ಲ್ಯಾಂಬೊರ್ಗಿನಿ ಉರುಸ್ ಕಾರು ಚಾಲನೆ ವೇಳೆ ಕಾಣಿಸಿಕೊಂಡ ತಲೈವಾ

ಲ್ಯಾಂಬೊರ್ಗಿನಿ ಉರುಸ್ ಪ್ರಪಂಚದ ಅತ್ಯಂತ ಆಕರ್ಷಕವಾದ ಹಾಗೂ ಬಲಶಾಲಿಯಾದ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

ಲ್ಯಾಂಬೊರ್ಗಿನಿ ಉರುಸ್ ಕಾರು ಚಾಲನೆ ವೇಳೆ ಕಾಣಿಸಿಕೊಂಡ ತಲೈವಾ

ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ರವರು ಲ್ಯಾಂಬೊರ್ಗಿನಿ ಉರುಸ್ ಕಾರ್ ಅನ್ನು ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಈ ಚಿತ್ರಗಳು ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿವೆ. ಈ ಕಾರು ತನ್ನ ಪರ್ಫಾಮೆನ್ಸ್ ಹಾಗೂ ಫೀಚರ್ ಗಳಿಗೆ ಹೆಸರುವಾಸಿಯಾಗಿದೆ. ಲ್ಯಾಂಬೊರ್ಗಿನಿ ಉರುಸ್‌ನ 50ಕ್ಕೂ ಹೆಚ್ಚು ಯುನಿಟ್ ಗಳು ಭಾರತದಲ್ಲಿ ಮಾರಾಟವಾಗಿವೆ.

ಲ್ಯಾಂಬೊರ್ಗಿನಿ ಉರುಸ್ ಕಾರು ಚಾಲನೆ ವೇಳೆ ಕಾಣಿಸಿಕೊಂಡ ತಲೈವಾ

ಕಳೆದ ವರ್ಷ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿನ ಕುಸಿತದ ಹೊರತಾಗಿಯೂ, ಈ ಕಾರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿತ್ತು. ಉರುಸ್ ಕಾರಿನಲ್ಲಿ 4.0 ಲೀಟರಿನ 8-ಸಿಲಿಂಡರ್ ಟ್ವಿನ್-ಟರ್ಬೊ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 641 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಲ್ಯಾಂಬೊರ್ಗಿನಿ ಉರುಸ್ ಕಾರು ಚಾಲನೆ ವೇಳೆ ಕಾಣಿಸಿಕೊಂಡ ತಲೈವಾ

ಈ ಕಾರು ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ.

ಲ್ಯಾಂಬೊರ್ಗಿನಿ ಉರುಸ್ ಕಾರು ಚಾಲನೆ ವೇಳೆ ಕಾಣಿಸಿಕೊಂಡ ತಲೈವಾ

ಭಾರತದಲ್ಲಿ ಮುಖೇಶ್ ಅಂಬಾನಿ ಸೇರಿದಂತೆ ಹಲವಾರು ಉದ್ಯಮಿಗಳು ಹಾಗೂ ರಣವೀರ್ ಸಿಂಗ್ ಸೇರಿದಂತೆ ಹಲವಾರು ಚಿತ್ರ ತಾರೆಯರು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ. ಈ ಕಾರು ಆರು ವಿಧದ ರೈಡಿಂಗ್ ಮೋಡ್ ಗಳನ್ನು ಹೊಂದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಲ್ಯಾಂಬೊರ್ಗಿನಿ ಉರುಸ್ ಕಾರು ಚಾಲನೆ ವೇಳೆ ಕಾಣಿಸಿಕೊಂಡ ತಲೈವಾ

ಅವುಗಳಲ್ಲಿ ಸಬ್ಬಿಯಾ, ಟೆರ್ರಾ ಹಾಗೂ ನೆವ್ ಮೋಡ್ ಗಳನ್ನು ಆಫ್-ರೋಡಿಂಗ್ ಗಾಗಿ ಬಳಸಲಾಗುತ್ತದೆ. ಲ್ಯಾಂಬೊರ್ಗಿನಿ ಉರುಸ್ ಕಾರ್ ಅನ್ನು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಎಲ್‌ಬಿ ಇವೊ ಪ್ಲಾಟ್‌ಫಾರಂನ ಆಧಾರದ ಮೇಲೆ ತಯಾರಿಸಲಾಗಿದೆ.

ಲ್ಯಾಂಬೊರ್ಗಿನಿ ಉರುಸ್ ಕಾರು ಚಾಲನೆ ವೇಳೆ ಕಾಣಿಸಿಕೊಂಡ ತಲೈವಾ

ಆಡಿ ಕಂಪನಿಯ ಕ್ಯೂ 7 ಹಾಗೂ ಪೋರ್ಷೆ ಕಂಪನಿಯ ಕೇಯೆನ್ ಕಾರುಗಳನ್ನು ಸಹ ಇದೇ ಪ್ಲಾಟ್‌ಫಾರಂನ ಮೇಲೆ ತಯಾರಿಸಲಾಗಿದೆ. ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿ ಸ್ಲಿಮ್ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಲ್ಯಾಂಬೊರ್ಗಿನಿ ಉರುಸ್ ಕಾರು ಚಾಲನೆ ವೇಳೆ ಕಾಣಿಸಿಕೊಂಡ ತಲೈವಾ

ಈ ಕಾರ್ ಅನ್ನು ಲ್ಯಾಂಬೊರ್ಗಿನಿಯ ಹುರಾಕನ್ ಸೂಪರ್ ಕಾರಿನ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ. ಲ್ಯಾಂಬೊರ್ಗಿನಿ ಉರುಸ್ 21 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಕಾರಿನಲ್ಲಿ 22 ಹಾಗೂ 23 ಇಂಚಿನ ಅಲಾಯ್ ವ್ಹೀಲ್ ಗಳನ್ನು ಸಹ ಅಳವಡಿಸಬಹುದು.

ಲ್ಯಾಂಬೊರ್ಗಿನಿ ಉರುಸ್ ಕಾರು ಚಾಲನೆ ವೇಳೆ ಕಾಣಿಸಿಕೊಂಡ ತಲೈವಾ

ಲ್ಯಾಂಬೊರ್ಗಿನಿ ಕಂಪನಿಯು ತನ್ನ ಹೊಸ ಹುರಾಕನ್ ಇವೊ ಸ್ಪೈಡರ್ ಕಾರ್ ಅನ್ನು ಮೇ ತಿಂಗಳಿನಲ್ಲಿ ನಡೆದ ವಿಶ್ವ ಪ್ರೀಮಿಯರ್ ಶೋದಲ್ಲಿ ಬಿಡುಗಡೆಗೊಳಿಸಿದೆ. ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್ ಸೂಪರ್ ಫಾಸ್ಟ್ ಸ್ಪೋರ್ಟ್ಸ್ ಕಾರ್ ಆಗಿದ್ದು, ಕೇವಲ 3.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಬೆಲೆ ಸುಮಾರು ರೂ.1.44 ಕೋಟಿಗಳಾಗಿದೆ.

Most Read Articles

Kannada
English summary
Superstar Rajnikanth spotted with lamborghini urus car in chennai. Read in Kannada.
Story first published: Tuesday, July 21, 2020, 14:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X