ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸೀಟ್ ಅರೊನಾ

ಸ್ಪ್ಯಾನಿಷ್ ಆಟೋ ಉತ್ಪಾದನಾ ಕಂಪನಿಯಾದ ಸೀಟ್ ತನ್ನ ಅರೊನಾ ಕಾರು ಮಾದರಿಯನ್ನು ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ಮೂಲಕ ಕುತೂಹಲ ಹುಟ್ಟುಹಾಕಿದ್ದು, ಹೊಸ ಕಾರು ಸ್ಕೋಡಾ ವಿಷನ್ ಐ ಅಥವಾ ಫೋರ್ಕ್ಸ್‌ವ್ಯಾಗನ್ ಟಿಗ್ವಾನ್ ಆಧರಿಸಿರಲಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸೀಟ್ ಅರೋರಾ

ಸೀಟ್ ಕಂಪನಿಯು ಯುರೋಪ್ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ಕೋಡಾ ಕೂಡಾ ಇದೀಗ ಭಾರತದಲ್ಲಿ ಫೋಕ್ಸ್‌ವ್ಯಾಗನ್ ಜೊತೆಗೂಡಿ ಹಲವು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಸೀಟ್ ಅರೊನಾ ಕಾರು ಭಾರತದಲ್ಲಿ ಬಿಡುಗಡೆಯಾಗುವುದು ಖಚಿತತೆ ಇಲ್ಲವಾದರೂ ಅರೋರಾ ಕಾರಿನ ವೈಶಿಷ್ಟ್ಯತೆಗಳನ್ನು ಆಧರಿಸಿ ಫೋಕ್ಸ್‌ವ್ಯಾಗನ್ ಟಿಗ್ವಾನ್ ಮತ್ತು ಸ್ಕೋಡಾ ವಿಷನ್ ಐ ಕಾರುಗಳನ್ನು ಸಿದ್ದಪಡಿಸಬಹುದಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸೀಟ್ ಅರೋರಾ

ಭಾರತದಲ್ಲಿ ರೋಡ್ ಟೆಸ್ಟಿಂಗ್ ನಡೆಸಲಾದ ಸೀಟ್ ಅರೊನಾ ಕಾರು ಲೆಫ್ಟ್ ಹ್ಯಾಂಡ್ ಡ್ರೈವ್ ಕಾರು ಮಾದರಿಯಾಗಿದ್ದು, ಹೊಸ ಕಾರನ್ನು ಭಾರತದಲ್ಲಿ ಯಾವುದೇ ಬದಲಾಣೆಗಳನ್ನು ಮಾಡದೆ ಮೂಲವಿನ್ಯಾಸದೊಂದಿಗೆ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸೀಟ್ ಅರೋರಾ

ಹೀಗಾಗಿ ಸೀಟ್ ಅರೋರಾ ಕಾರಿನ ವಿನ್ಯಾಸಗಳನ್ನು ಆಧರಿಸಿ ಸ್ಕೋಡಾ ವಿಷನ್ ಐ ಕಾರು ಅಥವಾ ಫೋಕ್ಸ್‌ವ್ಯಾಗನ್ ಟಿಗ್ವಾನ್ ಕಾರನ್ನು ಅಭಿವೃದ್ದಿಪಡಿಸುವ ಸಾಧ್ಯತೆಗಳಿದ್ದು, ಸೀಟ್ ಅರೊನಾ ಕಾರು ಕೂಡಾ ಫೋರ್ಕ್ಸ್‌ವ್ಯಾಗನ್ ಕಂಪನಿಯು ಎಂಕ್ಯೂಬಿ ಪ್ಲ್ಯಾಟ್‌ಫಾರ್ಮ್ ಆಧರಿಸಿಯೇ ಸಿದ್ದವಾದ ಕಾರು ಮಾದರಿಯಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸೀಟ್ ಅರೋರಾ

