ಬಿಡುಗಡೆಯಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಸುಜುಕಿ ಕಂಪನಿಯು ತನ್ನ ಎಕ್ರಾಸ್ ಎಸ್‌ಯುವಿಯನ್ನು 2020ರ ಜುಲೈ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಇದೀಗ ಸುಜುಕಿ ಕಂಪನಿಯು ಈ ಎಕ್ರಾಸ್ ಎಸ್‍ಯುವಿಯನ್ನು ಇಂಗ್ಲೇಡ್‌ನಲ್ಲಿ ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಜಪಾನ್ ಮೂಲದ ಎರಡು ದಿಗ್ಗಜ ಕಂಪನಿಗಳಾದ ಸುಜುಕಿ ಮತ್ತು ಟೊಯೊಟಾ ಕಂಪನಿಯು ಸಹಭಾಗಿತ್ವದಲ್ಲಿ ಈ ಎಕ್ರಾಸ್ ಎಸ್‍ಯುವಿಯನ್ನು ಅಭಿವೃದ್ದಿಪಡಿಸಲಾಗಿದೆ. ಈ ಎಕ್ರಾಸ್ ಎಸ್‍ಯುವಿಯನ್ನು ಸುಜುಕಿ ಕಂಪನಿಯು ತನ್ನ ಇತರ ಸರಣಿಯ ಕಾರುಗಳ ಜೊತೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ವರ್ಷ ಎಕ್ರಾಸ್ ಎಸ್‍ಯುವಿಯನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡುವ ಸಾಧ್ಯತೆಗಳಿದೆ. ಇನ್ನು ಈ ಸುಜುಕಿ ಎಕ್ರಾಸ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ನೋಡುವುದಾದರೆ ಆಕರ್ಷಕ ಹೆಡ್ ಲ್ಯಾಂಪ್ ಮತ್ತು ಬೂಮರಾಂಗ್ ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಸುಜುಕಿ ಎಕ್ರಾಸ್ ಎಸ್‍ಯುವಿಯ ಮುಂಭಾಗದಲ್ಲಿ ಬ್ಲ್ಯಾಕ್ ಗ್ರಿಲ್ ಅನ್ನು ಹೂಂದಿದೆ. ಇನ್ನು ಸಿ-ಆಕಾರದ ಬ್ಲ್ಯಾಕ್ ಹೌಸಿಂಗ್, ಫಾಂಗ್ ಲ್ಯಾಂಪ್ ಮತ್ತು ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಬಹುತೇಕೆ ಆರ್ಎವಿ4 ಎಸ್‍ಯುವಿಗೆ ಹೋಲುವಂತಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಯಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಇನ್ನು ಎಕ್ರಾಸ್ ಎಸ್‍ಯುವಿಯಲ್ಲಿ ಬ್ಲ್ಯಾಕ್ ರೂಫ್ ರೈಲ್, ರ್ಯಾಕ್ಡ್ ವಿಂಡ್‌ಶೀಲ್ಡ್ ಮತ್ತು ಕ್ರೋಮ್ಡ್ ವಿಂಡೋ ಲೈನ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್, ಶಾರ್ಕ್ ಫಿನ್ ಆಂಟೆನಾ ಮತ್ತು ಬ್ಲ್ಯಾಕ್ ಬಂಪರ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಸುಜುಕಿ ಎಕ್ರಾಸ್ ಎಸ್‍ಯುವಿಯ ಇಂಟಿರಿಯರ್ ಆಕರ್ಷಕ ವಾಗಿದೆ, ಇಂಟಿರಿಯರ್ ನಲ್ಲಿ ವೈರ್‌ಲೆಸ್ ಚಾರ್ಜಿಂಗ್, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಆಕರ್ಷಕ ಸೆಂಟರ್ ಕನ್ಸೋಲ್ ಅನ್ನು ಹೊಂದಿದೆ. ಇನ್ನು ಸಾಕಷ್ಟು ಕ್ರೋಮ್ ಟ್ರಿಮ್‌ಗಳು ಮತ್ತು ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವೀಲ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಬಿಡುಗಡೆಯಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಸುಜುಕಿ ಎಕ್ರಾಸ್ ಎಸ್‍ಯುವಿಯಲ್ಲಿ 490 ಲೀಟರ್‌ ಬೂಟ್‌ಸ್ಪೇಸ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಹಿಂಭಾಗದ ಸೀಟುಗಳನ್ನು ಮಡಿಚಿದಾಗ 1640 ಲೀಟರ್‌ ನಷ್ಟು ಬೂಟ್‌ಸ್ಪೇಸ್ ಹೆಚ್ಚಿಸಬಹುದು. ಇನ್ನು ಈ ಎಸ್‍ಯುವಿಯಲ್ಲಿ ಮೀಡಿಯಾ ಸಿಸ್ಟಂ ಆಪಲ್ ಕಾರ್ ಪ್ಕೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ಲಿಂಕ್ ಕನೆಕ್ಟಿವಿಟಿ ಫೀಚರ್ ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ತಾಂತ್ರಿಕ ವಿಷಯಕ್ಕೆ ಸಂಬಂಧಿಸಿದಂತೆ ಸುