ಬರಲಿದೆ ಹಲವು ವಾಹನಗಳಿಗೆ ಒಂದೇ ಮೋಟಾರು ವಿಮೆ

ವಿಮಾ ಕಂಪನಿಗಳು ಹಲವು ವಾಹನಗಳನ್ನು ಹೊಂದಿರುವ ವಾಹನ ಮಾಲೀಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿವೆ. ಹಲವು ವಾಹನಗಳಿಗೆ ಒಂದೇ ವಿಮೆಯನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಲು ವಿಮಾ ಕಂಪನಿಯೊಂದು ಮುಂದಾಗಿದೆ.

ಬರಲಿದೆ ಹಲವು ವಾಹನಗಳಿಗೆ ಒಂದೇ ಮೋಟಾರು ವಿಮೆ

ಎಕನಾಮಿಕ್ ಟೈಮ್ಸ್ ಆಟೋ ವರದಿಗಳ ಪ್ರಕಾರ, ತಮ್ಮ ಹೆಸರಿನಲ್ಲಿ ಹಲವು ವಾಹನಗಳನ್ನು ಹೊಂದಿರುವ ಜನರು ಈ ವಾಹನಗಳಿಗೆ ಹಲವು ವಿಮಾ ಪಾಲಿಸಿಗಳನ್ನು ಹೊಂದುವ ಬದಲು ಒಂದೇ ಪಾಲಿಸಿಯನ್ನು ಹೊಂದಲು ಅನುಕೂಲವಾಗಲಿದೆ.

ಬರಲಿದೆ ಹಲವು ವಾಹನಗಳಿಗೆ ಒಂದೇ ಮೋಟಾರು ವಿಮೆ

ಐಸಿ‍ಐ‍‍ಸಿ‍ಐ ಲೊಂಬಾರ್ಡ್ ಫ್ಲೋಟರ್ ಪಾಲಿಸಿ ಆಯ್ಕೆಯನ್ನು ನೀಡುತ್ತಿದೆ. ಇದರನ್ವಯ ಗ್ರಾಹಕರು ತಮ್ಮ ವಿಮೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚು ವಾಹನಗಳನ್ನು ಹೊಂದಿರುವ ಗ್ರಾಹಕರಿಗೆ ಈ ಆಯ್ಕೆಯನ್ನು ನೀಡಲಾಗುವುದು.

ಬರಲಿದೆ ಹಲವು ವಾಹನಗಳಿಗೆ ಒಂದೇ ಮೋಟಾರು ವಿಮೆ

ಐಸಿ‍ಐ‍‍ಸಿ‍ಐ ಲೊಂಬಾರ್ಡ್‍‍ನ ಒಂದು ವಿಮೆ, ಹಲವು ವಾಹನ ನೀತಿಯನ್ವಯ ಈ ಫ್ಲೋಟರ್ ಆಯ್ಕೆಯನ್ನು ನೀಡಲಾಗುತ್ತಿದೆ. ಇದೊಂದು ಆಪ್ ಆಧಾರಿತ ಸೇವೆಯಾಗಿದ್ದು, ಹಲವು ವಾಹನಗಳನ್ನು ಒಟ್ಟಿಗೆ ಲಿಂಕ್ ಮಾಡಿ, ಕವರೇಜ್ ನೀಡಲಿದೆ.

ಬರಲಿದೆ ಹಲವು ವಾಹನಗಳಿಗೆ ಒಂದೇ ಮೋಟಾರು ವಿಮೆ

ಇದರಿಂದಾಗಿ ತನ್ನ ಹೆಸರಿನಲ್ಲಿ ಹಲವು ವಾಹನಗಳನ್ನು ರಿಜಿಸ್ಟರ್ ಮಾಡಿರುವವರು ತಮ್ಮ ಹೆಸರಿನಲ್ಲಿ ಒಂದೇ ವಾಹನ ವಿಮೆಯನ್ನು ಹೊಂದಬಹುದು. ಈ ಫ್ಲೋಟರ್ ಆಯ್ಕೆಯನ್ನು ಈಗ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಹೊಂದಿರುವ ಕುಟುಂಬಗಳಿಗೆ ನೀಡಲಾಗುತ್ತಿದೆ.

