ಬಿಎಸ್ 4 ವಾಹನಗಳ ನೋಂದಣಿಗೆ ಅಸ್ತು ಎಂದ ಸುಪ್ರೀಂ ಕೋರ್ಟ್

ಕೆಲವು ವಾರಗಳ ಹಿಂದೆ ಸುಪ್ರೀಂ ಕೋರ್ಟ್, ಲಾಕ್‌ಡೌನ್‌ಗೆ ಮೊದಲು ಹಾಗೂ ಲಾಕ್‌ಡೌನ್‌ ನಂತರ ಮಾರಾಟವಾದ ಬಿಎಸ್ 4 ವಾಹನಗಳ ನೋಂದಣಿಯನ್ನು ನಿಷೇಧಿಸಿತ್ತು. ನಿಯಮ ಮೀರಿ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಿದ್ದ ಫಾಡಾ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು.

ಬಿಎಸ್ 4 ವಾಹನಗಳ ನೋಂದಣಿಗೆ ಅಸ್ತು ಎಂದ ಸುಪ್ರೀಂ ಕೋರ್ಟ್

ಈಗ ಸುಪ್ರೀಂ ಕೋರ್ಟ್ ಹೊಸ ಆದೇಶ ಹೊರಡಿಸಿದೆ. ಈ ಆದೇಶದನ್ವಯ ಬಿಎಸ್ 4 ವಾಹನಗಳನ್ನು ನೋಂದಾಯಿಸಬಹುದು. ಆದರೆ ಮಾರ್ಚ್ 31ಕ್ಕೂ ಮೊದಲು ಮಾರಾಟವಾದ ಕಾರು ಹಾಗೂ ಬೈಕುಗಳನ್ನು ಮಾತ್ರ ನೋಂದಣಿ ಮಾಡಬಹುದು. ತಾತ್ಕಾಲಿಕ ನೋಂದಣಿ ಸೇರಿದಂತೆ ಸರ್ಕಾರದ ಇ-ವೆಹಿಕಲ್ ಪೋರ್ಟಲ್‌ನಲ್ಲಿ ಎಲ್ಲಾ ನೋಂದಣಿಗಳನ್ನು ಮಾಡಬಹುದೆಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರಿದ್ದ ನ್ಯಾಯಪೀಠ ಆದೇಶ ನೀಡಿದೆ.

ಬಿಎಸ್ 4 ವಾಹನಗಳ ನೋಂದಣಿಗೆ ಅಸ್ತು ಎಂದ ಸುಪ್ರೀಂ ಕೋರ್ಟ್

ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಈ ಆದೇಶ ಅನ್ವಯವಾಗದ ಕಾರಣಕ್ಕೆ ಇಲ್ಲಿನ ಗ್ರಾಹಕರು ಹಾಗೂ ಡೀಲರ್ ಗಳು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಐಎನ್‌ಎಸ್ ಸುದ್ದಿ ಸಂಸ್ಥೆ ಈ ಸುದ್ದಿಯನ್ನು ದೃಢಪಡಿಸಿದೆ. ಫಾಡಾ ಸಲ್ಲಿಸಿದ್ದ ಅಫಿಡವಿಟ್ ನಂತರ ಈ ಆದೇಶ ಹೊರಡಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬಿಎಸ್ 4 ವಾಹನಗಳ ನೋಂದಣಿಗೆ ಅಸ್ತು ಎಂದ ಸುಪ್ರೀಂ ಕೋರ್ಟ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಾಡಾ ಪರ ವಕೀಲರಾದ ವಿಶ್ವನಾಥನ್ ರವರು ನಾವು ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇವೆ. ಆದರೆ ಲಾಕ್‌ಡೌನ್‌ ಅವಧಿಯಲ್ಲಿ ತಪ್ಪು ನಡೆದಿದೆ ಎಂಬ ವರದಿಯನ್ನು ವಜಾಗೊಳಿಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಬಿಎಸ್ 4 ವಾಹನಗಳ ನೋಂದಣಿಗೆ ಅಸ್ತು ಎಂದ ಸುಪ್ರೀಂ ಕೋರ್ಟ್

