ನೋಂದಣಿಯಾಗದ ಬಿಎಸ್-4 ವಾಹನಗಳ ಕುರಿತು ಅಂತಿಮ ತೀರ್ಪು ಪ್ರಕಟಿಸಲು ಸಜ್ಜಾದ ಸುಪ್ರೀಂಕೋರ್ಟ್

ಏಪ್ರಿಲ್ 1ರ ನಂತರ ಕಡ್ಡಾಯವಾಗಿ ಜಾರಿಗೆ ಬಂದ ಬಿಎಸ್-6 ಎಮಿಷನ್ ನಂತರ ಬಿಎಸ್-4 ವಾಹನಗಳ ನೋಂದಣಿಯು ಸಂಪೂರ್ಣವಾಗಿ ನಿಷೇಧಗೊಂಡಿದೆ. ಆದರೆ ಬಿಎಸ್-4 ವಾಹನಗಳ ಮಾರಾಟ ಅವಧಿ ಮುಕ್ತಾಯಕ್ಕೂ ಮುನ್ನ ಲಾಕ್‌ಡೌನ್ ಜಾರಿಯಾಗಿದ್ದರಿಂದ ಕೆಲವು ವಿನಾಯ್ತಿಗಳನ್ನು ನೀಡಲಾಗಿತ್ತು.

ನೋಂದಣಿಯಾಗದ ಬಿಎಸ್-4 ವಾಹನಗಳ ಕುರಿತು ಅಂತಿಮ ತೀರ್ಪು ಪ್ರಕಟಿಸಲು ಸಜ್ಜಾದ ಸುಪ್ರೀಂಕೋರ್ಟ್

ಬಿಎಸ್-6 ಜಾರಿಗೂ ಮುನ್ನ ಅಂತಿಮ ಅವಧಿಯಲ್ಲಿ ಭಾರೀ ಪ್ರಮಾಣದ ಬಿಎಸ್-4 ಸ್ಟಾಕ್ ವಾಹನಗಳನ್ನು ಮಾರಾಟಗೊಳಿಸುವ ಯೋಜನೆಯಲ್ಲಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳಿಗೆ ಲಾಕ್‌ಡೌನ್ ಬಿಸಿತುಪ್ಪವಾಗಿ ಪರಿಣಮಿಸಿತು. ಮಾರ್ಚ್ ಮಧ್ಯಂತರದಲ್ಲಿ ಆರಂಭವಾದ ಪೂರ್ಣ ಪ್ರಮಾಣದ ಲಾಕ್‌ಡೌನ್ ಎಪ್ರಿಲ್ ಮೊದಲ ವಾರದ ತನಕ ಮುಂದುವರಿದಿತ್ತು. ಈ ಹಿನ್ನಲೆಯಲ್ಲಿ ಮೊದಲೇ ನಿಗದಿಯಾಗದಂತೆ ಬಿಎಸ್-4 ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸಿದ್ದ ಸಾರಿಗೆ ಇಲಾಖೆಯು ಆಟೋ ಕಂಪನಿಗಳಿಗೆ ಶಾಕ್ ನೀಡಿತ್ತು.

ನೋಂದಣಿಯಾಗದ ಬಿಎಸ್-4 ವಾಹನಗಳ ಕುರಿತು ಅಂತಿಮ ತೀರ್ಪು ಪ್ರಕಟಿಸಲು ಸಜ್ಜಾದ ಸುಪ್ರೀಂಕೋರ್ಟ್

ಲಾಕ್‌ಡೌನ್ ಕಾರಣಕ್ಕೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿರುವ ಬಿಎಸ್-4 ವಾಹನಗಳನ್ನು ಮಾರಾಟ ಮಾಡಲು ಅವಕಾಶ ನೀಡುವಂತೆ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ನೋಂದಣಿಯಾಗದ ಬಿಎಸ್-4 ವಾಹನಗಳ ಕುರಿತು ಅಂತಿಮ ತೀರ್ಪು ಪ್ರಕಟಿಸಲು ಸಜ್ಜಾದ ಸುಪ್ರೀಂಕೋರ್ಟ್

ಪರಿಸ್ಥಿತಿಗೆ ಅನುಗುಣವಾಗಿ ಕೆಲವು ಷರತ್ತುಗಳೊಂದಿಗೆ ನಿಷೇಧಗೊಂಡಿದ್ದ ಬಿಎಸ್-4 ವಾಹನಗಳ ಮಾರಾಟಕ್ಕೆ 10 ದಿನಗಳಲ್ಲಿ ಶೇ.10 ರಷ್ಟು ವಾಹನಗಳ ಮಾರಾಟಕ್ಕೆ ಅವಕಾಶ ನೀಡಿದ್ದ ಸುಪ್ರೀಂಕೋರ್ಟ್ ನಷ್ಟ ಸರಿದೂಗಿಸಲು ಅವಕಾಶ ನೀಡಿತ್ತು.

ನೋಂದಣಿಯಾಗದ ಬಿಎಸ್-4 ವಾಹನಗಳ ಕುರಿತು ಅಂತಿಮ ತೀರ್ಪು ಪ್ರಕಟಿಸಲು ಸಜ್ಜಾದ ಸುಪ್ರೀಂಕೋರ್ಟ್

ಆದರೆ ಸುಪ್ರೀಂಕೋರ್ಟ್ ಆದೇಶವನ್ನು ದುರ್ಬಳಕೆ ಮಾಡಿಕೊಂಡ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್‌ ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿನ ಮಟ್ಟದ ವಾಹನಗಳನ್ನು ವಿವಿಧ ಆಫರ್‌ಗಳ ಮೇಲೆ ಮಾರಾಟ ಮಾಡಿತ್ತು. ಕೋರ್ಟ್ ಆದೇಶ ಮೀರಿದ್ದರಿಂದ ನಿಗದಿತ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ವಾಹನಗಳ ನೋಂದಣಿಯನ್ನು ತಡೆಹಿಡಿಯಲಾಗಿದ್ದು, ಸುಪ್ರೀಂಕೋರ್ಟ್ ಆದೇಶ ಮೀರಿ ಬರೋಬ್ಬರಿ 1.30 ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದೆ.

ನೋಂದಣಿಯಾಗದ ಬಿಎಸ್-4 ವಾಹನಗಳ ಕುರಿತು ಅಂತಿಮ ತೀರ್ಪು ಪ್ರಕಟಿಸಲು ಸಜ್ಜಾದ ಸುಪ್ರೀಂಕೋರ್ಟ್

ಫಾಡಾದಲ್ಲಿ ನೋಂದಣಿಯಾಗಿರುವ ಡೀಲರ್ಸ್‌ಗಳಿಗೆ 1.10 ಲಕ್ಷ ವಾಹನಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ನೋಂದಣಿಯಾದ ಡೀಲರ್ಸ್‌ಗಳು 94 ಸಾವಿರ ವಾಹನಗಳನ್ನು ಮಾರಾಟ ಮಾಡಿದ್ದಲ್ಲಿ ನೋಂದಣಿ ಮಾಡದ ಡೀಲರ್ಸ್‌ಗಳು ಬರೋಬ್ಬರಿ 1.30 ಲಕ್ಷ ಬಿಎಸ್-4 ವಾಹನಗಳನ್ನು ಮಾರಾಟ ಮಾಡಿದ್ದಾರೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ನೋಂದಣಿಯಾಗದ ಬಿಎಸ್-4 ವಾಹನಗಳ ಕುರಿತು ಅಂತಿಮ ತೀರ್ಪು ಪ್ರಕಟಿಸಲು ಸಜ್ಜಾದ ಸುಪ್ರೀಂಕೋರ್ಟ್

