Just In
- 22 min ago ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- 46 min ago 28 ಲಕ್ಷದ ಬೈಕನ್ನು ಲೀಲಾಜಾಲವಾಗಿ ಓಡಿಸಿದ ಲೇಡಿ ಸೂಪರ್ಸ್ಟಾರ್: ಇಂತಹ ಗರ್ಲ್ಫ್ರೆಂಡ್ ಬೇಕೆಂದ ನೆಟ್ಟಿಗರು!
- 1 hr ago Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- 2 hrs ago ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
Don't Miss!
- News ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಲ್ಲರನ್ನೂ ಬಯ್ಯೋದೇ ವಿಶೇಷ.!-ಬೈಗಳು ಹೇಗಿರುತ್ತವೆ ಗೊತ್ತಾ?
- Finance ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು 276ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಒಡೆಯ!
- Lifestyle ಹಸುವಿನ ಹಾಲಿನಿಂದ ಇಡೀ ವಿಶ್ವಕ್ಕೆ ಇನ್ಸುಲಿನ್..! ಹೊಸ ಅಧ್ಯಯನದಲ್ಲಿ ಬಹಿರಂಗ.!
- Movies "ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್ಯುವಿ
ದೇಶಿಯ ಮಾರುಕಟ್ಟೆಯಲ್ಲಿನ ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸುತ್ತಿರುವ ಸ್ಕೋಡಾ ಇಂಡಿಯಾ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಮಧ್ಯಮ ಕ್ರಮಾಂಕದ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಇದರಲ್ಲಿ ಕಂಪ್ಯಾಕ್ಟ್ ಎಸ್ಯುವಿ ಮಾದರಿಯು ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.
ಸ್ಕೋಡಾ ಇಂಡಿಯಾ ಕಂಪನಿಯು ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಮಾಡಬೇಕಿದ್ದ ಹೊಸ ಮಾದರಿಯ ಕಂಪ್ಯಾಕ್ಟ್ ಎಸ್ಯುವಿ ಮಾದರಿಯ ಬಿಡುಗಡೆಯನ್ನು ಕರೋನಾ ವೈರಸ್ ಪರಿಣಾಮ ಮುಂದಿನ ವರ್ಷಕ್ಕೆ ಮುಂದೂಡಿಕೆ ಮಾಡಿದ್ದು, ದೆಹಲಿ ಆಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿದ್ದ ವಿಷನ್ ಇನ್ ಕಾನ್ಸೆಪ್ಟ್ ಮಾದರಿಯನ್ನೇ ಹೊಸ ಹೆಸರಿನೊಂದಿಗೆ 2021ರ ಎರಡನೇ ತ್ರೈಮಾಸಿಕ ವೇಳೆಗೆ ಅಧಿಕೃತವಾಗಿ ರಸ್ತೆಗಳಿಸಲು ನಿರ್ಧರಿಸಿದೆ.
ಕಾರು ಬಿಡುಗಡೆಗೂ ಮುನ್ನ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿರುವ ಸ್ಕೋಡಾ ಕಂಪನಿಯು ಮೊದಲ ಬಾರಿಗೆ ಹೊಸ ಕಾರಿನ ಟೆಸ್ಟಿಂಗ್ ಪ್ರಕ್ರಿಯೆ ಕೈಗೊಳ್ಳುತ್ತಿದೆ.
ಸ್ಕೋಡಾ ಹೊಸ ಕಾರು ಕ್ಲಿಕ್ ಹೆಸರು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಹೊಸ ಕಾರಿಗಾಗಿ ಅಧಿಕೃತ ಹೆಸರನ್ನು ಈಗಾಗಲೇ ಅಂತಿಮಗೊಳಿಸಿ ಪೇಟೆಂಟ್(ಹಕ್ಕುಸ್ವಾಮ್ಯ) ದಾಖಲಿಸಿದೆ. ಹಕ್ಕುಸ್ವಾಮ್ಯ ಪಡೆದಿರುವ ಪ್ರತಿಯಲ್ಲಿ ಕ್ಲಿಕ್(kliq) ಎಂದು ನಮೂದಿಸಲಾಗಿದ್ದು, ಕಂಪ್ಯಾಕ್ಟ್ ಎಸ್ಯುವಿ ಕಾರು ಮಾದರಿಗಳಲ್ಲೇ ವಿಶೇಷ ವಿನ್ಯಾಸ ಪಡೆದುಕೊಳ್ಳಲಿದೆ.
