ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಜರ್ಮನಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಇತ್ತೀಚೆಗೆ ಟಿ-ರಾಕ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿತು. ಹೊಸ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.19.99 ಲಕ್ಷಗಳಾಗಿದೆ.

ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಕಂಪನಿಯು ಸ್ಕೋಡಾ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆ ಅಡಿ ಈ ಟಿ-ರಾಕ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಿ-ರಾಕ್ ಎಸ್‍ಯುವಿಯಲ್ಲಿ ಐಷಾರಾಮಿ ಫೀಚರ್ಸ್ ಹೊಂದಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈ ಎಸ್‍‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಟಿ-ರಾಕ್ ಎಸ್‍ಯುವಿಯ ಯುನಿಟ್ ಗಳು ಡೀಲರ್ ಗಳ ಬಳಿ ತಲುಪಿದೆ.

ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಈ ಎಸ್‍ಯುವಿಯ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು. ಭಾರತದಲ್ಲಿ ಟಿ-ರಾಕ್ ಎಸ್‍ಯುವಿಯ 1,000 ಯು‍‍ನಿ‍‍ಟ್‍ಗಳನ್ನು ಬಿಡುಗಡೆಗೊಳಿಸಿದ್ದರು. ಕೇವಲ 40 ದಿನಗಳಲ್ಲಿ ಎಲ್ಲಾ ಯು‍‍ನಿ‍‍ಟ್‍ಗಳು ಮಾರಾಟವಾಗಿದೆ ಎಂಬ ವರದಿಗಳು ಪ್ರಕಟವಾಗಿವೆ.

MOST READ: ಹೊಸ ನಿವಸ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಎರಡನೇ ಹಂತದಲ್ಲಿ ಸಿಬಿಯು ಮೂಲಕ 2,500 ಯು‍‍ನಿ‍‍ಟ್‍ಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಲಾಕ್‌ಡೌನ್ ಜಾರಿಗೆ ಬರುವ ಮುನ್ನವೇ ಎಸ್‍ಯುವಿ ಮಾರಾಟವನ್ನು ಪ್ರಾರಂಭಿಸಿರುವುದರಿಂದ ಉತ್ತಮವಾಗಿ ಮಾರಾಟವಾಗುವುದಕ್ಕೆ ಕಾರಣವಾಯ್ತು ಎಂದು ಹೇಳಬಹುದು.

ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಈ ಹೊಸ ಟಿ-ರಾಕ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಎಸ್‍‍ಯುವಿಯು ಮುಂಭಾಗದಲ್ಲಿ ಸ್ಲೀಕ್ ಗ್ರಿಲ್ ಅನ್ನು ಹೊಂದಿದೆ. ಮುಂಭಾಗದ ಎರಡೂ ಬದಿಯಲ್ಲಿ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ಈ ಎಸ್‍‍ಯುವಿನ ಹೊಸ ಬಂಪರ್ ಅನ್ನು ಹೊಂದಿದ್ದು, ದೊಡ್ಡ ಮೆಡ್ ಗ್ರಿಲ್ ಏರ್ ಇನ್‍‍ಟೇಕ್ ಅನ್ನು ಹೊಂದಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಈ ಎಸ್‍‍ಯುವಿಯ ಮುಂಭಾಗದಲ್ಲಿ ಎಲ್‍ಇ‍ಡಿ ಡಿಆರ್‍ಎಲ್‍ಗಳನ್ನು ಸಹ ಅಳವಡಿಸಲಾಗಿದೆ. ಹೊಸ ಟಿ-ರಾಕ್ ಎಸ್‍‍ಯುವಿನಲ್ಲಿ 5 ಸ್ಪೋಕ್ ಅಲಾಯ್ ವ್ಹೀಲ್, ಹಿಂಭಾಗದಲ್ಲಿ ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಲೀಕ್ ಎಲ್‍ಇಡಿ ಟೈಲ್‍ ಲೈಟ್‍‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಬಂಪರ್ ಮತ್ತು ಸ್ಕಫ್ ಪ್ಲೇಟ್‍‍ಗಳನ್ನು ಹೊಂದಿದೆ.

ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಟಿ-ರಾಕ್ ಎಸ್‍‍ಯುವಿಯ ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದೆ. ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ.

MOST READ: ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಅನಾವರಣವಾಗಲಿದೆ ಜೀಪ್ ಕಂಪಾಸ್ ಫೇಸ್‌ಲಿಫ್ಟ್

ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಟಿ-ರಾಕ್ ಎಸ್‍‍ಯುವಿನಲ್ಲಿ 1.5-ಲೀಟರ್ 4 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 148 ಬಿ‍ಹೆಚ್‍ಪಿ ಪವರ್ ಮತ್ತು 250 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಅನ್ನು ಅಳವಡಿಸಲಾಗಿದೆ.

ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಈ ಎಸ್‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಕಿಯಾ ಸೆಲ್ಟೋಸ್ ಮತ್ತು ಸ್ಕೋಡಾ ಕರೋಕ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡಲಿದೆ. ಫೋಕ್ಸ್‌ವ್ಯಾಗನ್‍ನ ಹೊಸ ಟಿ-ರಾಕ್ ಮಾದರಿಯು ಮಿಡ್ ಎಸ್‍‍ಯುವಿ ಸೆಗ್‍‍ಮೆಂಟ್‍‍ ಆಗಿದೆ. ಟಿ-ರಾಕ್ ಎಸ್‍‍ಯುವಿಯು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಮಾರಾಟವಾಗುತ್ತಿದೆ.

Most Read Articles

Kannada
English summary
Volkswagen T-Roc sold out in India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X