ಬರಲಿದೆ ಹಲವು ವಾಹನಗಳಿಗೆ ಒಂದೇ ಮೋಟಾರು ವಿಮೆ

ಈ ಬಗ್ಗೆ ಮಾತನಾಡಿರುವ ಐಸಿ‍ಐ‍‍ಸಿ‍ಐ ಲೊಂಬಾರ್ಡ್‍‍ನ ಅಂಡರ್‍‍ರೈಟಿಂಗ್ ಮುಖ್ಯಸ್ಥರಾದ ಸಂಜಯ್ ದತ್ತಾರವರು ಈ ಫ್ಲೋಟರ್ ನೀತಿಯನ್ವಯ ಮೂರು ಅಥವಾ ನಾಲ್ಕು ಕಾರಿನ ವಾಹನಗಳ ವಿಮೆಯನ್ನು ಒಂದೇ ವಿಮೆಯಡಿ ತರಬಹುದೆಂದು ತಿಳಿಸಿದರು.

ಬರಲಿದೆ ಹಲವು ವಾಹನಗಳಿಗೆ ಒಂದೇ ಮೋಟಾರು ವಿಮೆ

ಇದರಿಂದಾಗಿ ಮೂರು ಕಾರುಗಳಿಗೆ ಒಂದೇ ವಿಮೆಯಿರಲಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ನಂತರ 6 ತಿಂಗಳವರೆಗೆ ಈ ಯೋಜನೆಯನ್ನು ಪರೀಕ್ಷಿಸಲಾಗುವುದು ಎಂದು ಅವರು ಹೇಳಿದರು.

ಬರಲಿದೆ ಹಲವು ವಾಹನಗಳಿಗೆ ಒಂದೇ ಮೋಟಾರು ವಿಮೆ

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಪ್ರಯೋಗವನ್ನು ಕೇವಲ 6 ತಿಂಗಳು ಜಾರಿಗೆ ತರಲಾಗುವುದು. ಈ ಅವಧಿಯಲ್ಲಿ ಯೋಜನೆಯು ಯಶಸ್ವಿಯಾದರೆ ಕಂಪನಿಗಳು ಈ ಯೋಜನೆಯನ್ನು ಆರು ತಿಂಗಳ ನಂತರ ಆರಂಭಿಸಲಿವೆ.

ಬರಲಿದೆ ಹಲವು ವಾಹನಗಳಿಗೆ ಒಂದೇ ಮೋಟಾರು ವಿಮೆ

ವಿಮಾ ಕಂಪನಿಗಳು ವಿಮೆಯ ಪ್ರೀಮಿಯಂ ಹಣವನ್ನು ಪಾವತಿಸಿಕೊಳ್ಳುವಾಗ ವಾಹನವು ತಯಾರಾದ ವರ್ಷ, ಮಾಡೆಲ್, ವಾಹನದ ಆಯಸ್ಸು, ಸ್ಥಳ, ಪಾಲಿಸಿಯ ಮೇಲೆ ಅನ್ವಯವಾಗುವ ನೋ ಕ್ಲೇಮ್ ಬೋನಸ್‍‍ಗಳನ್ನು ಪರಿಗಣಿಸುತ್ತವೆ.

ಬರಲಿದೆ ಹಲವು ವಾಹನಗಳಿಗೆ ಒಂದೇ ಮೋಟಾರು ವಿಮೆ

ಹೊಸ ಯೋಜನೆಯನ್ವಯ ವಾಹನ ಚಾಲಕನ ಡ್ರೈವಿಂಗ್ ಬಿಹೇವಿಯರ್‍‍ಗಳನ್ನು ಪರಿಗಣಿಸಲಾಗುವುದು. ರ್‍ಯಾಶ್ ಆಕ್ಸೆಲರೇಷನ್, ಹಾರ್ಡ್ ಬ್ರೇಕಿಂಗ್, ಸ್ಪೀಡ್, ಚಲಿಸಿರುವ ದೂರ ಇವುಗಳನ್ನು ಪರಿಗಣಿಸಿ ಪ್ರೀಮಿಯಂ ಹಣವನ್ನು ತೆಗೆದುಕೊಳ್ಳಲಾಗುವುದು. ಈ ಆಪ್ ವಾಹನ ಸವಾರರ ಡ್ರೈವಿಂಗ್ ಬಿಹೆವಿಯರ್ ಅನ್ನು ಮಾನಿಟರ್ ಮಾಡಲಿದೆ.

Most Read Articles

Kannada
English summary
Single Insurance Policy for multiple vehicles owned. Read in Kannada.
Story first published: Tuesday, January 21, 2020, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X