ಬಿಡುಗಡೆಯಾಯ್ತು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್

ರೋಲ್ಸ್ ರಾಯ್ಸ್ ಕಂಪನಿಯು 2018ರ ಮೇ ತಿಂಗಳಿನಲ್ಲಿ ತನ್ನ ಮೊದಲ ಎಸ್‍‍ಯುವಿಯಾದ ಕಲಿನನ್ ಅನ್ನು ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕಲಿನನ್ ಎಸ್‍‍‍ಯುವಿಯು ಅಲ್ಟ್ರಾ ಲಗ್ಷುರಿ ಕಾರು ಸೆಗ್‍‍ಮೆಂಟಿನಲ್ಲಿ ಹೆಚ್ಚು ಜನಪ್ರಿಯವಾಗಿತ್ತು.

ಬಿಡುಗಡೆಯಾಯ್ತು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್

ಬ್ರಿಟಿಷ್ ಮೂಲದ ರೋಲ್ಸ್ ರಾಯ್ಸ್ ಕಂಪನಿಯು ಈ ಎಸ್‍ಯುವಿಯನ್ನು 2018ರ ಕೊನೆಯ ವೇಳೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದಾಗ ಈ ಎಸ್‍‍ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.6.95 ಕೋಟಿಗಳಾಗಿತ್ತು.

ಬಿಡುಗಡೆಯಾಯ್ತು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್

ಈಗ ರೋಲ್ಸ್ ರಾಯ್ಸ್ ಕಂಪನಿಯು ಹೊಸ ಕಲಿನನ್ ಬ್ಲಾಕ್ ಬ್ಯಾಡ್ಜ್ ಎಡಿಷನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಕಲಿನನ್ ಎಸ್‍‍ಯುವಿಯ ಬೆಲೆ ರೂ.8.2 ಕೋಟಿಗಳಾಗಿದೆ. ಬ್ಲಾಕ್ ಬ್ಯಾಡ್ಜ್ ಎಸ್‍‍ಯುವಿಯನ್ನು ಕ್ಲಾಸ್‍‍ನ ಜೊತೆಗೆ ಸ್ಪೋರ್ಟಿನೆಸ್‍‍ಗೆ ಹೆಚ್ಚು ಆದ್ಯತೆ ನೀಡುವ ಯುವಜನತೆಯನ್ನು ಗುರಿಯಾಗಿಸಿಕೊಂಡು ಬಿಡುಗಡೆಗೊಳಿಸಲಾಗಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್

ಬ್ಲಾಕ್ ಬ್ಯಾಡ್ಜ್ ಆವೃತ್ತಿಯ ಕಾರುಗಳು ರೆಗ್ಯುಲರ್ ಸಿಲ್ವರ್ ಬ್ಯಾಡ್ಜ್ ಸರಣಿಯ ಡಿ ಕ್ರೋಮ್ ಆವೃತ್ತಿಗಳಾಗಿವೆ. ಈ ಆವೃತ್ತಿಯಲ್ಲಿ ಹಲವು ಬಣ್ಣಗಳು, ವ್ಹೀಲ್, ಅಪ್‍‍ಹೋಲೆಸ್ಟರಿಗಳಿವೆ. ಈ ಕಾರ್ ಅನ್ನು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

ಬಿಡುಗಡೆಯಾಯ್ತು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್

ಬಿಡುಗಡೆಯ ವೇಳೆಯಲ್ಲಿ ಈ ಕಾರ್ ಅನ್ನು ಖರೀದಿಸಲು ಆಸಕ್ತಿಯಿರುವವರೂ ಸಹ ಭಾಗವಹಿಸಿದ್ದರು. ವರದಿಗಳ ಪ್ರಕಾರ ಅವರು ಈ ಕಾರುಗಳನ್ನು ಬುಕ್ಕಿಂಗ್ ಮಾಡಿದ್ದಾರೆ. ರೋಲ್ಸ್ ರಾಯ್ಸ್ ಕಂಪನಿಯು ಈ ಕಲಿನನ್ ಕಾರ್ ಅನ್ನು ನಗರದ ಅತಿ ಹೆಚ್ಚು ಗಾಢ ಬಣ್ಣವೆಂದು ಹೇಳಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್

