ಭಾರತದಿಂದ 5 ಲಕ್ಷ ಕಾರು ರಫ್ತು ಗುರಿ ತಲುಪಿದ ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್

ಜಾಗತಿಕ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಕಾರು ಉತ್ಪಾದನಾ ಕಾರು ಕಂಪನಿಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಸ್ಕೋಡಾ ಆಟೋ ಸಹಭಾಗೀತ್ವದಲ್ಲಿ ಕಾರುಗಳ ಅಭಿವೃದ್ದಿಗೆ ಚಾಲನೆ ನೀಡಿದ್ದು, ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ಭಾರತದಿಂದಲೇ ಭಾರೀ ಪ್ರಮಾಣದ ಕಾರುಗಳನ್ನು ರಫ್ತು ಕೈಗೊಳ್ಳುತ್ತಿವೆ.

ಭಾರತದಿಂದ 5 ಲಕ್ಷ ಕಾರು ರಫ್ತು ಗುರಿ ತಲುಪಿದ ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್

ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಭಾರತದಿಂದ ಇದುವರೆಗೆ ಬರೋಬ್ಬರಿ 5 ಲಕ್ಷ ಕಾರುಗಳನ್ನು ವಿಶ್ವದ ರಾಷ್ಟ್ರಗಳಿಗೆ ರಫ್ತು ಕೈಗೊಂಡಿದ್ದು, ಇತ್ತೀಚೆಗೆ ಫೋಕ್ಸ್‌ವ್ಯಾಗನ್ ವೆಂಟೊ ರಫ್ತುಗೊಳಿಸುವ ಮೂಲಕ 5 ಲಕ್ಷ ಯುನಿಟ್ ರಫ್ತು ಗುರಿ ತಲುಪಲಾಯ್ತು. ಭಾರತದಲ್ಲೇ ಪೂರ್ಣಪ್ರಮಾಣದಲ್ಲಿ ಸಿದ್ದಗೊಂಡಿರುವ ರಫ್ತು ಕಾರು ಮಾದರಿಗಳು ಮೇಕ್ ಇನ್ ಇಂಡಿಯಾ ಭಾಗವಾಗಿ ಅಭಿವೃದ್ದಿಗೊಂಡಿದ್ದು, ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಪ್ರಸಕ್ತ ವರ್ಷ ಸುಮಾರು 25 ಸಾವಿರ ಕಾರುಗಳನ್ನು ರಫ್ತುಗೊಳಿಸಿವೆ.

ಭಾರತದಿಂದ 5 ಲಕ್ಷ ಕಾರು ರಫ್ತು ಗುರಿ ತಲುಪಿದ ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್

ಪುಣೆಯಲ್ಲಿರುವ ಚಾಕನ್ ಕಾರು ಉತ್ಪಾದನಾ ಘಟಕದಲ್ಲೇ ರಫ್ತು ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದ್ದು, ಫೋಕ್ಸ್‌ವ್ಯಾಗನ್ ಕಾರುಗಳನ್ನು ಸ್ಕೋಡಾ ಕಂಪನಿಯು ಎಂಕ್ಯೂಬಿ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳಿಸಲಾಗುತ್ತಿದೆ.

ಭಾರತದಿಂದ 5 ಲಕ್ಷ ಕಾರು ರಫ್ತು ಗುರಿ ತಲುಪಿದ ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್

ಭಾರತದಲ್ಲಿ ಕಾರು ಉತ್ಪಾದನೆ ಹೊಣೆಯನ್ನು ಸ್ಕೋಡಾ ಕಂಪನಿಗೆ ವಹಿಸಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಸುಮಾರು 65 ರಾಷ್ಟ್ರಗಳಿಗೆ ಇಲ್ಲಿಂದಲೇ ಕಾರುಗಳನ್ನು ಪೂರೈಕೆ ಮಾಡುತ್ತಿದ್ದು, ದಕ್ಷಿಣ ಅಮೆರಿಕಾ, ಮಧ್ಯ ಅಮೆರಿಕಾ, ದಕ್ಷಿಣ ಆಫ್ರಿಕಾ, ಮಧ್ಯ ಪ್ರಾಚ್ಯ ರಾಷ್ಟ್ರಗಳು ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಮೇಡ್ ಇನ್ ಇಂಡಿಯಾ ಕಾರುಗಳು ಮಾರಾಟಗೊಳ್ಳುತ್ತಿವೆ.