ನೋಂದಣಿಯಾಗಿರುವ ಡೀಲರ್ಸ್ ಮೂಲಕ ಮಾರಾಟವಾದ ವಾಹನಗಳು ಅಧಿಕೃತವಾಗಿ ಬಳಕೆಯಾಗುತ್ತಿದ್ದು, ಹೆಚ್ಚುವರಿಯಾಗಿ ಮಾರಾಟವಾಗಿರುವ 1.30 ಲಕ್ಷ ಬಿಎಸ್-4 ವಾಹನಗಳನ್ನು ನೋಂದಣಿಗೆ ಅವಕಾಶ ನೀಡುವಂತೆ ಮತ್ತೆ ಇದೀಗ ಸುಪ್ರೀಂಕೋರ್ಟ್ ಮೊರೆಹೋಗಲಾಗಿದೆ.

ನೋಂದಣಿಯಾಗದ ಬಿಎಸ್-4 ವಾಹನಗಳ ಕುರಿತು ಅಂತಿಮ ತೀರ್ಪು ಪ್ರಕಟಿಸಲು ಸಜ್ಜಾದ ಸುಪ್ರೀಂಕೋರ್ಟ್

ದೀರ್ಘಾವಧಿಯ ಲಾಕ್‌ಡೌನ್ ಮತ್ತು ಕರೋನಾ ವೈರಸ್‌ನಿಂದಾದ ಆರ್ಥಿಕ ಮುಗ್ಗಟ್ಟು ವಿಷಯಗಳನ್ನು ಮುಂದಿಟ್ಟುಕೊಂಡು ಹೆಚ್ಚುವರಿಯಾಗಿ ಮಾರಾಟವಾಗಿ ವಾಹನಗಳ ನೋಂದಣಿಯನ್ನು ಮಾನ್ಯ ಮಾಡುವಂತೆ ಅರ್ಜಿ ಸಲ್ಲಿಸಲಾಗಿದ್ದು, ಸುಪ್ರೀಂಕೋರ್ಟ್ ಸಹ ಈ ಕುರಿತು ಮತ್ತೊಮ್ಮೆ ಅರ್ಜಿ ವಿಚಾರಣೆ ನಡೆಸುವ ಮೂಲಕ ಷರತ್ತುಬದ್ದವಾಗಿ ಅವಕಾಶ ನೀಡುವ ಸುಳಿವು ನೀಡಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ನೋಂದಣಿಯಾಗದ ಬಿಎಸ್-4 ವಾಹನಗಳ ಕುರಿತು ಅಂತಿಮ ತೀರ್ಪು ಪ್ರಕಟಿಸಲು ಸಜ್ಜಾದ ಸುಪ್ರೀಂಕೋರ್ಟ್

ನಿಯಮ ಮೀರಿ ಮಾರಾಟವಾಗಿರುವ ಬಿಎಸ್-4 ವಾಹನಗಳ ನೋಂದಣಿಯನ್ನು ಮಾನ್ಯ ಮಾಡುವ ಬಗ್ಗೆ ತೀರ್ಪು ಕಾಯ್ದಿರಿಸಿರುವ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟವನ್ನು ನಾಳೆಗೆ ಮುಂದೂಡಿಕೆ ಮಾಡಿದೆ. ಈ ಕುರಿತು ಟ್ವಿಟ್ ಮಾಡಿರುವ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ವಿಂಕೇಶ್ ಗುಲಾಟಿ ಫಾಡಾ ಮೇಲ್ಮನವಿ ಅಂಗೀಕಾರವಾಗಿದ್ದು, ಅಂತಿಮ ತೀರ್ಪಿಗಾಗಿ ನಾಳೆ ಕಾಯಬೇಕಿದೆ ಎಂದಿದ್ದಾರೆ.

Most Read Articles

Kannada
English summary
Supreme Court To Pass Final Judgment On FADA’s Plea For BS4 Vehicle Registration. Read in Kannada.
Story first published: Wednesday, November 25, 2020, 21:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X