ಸೆಪ್ಟೆಂಬರ್ 1ಕ್ಕೆ ಅನಾವರಣಗೊಳ್ಳಲಿದೆ ಸ್ಕೋಡಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರು

ಫೋಕ್ಸ್‌ವ್ಯಾಗನ್ ಜೊತೆಗೂಡಿ ಹಲವು ಹೊಸ ಕಾರು ಉತ್ಪಾದನಾ ಯೋಜನೆಗಳಿಗೆ ಚಾಲನೆ ನೀಡಿರುವ ಸ್ಕೋಡಾ ಕಂಪನಿಯು ಶೀಘ್ರದಲ್ಲೇ ವಿವಿಧ ಮಾದರಿಯ ಸಾಮಾನ್ಯ ಕಾರುಗಳ ಜೊತೆ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಸೆ.1ಕ್ಕೆ ಅನಾವರಣಗೊಳ್ಳಲಿದೆ ಸ್ಕೋಡಾ ನಿರ್ಮಾಣದ ಮೊದಲ ಇವಿ ಕಾರು

ಫೋಕ್ಸ್‌ವ್ಯಾಗನ್ ಜೊತೆಗೂಡಿ ಇಂಡಿಯಾ 2.0 ಪ್ರೋಜೆಕ್ಟ್ ಯೋಜನೆಗೆ ಚಾಲನೆ ನೀಡಿರುವ ಸ್ಕೋಡಾ ಕಂಪನಿಯು ವಿವಿಧ ಮಾದರಿಯ ಹೊಸ ಕಾರುಗಳ ನಿರ್ಮಾಣದ ಹೆಚ್ಚು ಹೂಡಿಕೆ ಮಾಡುತ್ತಿದ್ದು, ಸಾಮಾನ್ಯ ಕಾರುಗಳನ್ನು ಮಾತ್ರವಲ್ಲದೇ ಎಲೆಕ್ಟ್ರಿಕ್ ಕಾರು ಆವೃತ್ತಿಗಳ ಮೇಲೂ ಗಮನಹರಿಸಿದೆ. ಈ ಸಂಬಂಧ ಗ್ರಾಹಕರ ಅಭಿರುಚಿಗಳನ್ನು ತಿಳಿಯಲು ಮಾರುಕಟ್ಟೆ ಅಧ್ಯಯನಕ್ಕೂ ಚಾಲನೆ ನೀಡಿರುವ ಸ್ಕೋಡಾ ಕಂಪನಿಯು ಬಜೆಟ್ ಇವಿ ಕಾರುಗಳನ್ನು ಮಾತ್ರವಲ್ಲದೇ ಲೈಫ್‌ಸ್ಪೈಲ್ ಮಾದರಿಗಳನ್ನು ಸಹ ಬಿಡುಗಡೆ ಮಾಡಲಿದೆ.

ಸೆ.1ಕ್ಕೆ ಅನಾವರಣಗೊಳ್ಳಲಿದೆ ಸ್ಕೋಡಾ ನಿರ್ಮಾಣದ ಮೊದಲ ಇವಿ ಕಾರು

ಯುರೋಪ್ ಮಾರುಕಟ್ಟೆಗಾಗಿ ಈಗಾಗಲೇ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯ ಬಿಡುಗಡೆಯ ಕುರಿತಂತೆ ನೆಮ್ ಪ್ಲೇಟ್ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಸೆಡಾನ್ ಮತ್ತು ಎಸ್‌ಯುವಿ ಮಾದರಿಯೊಂದನ್ನು ಎಲೆಕ್ಟ್ರಿಕ್ ಮಾದರಿಯಾಗಿ ಬಿಡುಗಡೆ ಮಾಡುತ್ತಿದೆ.

ಸೆ.1ಕ್ಕೆ ಅನಾವರಣಗೊಳ್ಳಲಿದೆ ಸ್ಕೋಡಾ ನಿರ್ಮಾಣದ ಮೊದಲ ಇವಿ ಕಾರು

ಹೊಸ ಕಾರು ಎನ್ಯಾಕ್(ENYAQ) ಎನ್ನುವ ಹೆಸರಿನೊಂದಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಲಾಂಗ್ ವೀಲ್ಹ್ ಬೆಸ್‌ನೊಂದಿಗೆ ಕ್ರಾಸ್ ಓವರ್ ಎಸ್‌ಯುವಿ ಮಾದರಿಯಾಗಿ ಬಿಡುಗಡೆಗೊಳ್ಳಲಿದೆ.

ಸೆ.1ಕ್ಕೆ ಅನಾವರಣಗೊಳ್ಳಲಿದೆ ಸ್ಕೋಡಾ ನಿರ್ಮಾಣದ ಮೊದಲ ಇವಿ ಕಾರು

ಸದ್ಯ ಕಾನ್ಸೆಪ್ಟ್ ಮಾದರಿಯನ್ನು ಮಾತ್ರ ಸಿದ್ದಪಡಿಸಿರುವ ಸ್ಕೋಡಾ ಕಂಪನಿಯು ಮುಂಬರುವ ಸೆಪ್ಟೆಂಬರ್ 1ಕ್ಕೆ ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಪ್ರದರ್ಶನಗೊಳಿಸಲಿದ್ದು, ಹೊಸ ಕಾರಿನ ಉತ್ಪಾದನೆಗಾಗಿ ಫೋಕ್ಸ್‌ವ್ಯಾಗನ್ ಐಡಿ 3 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಗಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿದೆ.

ಸೆ.1ಕ್ಕೆ ಅನಾವರಣಗೊಳ್ಳಲಿದೆ ಸ್ಕೋಡಾ ನಿರ್ಮಾಣದ ಮೊದಲ ಇವಿ ಕಾರು

ಎಸ್‌ಯುವಿ ಕಾರುಗಳಲ್ಲೇ ಹೊಸ ಮಾದರಿಯ ವಿನ್ಯಾಸ ಹೊಂದಿರುವ ಎನ್ಯಾಕ್ ಕಾರು 4,648-ಎಂಎಂ ಉದ್ದ, 1,877-ಎಂಎಂ ಅಗಲ, 1,618-ಎಂಎಂ ಎತ್ತರದೊಂದಿಗೆ ಉತ್ತಮ ಒಳಾಂಗಣ ವಿನ್ಯಾಸ ಹೊಂದಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸೆ.1ಕ್ಕೆ ಅನಾವರಣಗೊಳ್ಳಲಿದೆ ಸ್ಕೋಡಾ ನಿರ್ಮಾಣದ ಮೊದಲ ಇವಿ ಕಾರು

ಮಾಹಿತಿಗಳ ಪ್ರಕಾರ, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರತಿ ಚಾರ್ಜ್‌ಗೆ ಆರಂಭಿಕ ಆವೃತ್ತಿಯು 340ಕಿ.ಮೀ, ಮಧ್ಯಮ ಕ್ರಮಾಂಕದ ಕಾರು 390 ಕಿ.ಮೀ ಮತ್ತು ಟಾಪ್ ಎಂಡ್ ಮಾದರಿಯು 500ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ.

ಸೆ.1ಕ್ಕೆ ಅನಾವರಣಗೊಳ್ಳಲಿದೆ ಸ್ಕೋಡಾ ನಿರ್ಮಾಣದ ಮೊದಲ ಇವಿ ಕಾರು

ವೆರಿಯೆಂಟ್‌ಗಳಿಗೆ ಅನುಗುಣವಾಗಿ 55kWh, 62kWh ಮತ್ತು 82kWh ಬ್ಯಾಟರಿ ಒದಗಿಸಲಾಗಿದ್ದು, ಫೋಕ್ಸ್‌ವ್ಯಾಗನ್ ನಿರ್ಮಾಣ ಐ.ಡಿ ಕ್ರಾಝ್ ಎಲೆಕ್ಟ್ರಿಕ್ ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆಯಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಸೆ.1ಕ್ಕೆ ಅನಾವರಣಗೊಳ್ಳಲಿದೆ ಸ್ಕೋಡಾ ನಿರ್ಮಾಣದ ಮೊದಲ ಇವಿ ಕಾರು

ಹೊಸ ಎಲೆಕ್ಟ್ರಿಕ್ ಯುರೋಪ್ ಮಾರುಕಟ್ಟೆಗಳಲ್ಲಿ 2021ರ ಮಧ್ಯಂತರದಲ್ಲಿ ಬಿಡುಗಡೆಯಾಗಲಿದ್ದು, ಭಾರತದಲ್ಲೂ ಬಿಡುಗಡೆಯಾಗಲಿರುವ ಈ ಹೊಸ ಕಾರು 2022ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ರೂ.25 ಲಕ್ಷದಿಂದ ರೂ.30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda enyaq iv electric suv will unveil on september 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X