ಬ್ಲಾಕ್ ಬ್ಯಾಡ್ಜ್ ಕಾರಿನಲ್ಲಿರುವ ಎಂಜಿನ್ ಹಾಗೂ ಬಿಡಿಭಾಗಗಳು ರೆಗ್ಯುಲರ್ ಕಾರಿನಲ್ಲಿರುವಂತಿದ್ದರೂ ಇವುಗಳನ್ನು ರಿ ಎಂಜಿನಿಯರಿಂಗ್ ಮಾಡಲಾಗಿದೆ. ಕಲಿನನ್ ಬ್ಲಾಕ್ ಬ್ಯಾಡ್ಜ್ ಎಸ್‍‍ಯುವಿಯಲ್ಲಿಯೂ ಸಹ 6.75 ಲೀಟರಿನ ಟ್ವಿನ್ ಟರ್ಬೊ ವಿ 12 ಎಂಜಿನ್ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್

ಈ ದೊಡ್ಡ ಗಾತ್ರದ ಎಂಜಿನ್ 590 ಬಿ‍‍ಹೆಚ್‍‍ಪಿ ಪವರ್ ಹಾಗೂ 900 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಹೆಚ್‍ಎಫ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಟ್ರಾನ್ಸ್ ಮಿಷನ್ ಅನ್ನು ಹಲವು ಹೈ ಎಂಡ್ ಬಿ‍ಎಂ‍‍‍ಡಬ್ಲ್ಯು ಕಾರುಗಳಲ್ಲಿಯೂ ಕಾಣಬಹುದು.

ಬಿಡುಗಡೆಯಾಯ್ತು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್

ರೆಗ್ಯುಲರ್ ಕಲಿನನ್ ಎಸ್‍‍ಯುವಿಗಿಂತ ಈ ಬ್ಲಾಕ್ ಬ್ಯಾಡ್ಜ್ ಎಸ್‍‍ಯುವಿ 29 ಬಿಹೆಚ್‍‍ಪಿ ಪವರ್ ಹಾಗೂ 50 ಎನ್‍ಎಂ ಟಾರ್ಕ್ ಅನ್ನು ಹೆಚ್ಚು ಉತ್ಪಾದಿಸುತ್ತದೆ. ಕಲಿನನ್ ಎಲ್ಲಾ ನಾಲ್ಕು ವ್ಹೀಲ್‍‍ಗಳಿಗೆ ಪವರ್ ಕಳುಹಿಸುವ ರೋಲ್ಸ್ ರಾಯ್ಸ್ ಕಂಪನಿಯ ಮೊದಲ ವಾಹನವಾಗಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್

ರೋಲ್ಸ್ ರಾಯ್ಸ್ ಕಾರುಗಳನ್ನು ಬೇಕಾದ ರೀತಿಯಲ್ಲಿ ಕಸ್ಟಮೈಸ್ ಮಾಡಬಹುದಾಗಿದೆ. ರೋಲ್ಸ್ ರಾಯ್ಸ್ ಕಂಪನಿಯು ತನ್ನ ಗ್ರಾಹಕರಿಗೆ 44,000 ರೀತಿಯ ರೆಡಿ ಟು ವೇರ್ ಬಣ್ಣಗಳನ್ನು ನೀಡುತ್ತದೆ. ಇದರಿಂದ ಪ್ರಪಂಚದ ಯಾವುದೇ ಭಾಗದಲ್ಲಿರುವ ಗ್ರಾಹಕರು ತಮ್ಮ ಇಷ್ಟದ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಬಿಡುಗಡೆಯಾಯ್ತು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್

ಬ್ಲಾಕ್ ಬ್ಯಾಡ್ಜ್ ಯುನಿಟ್‍‍ಗಳಿಗೆ ಡಾರ್ಕ್ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂಬುದು ರೋಲ್ಸ್ ರಾಯ್ಸ್ ಕಂಪನಿಯ ಅಭಿಪ್ರಾಯವಾಗಿದೆ. ಕಲಿನನ್ ಕಾರ್ ಅನ್ನು ಸಾಮಾನ್ಯ ಜನರು ಕೊಳ್ಳುವುದು ಸಾಧ್ಯವಿಲ್ಲವಾದರೂ ಶ್ರೀಮಂತರು ನೀಡುವ ಹಣಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತದೆ.

Most Read Articles

Kannada
English summary
Rolls-Royce Cullinan Black Badge launched in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X