Just In
- 6 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 8 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 9 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 10 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿ
ಜರ್ಮನಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್ವ್ಯಾಗನ್ ಇತ್ತೀಚೆಗೆ ಟಿ-ರಾಕ್ ಎಸ್ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿತು. ಹೊಸ ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.19.99 ಲಕ್ಷಗಳಾಗಿದೆ.
ಫೋಕ್ಸ್ವ್ಯಾಗನ್ ಕಂಪನಿಯು ಸ್ಕೋಡಾ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆ ಅಡಿ ಈ ಟಿ-ರಾಕ್ ಎಸ್ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಿ-ರಾಕ್ ಎಸ್ಯುವಿಯಲ್ಲಿ ಐಷಾರಾಮಿ ಫೀಚರ್ಸ್ ಹೊಂದಿದೆ. ಫೋಕ್ಸ್ವ್ಯಾಗನ್ ಕಂಪನಿಯು ಈ ಎಸ್ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಟಿ-ರಾಕ್ ಎಸ್ಯುವಿಯ ಯುನಿಟ್ ಗಳು ಡೀಲರ್ ಗಳ ಬಳಿ ತಲುಪಿದೆ.
ಈ ಎಸ್ಯುವಿಯ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು. ಭಾರತದಲ್ಲಿ ಟಿ-ರಾಕ್ ಎಸ್ಯುವಿಯ 1,000 ಯುನಿಟ್ಗಳನ್ನು ಬಿಡುಗಡೆಗೊಳಿಸಿದ್ದರು. ಕೇವಲ 40 ದಿನಗಳಲ್ಲಿ ಎಲ್ಲಾ ಯುನಿಟ್ಗಳು ಮಾರಾಟವಾಗಿದೆ ಎಂಬ ವರದಿಗಳು ಪ್ರಕಟವಾಗಿವೆ.
MOST READ: ಹೊಸ ನಿವಸ್ ಎಸ್ಯುವಿಯನ್ನು ಅನಾವರಣಗೊಳಿಸಿದ ಫೋಕ್ಸ್ವ್ಯಾಗನ್
ಇದೀಗ ಫೋಕ್ಸ್ವ್ಯಾಗನ್ ಕಂಪನಿಯು ಎರಡನೇ ಹಂತದಲ್ಲಿ ಸಿಬಿಯು ಮೂಲಕ 2,500 ಯುನಿಟ್ಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಲಾಕ್ಡೌನ್ ಜಾರಿಗೆ ಬರುವ ಮುನ್ನವೇ ಎಸ್ಯುವಿ ಮಾರಾಟವನ್ನು ಪ್ರಾರಂಭಿಸಿರುವುದರಿಂದ ಉತ್ತಮವಾಗಿ ಮಾರಾಟವಾಗುವುದಕ್ಕೆ ಕಾರಣವಾಯ್ತು ಎಂದು ಹೇಳಬಹುದು.
ಈ ಹೊಸ ಟಿ-ರಾಕ್ ಎಸ್ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಎಸ್ಯುವಿಯು ಮುಂಭಾಗದಲ್ಲಿ ಸ್ಲೀಕ್ ಗ್ರಿಲ್ ಅನ್ನು ಹೊಂದಿದೆ. ಮುಂಭಾಗದ ಎರಡೂ ಬದಿಯಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳನ್ನು ಅಳವಡಿಸಲಾಗಿದೆ. ಈ ಎಸ್ಯುವಿನ ಹೊಸ ಬಂಪರ್ ಅನ್ನು ಹೊಂದಿದ್ದು, ದೊಡ್ಡ ಮೆಡ್ ಗ್ರಿಲ್ ಏರ್ ಇನ್ಟೇಕ್ ಅನ್ನು ಹೊಂದಿದೆ.
MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ
ಈ ಎಸ್ಯುವಿಯ ಮುಂಭಾಗದಲ್ಲಿ ಎಲ್ಇಡಿ ಡಿಆರ್ಎಲ್ಗಳನ್ನು ಸಹ ಅಳವಡಿಸಲಾಗಿದೆ. ಹೊಸ ಟಿ-ರಾಕ್ ಎಸ್ಯುವಿನಲ್ಲಿ 5 ಸ್ಪೋಕ್ ಅಲಾಯ್ ವ್ಹೀಲ್, ಹಿಂಭಾಗದಲ್ಲಿ ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಲೀಕ್ ಎಲ್ಇಡಿ ಟೈಲ್ ಲೈಟ್ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಬಂಪರ್ ಮತ್ತು ಸ್ಕಫ್ ಪ್ಲೇಟ್ಗಳನ್ನು ಹೊಂದಿದೆ.
ಟಿ-ರಾಕ್ ಎಸ್ಯುವಿಯ ಪ್ರೀಮಿಯಂ ಫೀಚರ್ಸ್ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದೆ. ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್ಬ್ಯಾಗ್ಗಳು, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ.
MOST READ: ಹೊಸ ಟರ್ಬೋ ಪೆಟ್ರೋಲ್ ಎಂಜಿನ್ನೊಂದಿಗೆ ಅನಾವರಣವಾಗಲಿದೆ ಜೀಪ್ ಕಂಪಾಸ್ ಫೇಸ್ಲಿಫ್ಟ್
ಹೊಸ ಟಿ-ರಾಕ್ ಎಸ್ಯುವಿನಲ್ಲಿ 1.5-ಲೀಟರ್ 4 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 148 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ಅನ್ನು ಅಳವಡಿಸಲಾಗಿದೆ.
ಈ ಎಸ್ಯುವಿ ದೇಶಿಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಕಿಯಾ ಸೆಲ್ಟೋಸ್ ಮತ್ತು ಸ್ಕೋಡಾ ಕರೋಕ್ ಎಸ್ಯುವಿಗಳಿಗೆ ಪೈಪೋಟಿ ನೀಡಲಿದೆ. ಫೋಕ್ಸ್ವ್ಯಾಗನ್ನ ಹೊಸ ಟಿ-ರಾಕ್ ಮಾದರಿಯು ಮಿಡ್ ಎಸ್ಯುವಿ ಸೆಗ್ಮೆಂಟ್ ಆಗಿದೆ. ಟಿ-ರಾಕ್ ಎಸ್ಯುವಿಯು ಐಷಾರಾಮಿ ಫೀಚರ್ಸ್ಗಳೊಂದಿಗೆ ಪೆಟ್ರೋಲ್ ಎಂಜಿನ್ನಲ್ಲಿ ಮಾತ್ರವೇ ಮಾರಾಟವಾಗುತ್ತಿದೆ.