Just In
- 32 min ago ಭರ್ಜರಿ ಮೈಲೇಜ್ನ ಹೈಬ್ರಿಡ್ ಮಾರುತಿ ಸ್ವಿಫ್ಟ್: ಇವಿ ಕಾರುಗಳನ್ನೂ ಹಿಂದಿಕ್ಕಲಿದೆ ಎಂದ ಭವಿಷ್ಯವಾಣಿ!
- 1 hr ago ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- 2 hrs ago BAJAJ CNG ಬೈಕ್ ಚಿತ್ರಗಳು ಸೋರಿಕೆ: ಬೆಲೆ ಕೇಳಿದರೆ ಶಾಕ್ ಆಗುವುದಂತೂ ಪಕ್ಕಾ!
- 2 hrs ago Fujiyama EV: ಅಗ್ಗದ ಬೆಲೆಯಲ್ಲಿ ಹೊಸ ಇವಿ ಸ್ಕೂಟರ್ ಬಿಡುಗಡೆ: ಬೆಲೆ, ವಿಶೇಷತೆಗಳೇನು?
Don't Miss!
- News ಬೈಯಪ್ಪನಹಳ್ಳಿ 'ಮೆಟ್ರೋ' ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆ: ಪ್ರಯಾಣಿಕರಿಗೆ ತೊಂದರೆ
- Sports IPL 2024: ಮುಂಬೈ ಇಂಡಿಯನ್ಸ್ಗೆ ಭಾರೀ ಹಿನ್ನಡೆ; ಹಾರ್ಟ್ಬ್ರೇಕ್ ಪೋಸ್ಟ್ ಮಾಡಿದ ಸೂರ್ಯಕುಮಾರ್
- Movies ಬಾಲಿವುಡ್ ಹಾಟ್ ಕಪಲ್ ರೊಮ್ಯಾನ್ಸ್ ನೋಡಿ ಪೂಜಾ ಹೆಗ್ಡೆಗೆ ಅಸೂಯೆ!; ವಿಡಿಯೋ ವೈರಲ್
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಬಿಡುಗಡೆಯಾಗಲಿದೆ ವಿಷನ್ ಇನ್ ಕಾನ್ಸೆಪ್ಟ್ ಎಸ್ಯುವಿ
ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಹೊಸ ವಿಷನ್ ಇನ್ ಕಾನ್ಸೆಪ್ಟ್ ಎಸ್ಯುವಿಯನ್ನು ಇತೀಚೆಗೆ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಇದೀಗ ಸ್ಕೋಡಾ ಆಟೋ ಕಂಪನಿಯು ಹೊಸ ವಿಷನ್ ಇನ್ ಕಾನ್ಸೆಪ್ಟ್ ಎಸ್ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.
ಈ ಹೊಸ ವಿಷನ್ ಇನ್ ಕಾನ್ಸೆಪ್ಟ್ ಎಸ್ಯುವಿಯನ್ನು ಭಾರತದಲ್ಲಿ ಇದೇ ವರ್ಷದಲ್ಲಿ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಎಸ್ಯುವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್ಯುವಿಗಳಿಗೆ ನೇರ ಪೈಪೋಟಿಯನ್ನು ನೀಡಲಿದೆ. ಸ್ಕೋಡಾ ಇಂಡಿಯಾ ವಿಡಬ್ಲ್ಯೂ ಎಂಕ್ಯೂಬಿ ಎಒ ಇನ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿ ಈ ಹೊಸ ಎಸ್ಯುವಿಯನ್ನು ಅಭಿವೃದ್ದಿಪಡಿಸಿದೆ.
ಈ ಎಸ್ಯುವಿಯು ತನ್ನ ಕಂಪನಿಯ ಸರಣಿಯಲ್ಲಿರುವ ಕಾಮಿಕ್ ಎಸ್ಯುವಿಯ ಮಾದರಿಯಲ್ಲಿದೆ. ಹೊಸ ಸ್ಕೊಡಾ ಎಸ್ಯುವಿಯ ಮುಂಭಾಗ ದೊಡ್ಡ ಗ್ರಿಲ್ ಮತ್ತು ಹೆಚ್ಚು ವಿನ್ಯಾಸಗೊಳಿಸಲಾದ ಬಂಪರ್ ಅನ್ನು ಹೊಂದಿದೆ. ಈ ಎಸ್ಯುವಿಯಲ್ಲಿ ಚಾಲಕನ ಸೀಟ್ ಸ್ವಲ್ಪ ಎತ್ತರವನ್ನು ಹೊಂದಿದೆ. ಈ ಎಸ್ಯುವಿಯ ಮುಂಭಾಗವು ಸಿಗ್ನೇಚರ್ ವಿನ್ಯಾಸವನ್ನು ಹೊಂದಿದೆ.
ಇನ್ನೂ ಮುಂಭಾಗ ಡ್ಯುಯಲ್ ಹೆಡ್ಲ್ಯಾಂಪ್, ಏರ್ ಇನ್ಟೆಕ್ ಮತ್ತು ಮುಂಭಾಗದ ಬಂಪರ್ನಲ್ಲಿ ಸ್ಕಫ್ ಪ್ಲೇಟ್ಗಳೊಂದಿಗೆ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಎಸ್ಯುವಿಯ ಎರಡು ಬದಿಗಳು ಮತ್ತು ಹಿಂಭಾಗ ಪೊಫೈಲ್ ಸ್ಪೋರ್ಟಿ ಥೀಮ್ ಅನ್ನು ಹೊಂದಿವೆ.
ಈ ಎಸ್ಯುವಿಯ ಸೈಡ್ ಪ್ರೊಫೈಲ್ನಲ್ಲಿ ಶಾರ್ಪ್ ಲೈನ್ಗಳಿವೆ. ಇದರ ಹಿಂಭಾಗದಲ್ಲಿರುವ ಎಲ್ಇಡಿ ಟೇಲ್ಲೈಟ್ಗಳು ಮತ್ತು ರೂಫ್ ಮೌಂಟಡ್ ಸ್ಪಾಯ್ಲರ್ ಎಸ್ಯುವಿಗೆ ಸ್ಪೋರ್ಟಿ ಲುಕ್ ಅನ್ನು ನೀಡುತ್ತವೆ.
ಹೊಸ ಎಸ್ಯುವಿಯ ಇಂಟಿರಿಯರ್ ಆಕರ್ಷಕವಾಗಿದೆ. ಇನ್ನೂ ಇಂಟಿರಿಯರ್ನಲ್ಲಿ ಮಲ್ಟಿ ಲೇಯರ್ಡ್ ಡ್ಯಾಶ್ಬೋರ್ಡ್ ಮತ್ತು ಅನೇಕ ಬಣ್ಣಗಳನ್ನು ಹೊಂದಿರುವ ಡ್ಯಾಶ್ಬೋರ್ಡ್ಗಳಿವೆ. ಸ್ಕೋಡಾ ಕಾನ್ಸೆಪ್ಟ್ ಇಂಟಿರಿಯರ್ ಸ್ಪೋರ್ಟಿ ಥೀಮ್ ಅನ್ನು ಹೊಂದಿದೆ.
ಇಂಟಿರಿಯರ್ಲ್ಲಿ ಸೆಂಟರ್ ಕನ್ಸೋಲ್, ಫ್ಲಾಟ್ ಬಾಟಮ್ ಸ್ಟೀಯರಿಂಗ್ ವ್ಹೀಲ್ ಮತ್ತು ದೊಡ್ಡ 12 ಇಂಚಿನ ಟಚ್ಸ್ಕ್ರೀನ್ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ವರ್ಚುವಲ್ ಕಾಕ್ಪಿಟ್, ಕಾನ್ಫಿಗರ್ ಮಾಡಬಹುದಾದ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಅನ್ನು ಹೊಂದಿದೆ.
ಸ್ಕೋಡಾ ವಿಷನ್ ಇನ್ ಕಾನ್ಸೆಪ್ಟ್ ಎಸ್ಯುವಿಯು 1.5 ಲೀಟರ್ ಟಿಎಸ್ಐ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಎಂಜಿನ್ನೊಂದಿಗೆ 7 ಸ್ಪೀಡ್ ಡಿಎಸ್ಜಿ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹೊಸ ಸ್ಕೋಡಾ ವಿಷನ್ ಕಾನ್ಸೆಪ್ಟ್ ಎಸ್ಯುವಿಯು ಕೇವಲ 8.7 ಸೆಕೆಂಡುಗಳಲ್ಲಿ 0-100 ವೇಗವನ್ನು ಕ್ರಮಿಸುತ್ತದೆ.
ಭಾರತದ ಮಾರುಕಟ್ಟೆಯಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಸ್ಕೋಡಾ ಆಟೋ ಕಂಪನಿಯು ಪಾರುಪತ್ಯ ಮೆರಯಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಸ್ಕೋಡಾ ಮುಂದಿನ ಎರಡು ವರ್ಷದಲ್ಲಿ ವಿವಿಧ ರೀತಿಯ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ.