Just In
- 1 hr ago Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 14 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 17 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 17 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
Don't Miss!
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Technology Infinix: ನಾಳೆ ಇನ್ಫಿನಿಕ್ಸ್ ನೋಟ್ 40 ಪ್ರೊ+ 5G ಫೋನ್ ಖರೀದಿಗೆ ಲಭ್ಯ..108ಎಂಪಿ ಕ್ಯಾಮೆರಾ!
- News Gold Rates Today: ನಿನ್ನೆಗಿಂತ ಕೊಂಚ ಇಳಿಕೆಯಾದ ಚಿನ್ನದ ಬೆಲೆ, ಯಾವ ನಗರದಲ್ಲಿ ಎಷ್ಟು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್
ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಹೊಸ ಕರೋಕ್ ಎಸ್ಯುವಿಯನ್ನು ಇತ್ತೀಚಿಗೆ ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಈ ಹೊಸ ಕರೋಕ್ ಎಸ್ಯುವಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.
ಸ್ಕೋಡಾ ಕಂಪನಿಯು ತನ್ನ ಹೊಸ ಕರೋಕ್ ಎಸ್ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಕೂಡ ಪ್ರಾರಂಭಿಸಿದೆ. ಹೊಸ ಸ್ಕೋಡಾ ಕರೋಕ್ ಎಸ್ಯುವಿಗಾಗಿ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಸ್ಕೋಡಾ ಕರೋಕ್ ಆರಂಭದಲ್ಲಿ (ಸಿಬಿಯು) ಕಂಪ್ಲೀಟ್ ಬಿಲ್ಟ್ ಯುನಿಟ್ ಆಗಿ ಲಭ್ಯವಿರುತ್ತದೆ. ಹೊಸ ಸ್ಕೋಡಾ ಕರೋಕ್ ಎಸ್ಯುವಿಯನ್ನು ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾ ಕರೋಕ್ ಎಸ್ಯುವಿಯು ಆಕರ್ಷಕ ವಿನ್ಯಾಸವನ್ನು ಹೊಂದಿರಲಿದೆ. ಈ ಸ್ಕೋಡಾ ಕರೋಕ್ ಎಸ್ಯುವಿ ಕಂಪನಿಯ ಎಂಕ್ಯೂಬಿ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ.
ಈ ಎಸ್ಯುವಿಯ ಇಂಟಿರಿಯರ್ನಲ್ಲಿ ಆ್ಯಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಯಲ್ಲಿ ದೊಡ್ಡ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂಗಳಿವೆ. ಇದರೊಂದಿಗೆ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಲೆದರ್ ಅಪ್ಹೋಲೆಸ್ಟರಿ ಸೀಟುಗಳನ್ನು ಹೊಂದಿವೆ.
ಹೊಸ ಸ್ಕೋಡಾ ಕರೋಕ್ ಎಸ್ಯುವಿ ಹಲವಾರು ಆಧುನಿಕ ಫೀಚರ್ಸ್ಗಳನ್ನು ಹೊಂದಿರಲಿದೆ. ಈ ಹೊಸ ಎಸ್ಯುವಿಯ ಕ್ಯಾಬಿನ್ ಬ್ಲಾಕ್ ಮತ್ತು ಬೀಜ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಈ ಎಸ್ಯುವಿಯು 1.5 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 7 ಸ್ಪೀಡ್ ಡಿಎಸ್ಜಿ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಕಂಪನಿಯು ಹೊಸ ಕರೋಕ್ ಎಸ್ಯುವಿಯನ್ನು ಡೀಸೆಲ್ ಎಂಜಿನ್ನಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಡೀಸೆಲ್ ಆವೃತ್ತಿಗಳಿಗೆ ಬೇಡಿಕೆ ಹೆಚ್ಚಾದರೆ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಬಹುದು.
ಹೊಸ ಸ್ಕೋಡಾ ಕರೋಕ್ ಎಸ್ಯುವಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ ಎಂಜಿ ಹೆಕ್ಟರ್, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಟಕ್ಸನ್ ಎಸ್ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.
ದೇಶಿಯ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದ ಸ್ಕೋಡಾ ನಿಧಾನವಾಗಿ ತನ್ನ ಬೇಡಿಕೆಯನ್ನು ಕಳೆದುಕೊಂಡಿದೆ. ಇದರಿಂದ ಮತ್ತೆ ಭಾರತದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಸಜ್ಜಾಗುತ್ತಿದೆ. ಸ್ಕೋಡಾ ಮುಂದಿನ ಎರಡು ವರ್ಷಗಳಲ್ಲಿ 2.0 ಯೋಜನೆಯಡಿಯಲ್ಲಿ ಹಲವು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿವೆ.