ಸ್ಕೋಡಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಸ್ಕೋಡಾ ಕಂಪನಿಯು ತನ್ನ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಎನ್ಯಾಕ್(ENYAQ) ಇವಿ ಕಾರನ್ನು ಮೊದಲ ಹಂತವಾಗಿ ಯುಕೆನಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಸ್ಕೋಡಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಯರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕ ಹೆಚ್ಚಿನ ಮಟ್ಟದ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿರುವುದೆ ಹಲವು ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಗೆ ಸಿದ್ದವಾಗಿದ್ದು, ಸ್ಕೋಡಾ ಕಂಪನಿಯು ಕೂಡಾ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಎನ್ಯಾಕ್ ಆವೃತ್ತಿಯನ್ನು 2021 ಆರಂಭದಲ್ಲಿ ಅಧಿಕೃತವಾಗಿ ಮಾರಾಟಗೊಳಿಸುವ ಸಿದ್ದತೆಯಲ್ಲಿದೆ.

ಸ್ಕೋಡಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಲಾಂಗ್ ವೀಲ್ಹ್ ಬೆಸ್‌ನೊಂದಿಗೆ ಕ್ರಾಸ್ ಓವರ್ ಎಸ್‌ಯುವಿ ಮಾದರಿಯಾಗಿ ಬಿಡುಗಡೆಗೊಳ್ಳಲಿರುವ ಹೊಸ ಎನ್ಯಾಕ್ ಎಲೆಕ್ಟ್ರಿಕ್ ಕಾರು ಮಾದರಿಯು ಯುಕೆನಲ್ಲಿ ಮಾತ್ರವಲ್ಲ ಭಾರತದಲ್ಲೂ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಚಾರ್ಜಿಂಗ್ ನಿಲ್ದಾಣಗಳ ಆಧಾರದ ವಿವಿಧ ಮಾರುಕಟ್ಟೆಗಳಿಗೆ ಪರಿಚಯಿಸಲಾಗುತ್ತಿದೆ.

ಸ್ಕೋಡಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಆಧುನಿಕ ತಂತ್ರಜ್ಞಾನ ಪ್ರೇರಿತ ಹಲವು ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಎನ್ಯಾಕ್ ಎಸ್‌ಯುವಿ ಕಾರು ಡೈನಾಮಿಕ್ ಡಿಸೈನ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಬ್ಯಾಟರಿ ಪ್ಯಾಕ್‌ನೊಂದಿಗೆ ಅತ್ಯುತ್ತಮ ಮೈಲೇಜ್ ಪ್ರೇರಣೆ ಹೊಂದಿದೆ.

ಸ್ಕೋಡಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಎಸ್‌ಯುವಿ ಕಾರುಗಳಲ್ಲೇ ಹೊಸ ಮಾದರಿಯ ವಿನ್ಯಾಸ ಹೊಂದಿರುವ ಎನ್ಯಾಕ್ ಕಾರು 4,648-ಎಂಎಂ ಉದ್ದ, 1,877-ಎಂಎಂ ಅಗಲ, 1,618-ಎಂಎಂ ಎತ್ತರದೊಂದಿಗೆ ಉತ್ತಮ ಒಳಾಂಗಣ ವಿನ್ಯಾಸ ಹೊಂದಿದ್ದು, ಹೊಸ ಕಾರು ಬ್ಯಾಟರಿ ಪ್ಯಾಕ್‌ಗೆ ಅನುಗುಣವಾಗಿ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದೆ.

ಸ್ಕೋಡಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಎನ್ಯಾಕ್ ಕಾರಿನಲ್ಲಿ 60 ಐವಿ, 80 ಐವಿ ಮತ್ತು 80ಎಕ್ಸ್ ಐವಿ ವೆರಿಯೆಂಟ್‌ಗಳಲ್ಲಿ ಬಿಡುಗಡೆಗೊಳ್ಳಲಿದ್ದು, 60ಐವಿ ಕಾರಿನಲ್ಲಿ 62kWh, 80 ಐವಿ ಕಾರಿನಲ್ಲಿ 82kWh ಮತ್ತು 80ಎಕ್ಸ್ ಐವಿ(ಆಲ್ ವೀಲ್ಹ್ ಡ್ರೈವ್) ಕಾರಿನಲ್ಲಿ 82kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಸ್ಕೋಡಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಎಲೆಕ್ಟ್ರಿಕ್ ಕಾರು ಪ್ರತಿ ಚಾರ್ಜ್‌ಗೆ ಆರಂಭಿಕ ಆವೃತ್ತಿಯು 389ಕಿ.ಮೀ, ಮಧ್ಯಮ ಕ್ರಮಾಂಕದ ಕಾರು ಮಾದರಿಯು 509 ಕಿ.ಮೀ ಮತ್ತು ಟಾಪ್ ಎಂಡ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 459ಕಿ.ಮೀ ಮೈಲೇಜ್ ರೇಂಜ್‌ನೊಂದಿಗೆ ಮೊದಲೆರಡು ಮಾದರಿಗಿಂತಲೂ ಉತ್ತಮ ಪರ್ಫಾಮೆನ್ಸ್ ಹೊಂದಿದೆ.

ಸ್ಕೋಡಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 179ಕಿ.ಮೀ ಸಿಮಿತಗೊಳಿಸಲಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಕೇವಲ 38 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಪಡೆದುಕೊಳ್ಳಬಹುದಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಸ್ಕೋಡಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಎನ್ಯಾಕ್ ಕಾರು ಬ್ಯಾಟರಿ ಸಾಮರ್ಥ್ಯ ಮತ್ತು ಐಷಾರಾಮಿ ಫೀಚರ್ಸ್‌ಗಳಿಗೆ ಅನುಗುಣವಾಗಿ ಹೊಸ ಕಾರು ಆರಂಭಿಕವಾಗಿ ಭಾರತೀಯ ಮಾರುಕಟ್ಟೆಯಲ್ಲಿ ರೂ.32 ಲಕ್ಷದಿಂದ ರೂ. 36 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Announces The Launch Of Enyaq iV SUV For UK. Read in Kannada.
Story first published: Friday, November 27, 2020, 21:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X