ಭಾರತದಿಂದ 5 ಲಕ್ಷ ಕಾರು ರಫ್ತು ಗುರಿ ತಲುಪಿದ ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್

ಇನ್ನು ಜರ್ಮನ್ ಕಾರು ಉತ್ಪಾದನಾ ಕಂಪನಿಯಾದ ಫೋಕ್ಸ್‌ವ್ಯಾಗನ್ ಡೀಸೆಲ್ ವಾಹನಗಳ ಮಾರಾಟ ಹಗರಣ ನಂತರ ಹೊಸ ವಾಹನ ಮಾದರಿಗಳ ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸಿರುವುದಲ್ಲದೆ ತನ್ನ ಅಧೀನದಲ್ಲಿರುವ ಕಾರು ಮಾರಾಟ ಕಂಪನಿಗಳಾದ ಸ್ಕೋಡಾ, ಆಡಿ, ಫೋರ್ಸೆ ಕಾರುಗಳ ಮಾರಾಟದಲ್ಲೂ ಮಹತ್ವದ ಬದಲಾವಣೆ ತಂದಿದೆ.

ಭಾರತದಿಂದ 5 ಲಕ್ಷ ಕಾರು ರಫ್ತು ಗುರಿ ತಲುಪಿದ ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್

ಹೊಸ ಎಮಿಷನ್‌ ಪ್ರಕಾರ ಹಲವು ಕಾರು ಮಾದರಿಗಳಲ್ಲಿ ಈಗಾಗಲೇ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಪೆಟ್ರೋಲ್ ಎಂಜಿನ್‌ಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಭಾರತದಿಂದ 5 ಲಕ್ಷ ಕಾರು ರಫ್ತು ಗುರಿ ತಲುಪಿದ ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್

ಮಾಲಿನ್ಯ ತಡೆಗಾಗಿ ಯುರೋಪಿನಲ್ಲಿ ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಪ್ರಮುಖ ಆಟೋ ಕಂಪನಿಗಳು ಸಂಪೂರ್ಣವಾಗಿ ಡೀಸೆಲ್ ಎಂಜಿನ್ ಮಾರಾಟವನ್ನು ಸ್ಥಗಿತಗೊಳಿಸಿ ಪೂರ್ಣಪ್ರಮಾಣದ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡಿವೆ.

ಭಾರತದಿಂದ 5 ಲಕ್ಷ ಕಾರು ರಫ್ತು ಗುರಿ ತಲುಪಿದ ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್

ಯುರೋಪ್ ಮಾರುಕಟ್ಟೆಯಲ್ಲಿನ ಬದಲಾವಣೆ ನಂತರ ಇದೀಗ ಭಾರತದಲ್ಲೂ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿರುವ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಮಾತ್ರವಲ್ಲದೆ ಅಧೀನ ಕಾರು ಕಂಪನಿಗಳ ಪ್ರಮುಖ ವಾಹನಗಳಲ್ಲಿ ಡೀಸೆಲ್ ಎಂಜಿನ್ ತೆಗೆದುಹಾಕಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಭಾರತದಿಂದ 5 ಲಕ್ಷ ಕಾರು ರಫ್ತು ಗುರಿ ತಲುಪಿದ ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್

ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ ಪರಿಣಾಮ ಅದಕ್ಕೆ ಪರ್ಯಾಯವಾಗಿ ಪೆಟ್ರೋಲ್ ಎಂಜಿನ್‌ಗಳ ಮಾರಾಟವನ್ನು ಹೆಚ್ಚಿಸಲಾಗುತ್ತಿದ್ದು, ಶೀಘ್ರದಲ್ಲೇ ಫೋಕ್ಸ್‌ವ್ಯಾಗನ್, ಸ್ಕೋಡಾ, ಆಡಿ ಮತ್ತು ಫೋರ್ಸೆ ಕಾರುಗಳಲ್ಲಿ ಮತ್ತಷ್ಟು ಹೊಸ ಪೆಟ್ರೋಲ್ ಎಂಜಿನ್ ಆಯ್ಕೆಗಳು ಲಭ್ಯವಾಗಲಿವೆ.

Most Read Articles

Kannada
English summary
Skoda Auto VW India exports 500,000th Made-in-India car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X