Just In
- 6 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 7 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 8 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 9 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಎಸ್-6 ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ
ರಾಯಲ್ ಎನ್ಫೀಲ್ಡ್ ಕಂಪನಿಯು ತನ್ನ ಕ್ಲಾಸಿಕ್ 350 ಬೈಕ್ ಅನ್ನು ಬಿಎಸ್ 6 ಎಂಜಿನ್ನೊಂದಿಗೆ ಇತ್ತೀಚಿಗೆ ಬಿಡುಗಡೆಗೊಳಿಸಿತ್ತು. ಇನ್ನು ರಾಯಲ್ ಎನ್ಫೀಲ್ಡ್ ಕಂಪನಿಯ ಜನಪ್ರಿಯ ಮಾದರಿಗಳಾದ ಥಂಡರ್ಬರ್ಡ್, ಬುಲೆಟ್, ಹಿಮಾಲಯನ್ ಮತ್ತು 650 ಟ್ವಿನ್ ಬೈಕ್ಗಳನ್ನು ಬಿಎಸ್-6 ಎಂಜಿನ್ನೊಂದಿಗೆ ಶೀಘ್ರದಲ್ಲೇ ಬಿಡುಗಡೆಗೊಳಿಸಲಿವೆ.
ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟೆರ್ 650 ಬಿಎಸ್-4 ಮಾದರಿಗಳ ಯುನಿಟ್ಗಳು ಎಲ್ಲಾ ಡೀಲರ್ಗಳ ಬಳಿ ಬಹುತೇಕ ಮಾರಾಟವಾಗಿದೆ. ಈ ಹಿನ್ನಲೆಯಲ್ಲಿ ಹೊಸ ಬಿಎಸ್-6 ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಬೈಕಿನ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಬಿಎಸ್-6 ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟೆರ್ 650 ಬೈಕ್ಗಾಗಿ ರೂ.10 ಸಾವಿರ ಪಾವತಿಸಿ ಬುಕ್ಕಿಂಗ್ ಅನ್ನು ಮಾಡಿಕೊಳ್ಳಬಹುದುದಾಗಿದೆ.ಆದರೆ ಕೆಲವು ವರದಿಗಳ ಪ್ರಕಾರ ಆಯ್ದ ಡೀಲರ್ಗಳ ಬಳಿ ಮಾತ್ರ ಬುಕ್ಕಿಂಗ್ ಪ್ರಾರಂಭವಾಗಿರುವುದು.
ಕಂಪನಿಯು ಬಿಎಸ್-6 ಇಂಟರ್ಸೆಪ್ಟೆರ್ 650 ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಹೊಸ ಬಿಎಸ್-6, ಇಂಟರ್ಸೆಪ್ಟೆರ್ 650 ಬೈಕಿನಲ್ಲಿ ಕಾಸ್ಮೆಟಿಕ್ ನವೀಕರಣಗಳನ್ನು ಮಾಡಿಲ್ಲವಾದರೂ, ರಾಯಲ್ ಎನ್ಫೀಲ್ಡ್ ಮಾಲೀಕರಿಗೆ ಬೇಕಾದರೆ ಡೀಲರ್ಗಳು ಮಾರ್ಪಾಡು ಮಾಡಿ ಕೊಡುತ್ತಾರೆಂಬ ನಿರೀಕ್ಷೆಗಳಿದೆ.
ಈ ಬೈಕಿನ ಇಂಜಿನ್ ಸಾಮರ್ಥ್ಯ ಮತ್ತು ಹಲವಾರು ವೈಶಿಷ್ಟ್ಯಗಳಿಂದ ಕೂಡಿರುವ ಕಾರಣ ದೇಶಿಯ ಮಾರುಕಟ್ಟೆ ಗ್ರಾಹಕರು ಈ ಬೈಕ್ಗೆ ಫಿದಾ ಆದರು. ಈ ಬೈಕ್ ಪ್ಯಾರೆಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.
ಇಂಟರ್ಸೆಪ್ಟೆರ್ 650 ಬೈಕ್ 649 ಸಿಸಿ ಏರ್/ಆಯಿಲ್ -ಕೂಲ್ಡ್ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಹೊಂದಿವೆ. ಈ ಎಂಜಿನ್ 47 ಬಿಹೆಚ್ಪಿ ಪವರ್ ಮತ್ತು 52 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಎಂಜಿನ್ನೊಂದಿಗೆ ಸ್ಟ್ಯಾಂಡರ್ಡ್ ಅಸಿಸ್ಟ್ ಕ್ಲಚ್ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ. ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟೆರ್ 650 ಬೈಕನ ಮೂಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿವೆ.
ಇಂಟರ್ಸೆಪ್ಟರ್ 650 ಬೈಕಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಕ್ರಮವಾಗಿ ರೂ.2.51 ಲಕ್ಷಗಳಾಗಿದೆ. ಈ ಬೈಕ್ ಆಧುನಿಕ ಕ್ಲಾಸಿಕ್ ಲುಕ್ ಅನ್ನು ಹೊಂದಿವೆ.
ಇಂಟರ್ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ. ಈ ಬೈಕ್ 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್, 650 ಟ್ವಿನ್ ಬೈಕ್ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ಗಳನ್ನು ಹೊಂದಿವೆ.
ರಾಯಲ್ ಎನ್ಫೀಲ್ಡ್ ಕಂಪನಿಯ ಹಳೆಯ ತಲೆಮಾರಿನ ಬೈಕ್ಗಳಾದ ದಿ ಕ್ಲಾಸಿಕ್, ಬುಲೆಟ್ ಮತ್ತು ಥಂಡರ್ ಬರ್ಡ್ ಇವುಗಳು ಹೊಸ ಅಲೆಯನ್ನು ಸೃಷ್ಟಿಸಿದ ಬೈಕ್ಗಳಾಗಿವೆ. ಕಂಪನಿಯು ಅದೇ ಹಳೆಯ ಪ್ರಸಿದ್ದಿಯನ್ನು ಪಡೆಯಲು ಏನಾದರೂ ಮಾಡಬೇಕಾಗಿದೆ ಎಂದು ಯೋಚಿಸಿ ಹೊಸ ಇಂಟರ್ಸೆಪ್ಟರ್ 650 ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲು ನಿರ್ಧರಿಸಿದೆ.