ಇದೀಗ ಫೋರ್ಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಬಿಡುಗಡೆ ಮಾಡಲಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಸೀಟ್ ಅರೊನಾ ಕಾರಿಗಿಂತಲೂ ವಿಭಿನ್ನವಾದ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದ್ದು, ತಾಂತ್ರಿಕ ಅಂಶಗಳನ್ನು ಸೀಟ್ ಅರೊನಾ ಮಾದರಿಯಲ್ಲೇ ಎರವಲು ಪಡೆದುಕೊಳ್ಳಲಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸೀಟ್ ಅರೋರಾ

ಸೀಟ್ ಅರೊನಾ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಕ್ರೂಸ್ ಕಂಟ್ರೋಲರ್, ಸ್ಪೀಡ್ ವಾರ್ನಿಂಗ್, ಹಿಲ್ ಸ್ಟಾರ್ಟ್ ಅಸಿಸ್ಟ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸರ್ಪೋಟ್ ಮಾಡಬಲ್ಲ 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಟಚ್ ಸ್ಕ್ರೀನ್ ಮಲ್ಟಿ ಇನ್ಪಾಮೆಷನ್ ಡಿಸ್‌ಪ್ಲೇ, ಟ್ವಿನ್ ಹಾಲೋಜೆನ್ ಹೆಡ್‌ಲೈಟ್ಸ್, ಎಲೆಕ್ಟ್ರಿಕ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್, ವೈರ್‌ಲೆಸ್ ಚಾರ್ಜಿಂಗ್, ಲೆದರ್ ಸೀಟುಗಳನ್ನು ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸೀಟ್ ಅರೋರಾ

ಹಾಗೆಯೇ ಗ್ಲೋಬಲ್ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೆಟಿಂಗ್ಸ್ ಪಡೆದುಕೊಂಡಿರುವ ಸೀಟ್ ಅರೊನಾ ಕಾರಿನಲ್ಲಿ ಹಲವಾರು ಸುರಕ್ಷಾ ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಈ ಆಧರಿಸಿದ್ದಲ್ಲಿ ಸ್ಕೋಡಾ ವಿಷನ್ ಐ ಮತ್ತು ಫೋಕ್ಸ್‌ವ್ಯಾಗನ್ ಟಿಗ್ವಾನ್ ಕೂಡಾ ಅತ್ಯುತ್ತಮ ಫೀಚರ್ಸ್ ಹೊಂದಿರಲಿವೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸೀಟ್ ಅರೋರಾ

ಮುಖ್ಯವಾಗಿ ಸೀಟ್ ಅರೊನಾ ಕಾರು 1.5-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 148-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದೇ ಎಂಜಿನ್ ಇದೀಗ ವಿಷನ್ ಐ ಮತ್ತು ಟಿಗ್ವಾನ್ ಎರಡರಲ್ಲೂ ಬಳಕೆ ಮಾಡುವ ಎಲ್ಲಾ ಸಾಧ್ಯತೆಗಳಿದ್ದು, 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಲಿವೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸೀಟ್ ಅರೋರಾ

ಸೀಟ್ ಅರೊನಾ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಬದಲು ಹೊಸ ಕಾರಿನಲ್ಲಿ ಫೀಚರ್ಸ್‌ಗಳ ಪ್ರೇರಣೆಯೊಂದಿಗೆ ಹೊಸ ಕಾರು ಮಾದರಿಗಳಾದ ಟಿಗ್ವಾನ್ ಮತ್ತು ವಿಷನ್ ಐ ಉತ್ಪಾದನೆಗಾಗಿ ಆಮದು ಮಾಡಿಕೊಂಡಿರುವ ಸಾಧ್ಯತೆಗಳಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ವಿಷನ್ ಐ ಮತ್ತು ಟಿಗ್ವಾನ್ ಕಾರುಗಳು ರಸ್ತೆಗಿಳಿಯಲು ಸಜ್ಜಾಗುತ್ತಿವೆ.

Most Read Articles

Kannada
English summary
Seat Arona Spotted Testing In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X