ಬಿಎಸ್ 4 ವಾಹನಗಳನ್ನು ನೋಂದಾಯಿಸದಂತೆ ಖಡಕ್ ಆದೇಶ ನೀಡಿದ ಸುಪ್ರೀಂ ಕೋರ್ಟ್

ಹೊಸ ಬಿಎಸ್ 6 ಮಾಲಿನ್ಯ ನಿಯಮಗಳನ್ನು ಏಪ್ರಿಲ್ 1ರಿಂದ ದೇಶಾದ್ಯಂತ ಜಾರಿಗೆ ತರಲಾಗಿದೆ. ಹೊಸ ನಿಯಮಗಳು ಜಾರಿಗೆ ಬಂದ ನಂತರ ಬಿಎಸ್ 4 ವಾಹನಗಳನ್ನು ಮಾರಾಟ ಮಾಡುವಂತಿಲ್ಲ. ಆದರೆ ಲಾಕ್‌ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ವಾಹನ ವಿತರಕರ ಸಂಘದ ಬೇಡಿಕೆಯ ಮೇರೆಗೆ ಬಿಎಸ್ 4 ವಾಹನಗಳ ಮಾರಾಟವನ್ನು 10 ದಿನಗಳವರೆಗೆ ವಿಸ್ತರಿಸಲಾಗಿತ್ತು.

ಬಿಎಸ್ 4 ವಾಹನಗಳನ್ನು ನೋಂದಾಯಿಸದಂತೆ ಖಡಕ್ ಆದೇಶ ನೀಡಿದ ಸುಪ್ರೀಂ ಕೋರ್ಟ್

ಆದರೆ ಬುಧವಾರ ತನ್ನ ಆದೇಶವನ್ನು ಬದಲಿಸಿರುವ ಸುಪ್ರೀಂ ಕೋರ್ಟ್ ಮಾರ್ಚ್ 31ರ ನಂತರದ ಹತ್ತು ದಿನಗಳಲ್ಲಿ ಮಾರಾಟವಾದ ಬಿಎಸ್ 4 ವಾಹನಗಳನ್ನು ಸಹ ನೋಂದಾಯಿಸುವಂತಿಲ್ಲ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಬಿಎಸ್ 4 ವಾಹನಗಳ ಮಾರಾಟ ಗಡುವನ್ನು ವಿಸ್ತರಿಸಿ ಮಾರ್ಚ್ 27ರಂದು ಆದೇಶ ನೀಡಿತ್ತು. ದೇಶದಲ್ಲಿ ಲಾಕ್‌ಡೌನ್ ವಿಧಿಸಲಾಗಿರುವ ಕಾರಣಕ್ಕೆ ಬಿಎಸ್ 4 ವಾಹನಗಳ ಮಾರಾಟವು ಸಾಧ್ಯವಾಗುತ್ತಿಲ್ಲವೆಂದು ವಿತರಕರ ಸಂಘವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಬಿಎಸ್ 4 ವಾಹನಗಳನ್ನು ನೋಂದಾಯಿಸದಂತೆ ಖಡಕ್ ಆದೇಶ ನೀಡಿದ ಸುಪ್ರೀಂ ಕೋರ್ಟ್

ಇದನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ಬಿಎಸ್ 4 ವಾಹನಗಳ ಮಾರಾಟಕ್ಕೆ ವಿಧಿಸಲಾಗಿದ್ದ ಗಡುವನ್ನು ವಿಸ್ತರಿಸಿತ್ತು. ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಲಾಕ್‌ಡೌನ್ ಹೊರತಾಗಿಯೂ, ಮಾರ್ಚ್ 31ರವರೆಗೆ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ನಂತರ ನ್ಯಾಯಾಲಯದ ಆದೇಶವನ್ನು ಪಾಲಿಸದೇ ವಿತರಕರು ಮೋಸವೆಸಗಿದ್ದಾರೆ ಎಂದು ತಿಳಿಸಿ ಆದೇಶವನ್ನು ಹಿಂಪಡೆದಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬಿಎಸ್ 4 ವಾಹನಗಳನ್ನು ನೋಂದಾಯಿಸದಂತೆ ಖಡಕ್ ಆದೇಶ ನೀಡಿದ ಸುಪ್ರೀಂ ಕೋರ್ಟ್

ಲಾಕ್‌ಡೌನ್ ಸಮಯದಲ್ಲಿ ವಾಹನವನ್ನು ಮಾರಾಟ ಮಾಡಿರುವುದು ಲಾಕ್‌ಡೌನ್ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಲಾಕ್‌ಡೌನ್ ಸಮಯದಲ್ಲಿ ಮಾರ್ಚ್ 31ಕ್ಕೆ ಮೊದಲು ವಾಹನಗಳನ್ನು ಮಾರಾಟ ಮಾಡಬಾರದು ಎಂದು ಹೇಳಿ ಹತ್ತು ಹೆಚ್ಚುವರಿ ದಿನಗಳನ್ನು ನೀಡಲಾಗಿತ್ತು.

ಬಿಎಸ್ 4 ವಾಹನಗಳನ್ನು ನೋಂದಾಯಿಸದಂತೆ ಖಡಕ್ ಆದೇಶ ನೀಡಿದ ಸುಪ್ರೀಂ ಕೋರ್ಟ್

ನ್ಯಾಯಾಲಯದ ಆದೇಶದೊಂದಿಗೆ, ಹಳೆಯ ದಿನಾಂಕಗಳನ್ನು ನಮೂದಿಸಿ ಬಿಎಸ್ 4 ವಾಹನಗಳನ್ನು ಆಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಈ ಕಾರಣಕ್ಕೆ ವಿತರಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ನ್ಯಾಯಪೀಠ ಹೇಳಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಬಿಎಸ್ 4 ವಾಹನಗಳನ್ನು ನೋಂದಾಯಿಸದಂತೆ ಖಡಕ್ ಆದೇಶ ನೀಡಿದ ಸುಪ್ರೀಂ ಕೋರ್ಟ್

ಲಾಕ್‌ಡೌನ್ ಕಾರಣದಿಂದಾಗಿ 2020-21ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾಹನಗಳ ಮಾರಾಟದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಮಾರ್ಚ್ ನಿಂದ ಮೇ ತಿಂಗಳವರೆಗೂ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣಕ್ಕೆ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟ ಹಾಗೂ ರಫ್ತು ಪ್ರಮಾಣವು ಕೂಡ ತೀವ್ರವಾಗಿ ಕುಸಿದಿದೆ.

ಬಿಎಸ್ 4 ವಾಹನಗಳನ್ನು ನೋಂದಾಯಿಸದಂತೆ ಖಡಕ್ ಆದೇಶ ನೀಡಿದ ಸುಪ್ರೀಂ ಕೋರ್ಟ್

ತಜ್ಞರ ಪ್ರಕಾರ, 2020-21ರ ಆರ್ಥಿಕ ವರ್ಷದಲ್ಲಿ ವಾಹನಗಳ ಮಾರಾಟವು 25%ನಿಂದ 45%ವರೆಗೂ ಕುಸಿತವನ್ನು ಕಾಣಬಹುದು. 2020-21ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾಹನ ಕಂಪನಿಗಳ ಮಾರಾಟವು 70%ನಷ್ಟು ಕಡಿಮೆಯಾಗಿದೆ.

Most Read Articles

Kannada
English summary
Supreme Court orders not to register BS 4 cars sold after 31st March. Read in Kannada.
Story first published: Wednesday, July 8, 2020, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more