ಕಿಯಾ ಕಾರುಗಳಲ್ಲಿಯೇ ಕಡಿಮೆ ಬೆಲೆ ಹೊಂದಲಿದೆ ಈ ಎಲೆಕ್ಟ್ರಿಕ್ ಎಸ್‍ಯುವಿ

ಕಿಯಾ ಮೋಟಾರ್ಸ್ ಭಾರತದಲ್ಲಿ ಬಿಡುಗಡೆಗೊಳಿಸಿದ ಮೊದಲ ಎಸ್‍‍ಯುವಿಯಾದ ಸೆಲ್ಟೋಸ್ ಹೊಸ ಸಂಚಲನವನ್ನು ಮೂಡಿಸಿದೆ. ಕಿಯಾ ಸೆಲ್ಟೋಸ್ ಎಸ್‍‍ಯುವಿ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕಿಯಾ ಕಾರುಗಳಲ್ಲಿಯೇ ಕಡಿಮೆ ಬೆಲೆ ಹೊಂದಲಿದೆ ಈ ಎಲೆಕ್ಟ್ರಿಕ್ ಎಸ್‍ಯುವಿ

ಕಿಯಾ ಸೆಲ್ಟೋಸ್ ಎಸ್‍‍ಯುವಿ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‍‍ಗಳಿಂದ ಗ್ರಾಹಕರ ಗಮನಸೆಳೆದಿದೆ. ಈ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍ಯುವಿಯು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿ ಪ್ರಕಟವಾಗಿತ್ತು. ಮಾಹಿತಿಯ ಪ್ರಕಾರ ಕಿಯಾ ಸೆಲ್ಟೋಸ್ ಎಲೆಕ್ಟ್ರಿಕ್ ಎಸ್‍ಯುವಿಯು ಈ ವರ್ಷದ ಕೊನೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಿದೆ. ಸೆಲ್ಟೋಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಮೊದಲು ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿದೆ.

ಕಿಯಾ ಕಾರುಗಳಲ್ಲಿಯೇ ಕಡಿಮೆ ಬೆಲೆ ಹೊಂದಲಿದೆ ಈ ಎಲೆಕ್ಟ್ರಿಕ್ ಎಸ್‍ಯುವಿ

ನಂತರದಲ್ಲಿ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಬಹುದು. ಈ ಹೊಸ ಸೆಲ್ಟೋಸ್ ಇವಿಯನ್ನು ಹೊಸ ತಲೆಮಾರಿನ ಕಿಯಾ ಕೆಎಕ್ಸ್ 3 ಇವಿ ಎಂದು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಕಿಯಾ ಕಾರುಗಳಲ್ಲಿಯೇ ಕಡಿಮೆ ಬೆಲೆ ಹೊಂದಲಿದೆ ಈ ಎಲೆಕ್ಟ್ರಿಕ್ ಎಸ್‍ಯುವಿ

ಪ್ರಸ್ತುತ ತಲೆಮಾರಿನ ಕಿಯಾ ಕೆಎಕ್ಸ್ 3 ಇವಿ ಮಾದರಿಯಲ್ಲಿ 45.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಅನ್ನು ಅಳವಡಿಸಲಾಗಿದೆ. ಇದನ್ನು 11 ಬಿಹೆಚ್‌ಪಿ ಪವರ್ ಮತ್ತು 285 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲ್ಪಟ್ಟಿದೆ.

ಕಿಯಾ ಕಾರುಗಳಲ್ಲಿಯೇ ಕಡಿಮೆ ಬೆಲೆ ಹೊಂದಲಿದೆ ಈ ಎಲೆಕ್ಟ್ರಿಕ್ ಎಸ್‍ಯುವಿ

ಈ ಎಸ್‍ಯುವಿಯು ಒಂದೇ ಚಾರ್ಜ್‌ನಲ್ಲಿ 300 ಕಿ.ಮೀ ಚಲಿಸುತ್ತದೆ. ಈ ಎಸ್‍ಯುವಿಯು ಗಂಟೆಗೆ 150 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಚೀನಾದ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಸ್ಟ್ಯಾಂಡರ್ಡ್ ಮತ್ತು ಲಾಂಗ್-ರೇಂಜ್ ಎಂಬ ಎರಡು ರೂಪಾಂತರಗಳಲ್ಲಿ ಪರಿಚಯಿಸಬಹುದು ಎಂದು ವರದಿಯಲ್ಲಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಕಿಯಾ ಕಾರುಗಳಲ್ಲಿಯೇ ಕಡಿಮೆ ಬೆಲೆ ಹೊಂದಲಿದೆ ಈ ಎಲೆಕ್ಟ್ರಿಕ್ ಎಸ್‍ಯುವಿ

ಕಿಯಾ ಸೆಲ್ಟೋಸ್ ಇವಿ ಎಸ್‍ಯುವಿಯು ಕಂಪನಿಯ ಸರಣಿಯಲ್ಲಿ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಎಸ್‍ಯುವಿಯು ಆಗಿರಲಿದೆ. ಸಾಮಾನ್ಯ ಕಿಯಾ ಸೆಲ್ಟೋಸ್ ಎಸ್‍ಯುವಿಯಲ್ಲಿರುವಂತೆ ಹಲವು ಫೀಚರುಗಳನ್ನ್ನು ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಒಳಗೊಂಡಿರುತ್ತದೆ.

ಕಿಯಾ ಕಾರುಗಳಲ್ಲಿಯೇ ಕಡಿಮೆ ಬೆಲೆ ಹೊಂದಲಿದೆ ಈ ಎಲೆಕ್ಟ್ರಿಕ್ ಎಸ್‍ಯುವಿ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಿಯಾ ಸೆಲ್ಟೋಸ್‍ ಎಸ್‍‍ಯು‍ವಿಯನ್ನು ಬಿಎಸ್-6 ಎಂಜಿನ್‍‍ನ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 1.5 ಲೀಟರ್ ಪೆಟ್ರೋಲ್ , 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‍‍ಗಳು ಸೇರಿವೆ. ಎಸ್‍‍ಯು‍ವಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಕಿಯಾ ಕಾರುಗಳಲ್ಲಿಯೇ ಕಡಿಮೆ ಬೆಲೆ ಹೊಂದಲಿದೆ ಈ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನೂ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿವೆ.

ಕಿಯಾ ಕಾರುಗಳಲ್ಲಿಯೇ ಕಡಿಮೆ ಬೆಲೆ ಹೊಂದಲಿದೆ ಈ ಎಲೆಕ್ಟ್ರಿಕ್ ಎಸ್‍ಯುವಿ

ಚೀನಾ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆಯಾಗುವುದು ಖಚಿತವಾಗಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲವೆಂದು ವರದಿಯಾಗಿದೆ.

Most Read Articles

Kannada
English summary
Kia Seltos EV Will Be Brand’s Most Affordable Electric SUV. Read In Kannada.
Story first published: Tuesday, July 28, 2020, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X