ಟ್ರೈಬರ್‌ ಎಂಪಿವಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್

ಎಂಟ್ರಿ ಲೆವಲ್ ಎಂಪಿವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ರೆನಾಲ್ಟ್ ಟ್ರೈಬರ್ ಕಾರು ಮುಂದಿನ ವಾರ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಬಿಡುಗಡೆಯಾಗುತ್ತಿದ್ದು, ಹೊಸ ಕಾರಿನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಆವೃತ್ತಿ ಕೂಡಾ ಬಿಡುಗಡೆಯಾಗಲಿದೆ.

ಟ್ರೈಬರ್‌ ಎಂಪಿವಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್

ರೆನಾಲ್ಟ್ ಟ್ರೈಬರ್ ಕಾರು ಮಾದರಿಯು ಸದ್ಯ ಸಾಮಾನ್ಯ ಪೆಟ್ರೋಲ್ ಮ್ಯಾನುವಲ್ ಮಾದರಿಯಲ್ಲಿ ಮಾತ್ರವೇ ಮಾರಾಟವಾಗುತ್ತಿದ್ದು, ಶೀಘ್ರದಲ್ಲೇ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಳ್ಳಲಿದೆ. ಕಳೆದ ಅಗಸ್ಟ್ 28 ರಂದು ಬಿಡುಗಡೆಯಾಗಿದ್ದ ಟ್ರೈಬರ್ ಕಾರು 1.0-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಅಧಿಕ ಪರ್ಫಾಮೆನ್ಸ್ ನೀಡಬಲ್ಲ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಜೊತೆಗೆ ಆಟೋಮ್ಯಾಟಿಕ್ ಆವೃತ್ತಿಗಾಗಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದಾರೆ.

ಟ್ರೈಬರ್‌ ಎಂಪಿವಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್

1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಟ್ರೈಬರ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಟ್ರೈಬರ್‌ ಎಂಪಿವಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್

ಆದರೆ ಹೊಸದಾಗಿ ಪರಿಚಯಿಸಲಾಗುತ್ತಿರುವ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 95-ಬಿಎಚ್‌ಪಿ ಉತ್ಪಾದನಾ ಸಾಮಾರ್ಥ್ಯ ಹೊಂದಿದ್ದು, ಬೆಲೆಯಲ್ಲೂ ತುಸು ದುಬಾರಿಯಾಗಿರಲಿದೆ.

ಟ್ರೈಬರ್‌ ಎಂಪಿವಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್

ಇನ್ನು ಟ್ರೈಬರ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಎಸ್ ಮತ್ತು ಎರ್‌ಎಕ್ಸ್‌ಜೆಡ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.95 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು ರೂ. 6.49 ಲಕ್ಷ ಬೆಲೆ ಹೊಂದಿದೆ. ಇದೀಗ ಬಿಡುಗಡೆಯಾಗಲಿರುವ ಎಎಂಟಿ ಆವೃತ್ತಿಯು ತುಸು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದೆ.

ಟ್ರೈಬರ್‌ ಎಂಪಿವಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್

ಟ್ರೈಬರ್ ಕಾರು ಡ್ಯುಯಲ್ ಟೋನ್ ಇಂಟಿರಿಯರ್ ಜೋಡಣೆ ಹೊಂದಿದ್ದು, ಡ್ಯಾಶ್‌ಬೋರ್ಡ್ ಮೇಲೆ ಸಿಲ್ವರ್ ಟ್ರಿಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3.5-ಇಂಚಿನ ಮಲ್ಟಿ ಇನ್ಪಾಮೆಷನ್ ಡಿಸ್‌‌ಪ್ಲೇ, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯ ನೀಡಲಾಗಿದೆ.

ಟ್ರೈಬರ್‌ ಎಂಪಿವಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್

ಟ್ರೈಬರ್ ಕಾರಿನ ಟಾಪ್ ಎಂಡ್‌ನಲ್ಲಿ 15-ಇಂಚಿನ ಅಲಾಯ್ ವೀಲ್ಹ್‌ ಮತ್ತು ಇನ್ನುಳಿದ ಆವೃತ್ತಿಗಳಲ್ಲಿ 14-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಜೋಡಿಸಲಾಗಿದ್ದು, ರೂಫ್ ರೈಲ್ಸ್, ಮ್ಯಾಟೆ ಬ್ಲ್ಯಾಕ್ ಕ್ಲ್ಯಾಡಿಂಗ್, ವೀಲ್ಹ್ ಆರ್ಚ್, ಸಿಗ್ನಲ್ ಇಂಡಿಕೇಟರ್, ರೀವರ್ಸ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಮನಸೆಳೆಯಲಿದ್ದು, ಒಟ್ಟು 5 ವಿವಿಧ ಆಕರ್ಷಕ ಬಣ್ಣಗಳಲ್ಲಿ(ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಫ್ಲೈರಿ ರೆಡ್, ಆರೇಂಜ್) ಖರೀದಿಗೆ ಲಭ್ಯವಿರಲಿದೆ.

ಟ್ರೈಬರ್‌ ಎಂಪಿವಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್

7-ಸೀಟರ್ ಸೀಟರ್ ಮಾದರಿಯಾಗಿರುವ ಟ್ರೈಬರ್ ಕಾರು ದೂರದ ಪ್ರಯಾಣಕ್ಕೆ ಅಷ್ಟಾಗಿ ಅನುಕೂಲಕರವಾಗಿಲ್ಲವಾದರೂ 5 ಜನ ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದಾಗಿದ್ದು, 3ನೇ ಸಾಲಿನ ಆಸನಗಳನ್ನು ಮಡಿಕೆ ಮಾಡಿ ಲಗೇಜ್‌ಗಾಗಿ ಹೆಚ್ಚುವರಿ ಬೂಟ್ ಸ್ಪೆಸ್ ಅನುಕೂಲ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
Renault is planning to launch Triber with new petrol engine option in India very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X