ಶ್ರೀಲಂಕಾದಲ್ಲಿ ಸ್ಕೋಡಾ ಕಾರು ಮಾರಾಟ ಶುರು- ಭಾರತದಿಂದಲೇ ರಫ್ತುಗೊಳ್ಳಲಿವೆ ಹೊಸ ಕಾರು...!

ಜೆಕ್ ಗಣರಾಜ್ಯದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಸ್ಕೋಡಾ ಇದೀಗ ಶ್ರೀಲಂಕಾ ಮಾರುಕಟ್ಟೆಗೂ ಲಗ್ಗೆಯಿಟ್ಟಿದ್ದು, ಭಾರತದಿಂದಲೇ ಹೊಸ ಕಾರುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲು ನಿರ್ಧರಿಸಿದೆ.

ಶ್ರೀಲಂಕಾದಲ್ಲಿ ಸ್ಕೋಡಾ ಕಾರು ಮಾರಾಟ ಶುರು- ಭಾರತದಿಂದಲೇ ರಫ್ತುಗೊಳ್ಳಲಿವೆ ಹೊಸ ಕಾರು...!

ಸದ್ಯ ಭಾರತದಲ್ಲಿ ಫೋಕ್ಸ್‌ವ್ಯಾಗನ್ ಜೊತೆಗೂಡಿ ಇಂಡಿಯಾ 2.0 ಪ್ರೋಜೆಕ್ಟ್ ಆರಂಭಿಸಿರುವ ಸ್ಕೋಡಾ ಸಂಸ್ಥೆಯು ಸಹಭಾಗಿತ್ವ ಯೋಜನೆ ಅಡಿ ಹಲವು ಹೊಸ ಕಾರುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಭಾರತದಲ್ಲಿ ಖರೀದಿಗೆ ಲಭ್ಯವಿರುವ ಬಹುತೇಕ ಕಾರು ಮಾದರಿಗಳನ್ನು ಶ್ರೀಲಂಕಾದಲ್ಲೂ ಮಾರಾಟ ಮಾಡಲು ನಿರ್ಧರಿಸಿದೆ. ರಾಜಧಾನಿ ಕೊಲೊಂಬೊದಲ್ಲಿ ಈಗಾಗಲೇ ಹೊಸ ಕಾರುಗಳ ಮಾರಾಟ ಮಳಿಗೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ವರ್ಷಾಂತ್ಯದ ವೇಳೆಗೆ ಅಧಿಕೃತ ಮಾರಾಟ ಪ್ರಕ್ರಿಯೆ ಶುರುವಾಗಲಿದೆ.

ಶ್ರೀಲಂಕಾದಲ್ಲಿ ಸ್ಕೋಡಾ ಕಾರು ಮಾರಾಟ ಶುರು- ಭಾರತದಿಂದಲೇ ರಫ್ತುಗೊಳ್ಳಲಿವೆ ಹೊಸ ಕಾರು...!

ಐಡಬ್ಲ್ಯುಎಸ್ ಆಟೋಮೆಟಿವ್ ಸಂಸ್ಥೆಯ ಜೊತೆಗೂಡಿ ಶ್ರೀಲಂಕಾದಲ್ಲಿ ಹೊಸ ಕಾರು ಮಾರಾಟ ಪ್ರಕ್ರಿಯೆಯನ್ನು ಆರಂಭಿಸುತ್ತಿರುವ ಸ್ಕೋಡಾ ಸಂಸ್ಥೆಯು, ಈ ಹಿಂದೆ 2003ರಲ್ಲಿ ಕೆಲವು ಕಾರಣಾಂತರಗಳಿಂದ ಶ್ರೀಲಂಕಾ ಮಾರುಕಟ್ಟೆಯಲ್ಲಿನ ಕಾರು ಸ್ಥಗಿತಗೊಳಿಸಿತ್ತು.

ಶ್ರೀಲಂಕಾದಲ್ಲಿ ಸ್ಕೋಡಾ ಕಾರು ಮಾರಾಟ ಶುರು- ಭಾರತದಿಂದಲೇ ರಫ್ತುಗೊಳ್ಳಲಿವೆ ಹೊಸ ಕಾರು...!

ಇದೀಗ 17 ವರ್ಷಗಳ ನಂತರ ಮತ್ತೆ ಅದೇ ನೆಲದಲ್ಲಿ ಕಾರು ಮಾರಾಟವನ್ನು ಪುನಾರಂಭಿಸುತ್ತಿರುವ ಸ್ಕೋಡಾ ಸಂಸ್ಥೆಯು ಮಹತ್ವದ ಬದಲಾವಣೆಯ ನೀರಿಕ್ಷೆಯಲ್ಲಿದ್ದು, ಭಾರತದಿಂದಲೇ ಪೂರ್ಣ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

ಶ್ರೀಲಂಕಾದಲ್ಲಿ ಸ್ಕೋಡಾ ಕಾರು ಮಾರಾಟ ಶುರು- ಭಾರತದಿಂದಲೇ ರಫ್ತುಗೊಳ್ಳಲಿವೆ ಹೊಸ ಕಾರು...!

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫ್ಯಾಬಿಯಾ, ಸೂಪರ್ಬ್, ಕೊಡಿಯಾಕ್ ಮತ್ತು ಕರೋಕ್ ಕಾರುಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಮಧ್ಯಮ ಗ್ರಾತದ ಐಷಾರಾಮಿ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ. ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಸ್ಕೋಡಾ ಸಂಸ್ಥೆಯು ಶ್ರೀಲಂಕಾದ ಪ್ರಮುಖ ಐದು ನಗರಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದ್ದು, ಹೊಸ ಯೋಜನೆಯಿಂದಾಗಿ ಭಾರತದಲ್ಲೂ ಕಾರು ಉತ್ಪಾದನೆ ಹೆಚ್ಚಳವಾಗಲಿದೆ.

ಶ್ರೀಲಂಕಾದಲ್ಲಿ ಸ್ಕೋಡಾ ಕಾರು ಮಾರಾಟ ಶುರು- ಭಾರತದಿಂದಲೇ ರಫ್ತುಗೊಳ್ಳಲಿವೆ ಹೊಸ ಕಾರು...!

ಇನ್ನು ಸ್ಕೋಡಾ ಸಂಸ್ಥೆಯು ಕಾರು ಗುಣಮಟ್ಟ ಮತ್ತು ಉತ್ಪಾದನಾ ವೆಚ್ಚಗಳನ್ನು ತಗ್ಗಿಸಲು ಫೋಕ್ಸ್‌ವ್ಯಾಗನ್ ಜೊತೆಗೂಡಿ ಎಂಕ್ಯೂಬಿ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರುಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಫೋಕ್ಸ್‌ವ್ಯಾಗನ್ ಕಾರುಗಳು ಸಹ ಇದೇ ಪ್ಲ್ಯಾಟ್‌ಫಾರ್ಮ್ ಅಡಿ ಉತ್ಪಾದನೆಗೊಳ್ಳಲಿವೆ.

ಶ್ರೀಲಂಕಾದಲ್ಲಿ ಸ್ಕೋಡಾ ಕಾರು ಮಾರಾಟ ಶುರು- ಭಾರತದಿಂದಲೇ ರಫ್ತುಗೊಳ್ಳಲಿವೆ ಹೊಸ ಕಾರು...!

ಇಂಡಿಯಾ 2.0 ಪ್ರೋಜೆಕ್ಟ್ ಯೋಜನೆಗಾಗಿ ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತದಲ್ಲಿ ಬರೋಬ್ಬರಿ ರೂ. 7,900 ಕೋಟಿ( 1 ಬಿಲಿಯನ್ ಯುರೋ ಡಾಲರ್) ಹೂಡಿಕೆ ಮಾಡಿದ್ದು, ಹೊಸ ಯೋಜನೆ ಅಡಿ ಕಾರು ಅಭಿವೃದ್ದಿ ಮತ್ತು ಮಾರಾಟ ಮಳಿಗೆಗಳ ಉನ್ನತೀಕರಣದ ಜೊತೆ ಮಾರುಕಟ್ಟೆ ವಿಸ್ತರಣೆಯೂ ಸೇರಿದೆ.

ಶ್ರೀಲಂಕಾದಲ್ಲಿ ಸ್ಕೋಡಾ ಕಾರು ಮಾರಾಟ ಶುರು- ಭಾರತದಿಂದಲೇ ರಫ್ತುಗೊಳ್ಳಲಿವೆ ಹೊಸ ಕಾರು...!

ಹೀಗಾಗಿ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಅಭಿವೃದ್ದಿಗೊಳ್ಳುತ್ತಿರುವ ಭವಿಷ್ಯದ ಕಾರು ಮಾದರಿಗಳು ಹೊಸ ಸಂಚಲನ ಮೂಡಿಸುವ ತವಕದಲಿದ್ದು, 2021ರ ವೇಳೆಗೆ ಎಲೆಕ್ಟ್ರಿಕ್ ಮಾದರಿಗಳ ಸದ್ದು ಜೋರಾಗಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Auto To Enter Sri Lankan Market In May 2020. Read in Kannada.
Story first published: Thursday, February 27, 2020, 15:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X