ಕ್ಲಿಕ್ ಕಾರು ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಕಾಮಿಕ್ ಎಸ್ಯುವಿಯ ಮಾದರಿಯನ್ನು ಆಧರಿಸಿದ್ದು, ಹೊಸ ಎಸ್ಯುವಿಯು ಮುಂಭಾಗದಲ್ಲಿ ದೊಡ್ಡ ಗ್ರಿಲ್ ಮತ್ತು ಬಲಿಷ್ಠ ವಿನ್ಯಾಸದ ಬಂಪರ್ ಅನ್ನು ಹೊಂದಿದೆ. ಹೊಸ ಕಾರಿನಲ್ಲಿ ಡ್ಯುಯಲ್ ಹೆಡ್ಲ್ಯಾಂಪ್, ಏರ್ ಇನ್ಟೆಕ್ ಮತ್ತು ಮುಂಭಾಗದ ಬಂಪರ್ನಲ್ಲಿ ಸ್ಕಫ್ ಪ್ಲೇಟ್ಗಳೊಂದಿಗೆ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಎಸ್ಯುವಿಯ ಎರಡು ಬದಿಗಳಲ್ಲೂ ಮತ್ತು ಹಿಂಭಾಗದ ಪೊಫೈಲ್ನಲ್ಲೂ ಸ್ಪೋರ್ಟಿ ಥೀಮ್ ಅನ್ನು ಹೊಂದಿವೆ.
ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್ಯುವಿಯ ಸೈಡ್ ಪ್ರೊಫೈಲ್ನಲ್ಲೂ ಶಾರ್ಪ್ ಲೈನ್ಗಳಿದ್ದು, ಇದರ ಹಿಂಭಾಗದಲ್ಲಿರುವ ಎಲ್ಇಡಿ ಟೈಲ್ಲೈಟ್ಗಳು ಮತ್ತು ರೂಫ್ ಮೌಂಟೆಡ್ ಸ್ಪಾಯ್ಲರ್ ಸೌಲಭ್ಯವು ಹೊಸ ಕಾರಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ಅನ್ನು ನೀಡುತ್ತವೆ.
MOST READ: ಭಾರತದಲ್ಲಿ ಎರಡು ಹೊಸ ಎಸ್ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ
ಹಾಗೆಯೇ ಹೊಸ ಎಸ್ಯುವಿಯ ಇಂಟಿರಿಯರ್ ಕೂಡಾ ಆಕರ್ಷಕವಾಗಿದ್ದು, ಇಂಟಿರಿಯರ್ನಲ್ಲಿ ಮಲ್ಟಿ ಲೆಯರ್ಡ್ ಡ್ಯಾಶ್ಬೋರ್ಡ್ ಮತ್ತು ವಿವಿಧ ಬಣ್ಣಗಳನ್ನು ಹೊಂದಿರುವ ಆ್ಯಂಬಿಯೆಂಟ್ ಲೈಟಿಂಗ್ಸ್ ಮತ್ತು ಆರಾಮದಾಯಕ ಆಸನ ಸೌಲಭ್ಯ ಪಡೆದಿದೆ.
ಎಂಜಿನ್ ಸಾಮರ್ಥ್ಯ
ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 1.-0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪರಿಚಯಿಸುವ ಸಾಧ್ಯತೆಗಳಿದ್ದು, ಸಾಮಾನ್ಯ ಆವೃತ್ತಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ಹೊಂದಿದ್ದರೆ ಟರ್ಬೋ ಮಾದರಿಯು 7-ಸ್ಪೀಡ್ ಡ್ಯಯುಲ್ ಕ್ಲಚ್ ಗೇರ್ಬಾಕ್ಸ್ ಆಯ್ಕೆ ಪಡೆದುಕೊಳ್ಳಲಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!
ಈ ಮೂಲಕ ಕಂಪ್ಯಾಕ್ಟ್ ಎಸ್ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿರುವ ಕಿಕ್ಲ್ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುವ ಸಾಧ್ಯೆತೆಗಳಿದ್ದು, ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಎಸ್-ಕ್ರಾಸ್ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.