ಈವರೆಗೆ 39,000 ವಾಹನಗಳ ವಿವರಗಳನ್ನು ಇ-ವೆಹಿಕಲ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿಲ್ಲವೆಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಇವುಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳ ಮಾಹಿತಿಯನ್ನು ಪತ್ತೆಹಚ್ಚಲಾಗಿದೆ. ಅವುಗಳ ಮಾಹಿತಿಯು ಇ-ವೆಹಿಕಲ್ ಪೋರ್ಟಲ್‌ನಲ್ಲಿ ಲಭ್ಯವಿದೆ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬಿಎಸ್ 4 ವಾಹನಗಳ ನೋಂದಣಿಗೆ ಅಸ್ತು ಎಂದ ಸುಪ್ರೀಂ ಕೋರ್ಟ್

ದೆಹಲಿ-ಎನ್‌ಸಿಆರ್ ಹೊರತುಪಡಿಸಿ ದೇಶಾದ್ಯಂತ ವಾಹನಗಳನ್ನು ಲಾಕ್‌ಡೌನ್ ನಂತರದ 10 ದಿನಗಳವರೆಗೆ ಮಾರಾಟ ಮಾಡಬಹುದೆಂಬ ಮಾರ್ಚ್ 27ರ ಆದೇಶವನ್ನು ಸುಪ್ರೀಂ ಕೋರ್ಟ್ ಹಿಂಪಡೆದ ನಂತರ ಬಂದಿರುವ ಈ ಆದೇಶವು ಫಾಡಾಗೆ ಸಂತಸವನ್ನುಂಟು ಮಾಡಿದೆ.

ಬಿಎಸ್ 4 ವಾಹನಗಳ ನೋಂದಣಿಗೆ ಅಸ್ತು ಎಂದ ಸುಪ್ರೀಂ ಕೋರ್ಟ್

ಜುಲೈ 10ರಂದು ಸುಪ್ರೀಂ ಕೋರ್ಟ್ ಈ ಆದೇಶವನ್ನು ಹಿಂಪಡೆದಿತ್ತು. ಇದಾದ ನಂತರ ಗ್ರಾಹಕರು ಹಾಗೂ ಡೀಲರ್ ಗಳ ನಡುವೆ ಬಿಕ್ಕಟ್ಟು ಉಂಟಾಗಿತ್ತು. ಸುಪ್ರೀಂ ಕೋರ್ಟಿನ ಈ ಆದೇಶವು ಹಲವರಿಗೆ ಸಮಾಧಾನವನ್ನು ತಂದಿದೆ. ಲಾಕ್‌ಡೌನ್ ಅವಧಿಯಲ್ಲಿಯೂ ಡೀಲರ್ ಗಳು ವಾಹನಗಳನ್ನು ಮಾರಾಟ ಮಾಡಿದ್ದ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬಿಎಸ್ 4 ವಾಹನಗಳ ನೋಂದಣಿಗೆ ಅಸ್ತು ಎಂದ ಸುಪ್ರೀಂ ಕೋರ್ಟ್

ಲಾಕ್‌ಡೌನ್ ಕಾರಣದಿಂದಾಗಿ ದೇಶಾದ್ಯಂತ ವಾಹನಗಳ ಮಾರಾಟ ಪ್ರಮಾಣವು ತೀವ್ರವಾಗಿ ಕುಸಿದಿದೆ. ವಾಹನ ಉದ್ಯಮವು ಸಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜುಲೈ ತಿಂಗಳಿನಲ್ಲಿ ವಾಹನ ಮಾರಾಟ ಪ್ರಮಾಣವು ಸುಧಾರಿಸಿದ್ದರೂ ಸಹ ಹಲವು ಕಂಪನಿಗಳು ತಮ್ಮ ಡೀಲರ್ ಗಳನ್ನು ಮುಚ್ಚಿವೆ.

Most Read Articles

Kannada
English summary
Supreme court allows registration of BS4 vehicles sold before lockdown. Read in Kannada.
Story first published: Friday, August 14, 2020, 12:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X