಾರ್ಜ್ ಸಾಕೆಟ್‌ ಮತ್ತು ರಿಯರ್ ವಾಷ್ ವೈಪರ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಟ್ರೈಬರ್ ವೈಶಿಷ್ಟ್ಯತೆಗಳು

ಟ್ರೈಬರ್ ಕಾರು ಡ್ಯುಯಲ್ ಟೋನ್ ಇಂಟಿರಿಯರ್ ಜೋಡಣೆ ಹೊಂದಿದ್ದು, ಡ್ಯಾಶ್‌ಬೋರ್ಡ್ ಮೇಲೆ ಸಿಲ್ವರ್ ಟ್ರಿಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3.5-ಇಂಚಿನ ಮಲ್ಟಿ ಇನ್ಪಾಮೆಷನ್ ಡಿಸ್‌‌ಪ್ಲೇ, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯ ನೀಡಲಾಗಿದೆ.

ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಹಾಗೆಯೇ ಹೊಸ ಟ್ರೈಬರ್ ಕಾರಿನಲ್ಲಿ 15-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಜೋಡಿಸಲಾಗಿದ್ದು, ರೂಫ್ ರೈಲ್ಸ್, ಮ್ಯಾಟೆ ಬ್ಲ್ಯಾಕ್ ಕ್ಲ್ಯಾಡಿಂಗ್, ವೀಲ್ಹ್ ಆರ್ಚ್, ಸಿಗ್ನಲ್ ಇಂಡಿಕೇಟರ್, ರೀವರ್ಸ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಮನಸೆಳೆಯಲಿದ್ದು, ಒಟ್ಟು 5 ವಿವಿಧ ಆಕರ್ಷಕ ಬಣ್ಣಗಳಲ್ಲಿ(ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಫ್ಲೈರಿ ರೆಡ್, ಆರೇಂಜ್) ಖರೀದಿಗೆ ಲಭ್ಯವಿರಲಿದೆ.

ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಆಸನ ಸೌಲಭ್ಯ

7-ಸೀಟರ್ ಸೀಟರ್ ಮಾದರಿಯಾಗಿರುವ ಟ್ರೈಬರ್ ಕಾರು ದೂರದ ಪ್ರಯಾಣಕ್ಕೆ ಅಷ್ಟಾಗಿ ಅನುಕೂಲಕರವಾಗಿಲ್ಲವಾದರೂ 5 ಜನ ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದಾಗಿದ್ದು, 3ನೇ ಸಾಲಿನ ಆಸನಗಳನ್ನು ಮಡಿಕೆ ಮಾಡಿ ಲಗೇಜ್‌ಗಾಗಿ ಹೆಚ್ಚುವರಿ ಬೂಟ್ ಸ್ಪೆಸ್ ಅನುಕೂಲ ಮಾಡಿಕೊಳ್ಳಬಹುದು. ಹೀಗಾಗಿ ಮೂರನೇ ಸಾಲನ್ನು ಮಡಿಕೆ ಮಾಡಿದ್ದಲ್ಲಿ 625-ಲೀಟರ್‌ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದಾಗಿದ್ದು, ಬೇಡವಾದಲ್ಲಿ 84-ಲೀಟರ್‌ನಷ್ಟು ಸ್ಥಳಾವಕಾಶ ಸಿಗಲಿದೆ.

ಬಿಎಸ್-6 ಜಾರಿಗೆ ದಿನಗಣನೆ- ರೆನಾಲ್ಟ್ ಹೊಸ ಟ್ರೈಬರ್ ಬಿಡುಗಡೆ

ಸುರಕ್ಷಾ ಸೌಲಭ್ಯಗಳು

ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಟ್ರೈಬರ್ ಕಾರಿನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.

Most Read Articles

Kannada
English summary
Renault Triber BS6 Models Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X