ಹೊಸ ಕಾರುಗಳ ಜೊತೆಯಲ್ಲೇ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಸ್ಕೋಡಾ

ಸ್ಕೋಡಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಳಕೆ ಮಾಡಿದ ಕಾರುಗಳ ಮಾರಾಟವನ್ನು ಆರಂಭಿಸಿದ್ದು, ಸೆಕೆಂಡ್ ಕಾರುಗಳ ಖರೀದಿಯ ಮೇಲೆ ಹೊಸ ಕಾರುಗಳ ಮಾದರಿಯಲ್ಲೇ ವಿವಿಧ ರೀತಿಯ ಆಫರ್ ಘೋಷಿಸಿದೆ.

ಹೊಸ ಕಾರುಗಳ ಜೊತೆಯಲ್ಲೇ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಸ್ಕೋಡಾ

ಕರೋನಾ ವೈರಸ್ ಭೀತಿಯಿಂದಾಗಿ ಸ್ವಂತ ವಾಹನ ಬಳಕೆಯು ಹೆಚ್ಚುತ್ತಿರುವುದರಿಂದ ಆಟೋ ಕಂಪನಿಗಳಿಗೆ ವರವಾಗಿ ಪರಿಣಮಿಸಿದ್ದು, ಹೊಸ ವಾಹನಗಳ ಮಾರಾಟ ಜೊತೆ ಜೊತೆಗೆ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟದ ಮೇಲೂ ಹೆಚ್ಚು ಗಮನಹರಿಸಿವೆ. ಹೊಸ ವಾಹನಗಳ ಜೊತೆಗೆ ಬಳಕೆ ಮಾಡಿದ ವಾಹನಗಳಿಗೂ ಹೆಚ್ಚು ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಉದ್ಯಮವನ್ನು ಆಟೋ ಉತ್ಪಾದನಾ ಕಂಪನಿಗಳು ವ್ಯವಸ್ಥಿತವಾಗಿ ಜಾರಿಗೊಳಿಸುತ್ತಿವೆ.

ಹೊಸ ಕಾರುಗಳ ಜೊತೆಯಲ್ಲೇ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಸ್ಕೋಡಾ

ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಉದ್ಯಮದ ಮೇಲೆ ಸ್ಕೋಡಾ ಸೇರಿದಂತೆ ಹಲವು ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ನುರಿತ ಉದ್ಯೋಗಿಗಳ ತಂಡದಿಂದಾಗಿ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿವೆ.

ಹೊಸ ಕಾರುಗಳ ಜೊತೆಯಲ್ಲೇ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಸ್ಕೋಡಾ

ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮ ಎನ್ನಬಹುದು.

ಹೊಸ ಕಾರುಗಳ ಜೊತೆಯಲ್ಲೇ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಸ್ಕೋಡಾ

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಅಧಿಕೃತ ಕಾರು ಮಾರಾಟ ಮಳಿಗೆಗಳಲ್ಲೇ ಖರೀದಿ ಮಾಡುವುದರಿಂದ ಹೊಸ ವಾಹನಗಳ ಮಾದರಿಯಲ್ಲೇ ಹೆಚ್ಚುವರಿ ವಾರಂಟಿ ಸಹ ದೊರೆಯಲಿದ್ದು, ಇಲ್ಲಿ ಮೋಸದ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಕಾರುಗಳ ಜೊತೆಯಲ್ಲೇ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಸ್ಕೋಡಾ

ಸ್ಕೋಡಾ ಕಂಪನಿಯು ಇದೇ ಕಾರಣಕ್ಕೆ ಒಂದೇ ಸೂರಿನಡಿ ವಿವಿಧ ಬ್ರಾಂಡ್‌ಗಳ ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿದ್ದು, 160 ಅಂಶಗಳ ಆಧಾರ ಮೇಲೆ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮರುಮಾರಾಟ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ.

ಹೊಸ ಕಾರುಗಳ ಜೊತೆಯಲ್ಲೇ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಸ್ಕೋಡಾ

ಹಾಗೆಯೇ ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮೇಲೆ ಆಕರ್ಷಕ ರಿಯಾಯ್ತಿಗಳೊಂದಿಗೆ 2 ವರ್ಷಗಳ ವಾರಂಟಿ ಅಥವಾ 1.50 ಲಕ್ಷ ಕಿ.ಮೀ ಮೇಲೆ ವಾರಂಟಿ ನೀಡಲಿದ್ದು, ವಾಹನಗಳ ಖರೀದಿಗಾಗಿ ಆಕರ್ಷಕ ಬಡ್ಡಿದರದಲ್ಲಿ ಸರಳ ಸಾಲ ಸೌಲಭ್ಯವನ್ನು ಸಹ ಒದಗಿಸಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೊಸ ಕಾರುಗಳ ಜೊತೆಯಲ್ಲೇ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಸ್ಕೋಡಾ

ಇನ್ನು ಕರೋನಾ ವೈರಸ್ ಪರಿಣಾಮ ಸ್ವಂತ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪ್ರತಿಯೊಬ್ಬರಿಗೂ ಹೊಸ ವಾಹನಗಳ ಖರೀದಿಯು ಸಾಧ್ಯವಿರುವುದಿಲ್ಲ. ಈ ಇದಕ್ಕಾಗಿ ಬಜೆಟ್ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಪ್ರಕ್ರಿಯೆಯು ಉತ್ತಮ ಆಯ್ಕೆಯಾಗಿದ್ದು, ಕಳೆದ 5 ತಿಂಗಳಿನಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಪ್ರಕ್ರಿಯೆಯು ಕಳೆದ ವರ್ಷಕ್ಕಿಂತಲೂ ಶೇ. 50 ರಿಂದ ಶೇ.70ರಷ್ಟು ಹೆಚ್ಚಳವಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda India Launches The Certified Pre-Owned Program. Read in kannada.
Story first published: Friday, October 9, 2020, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X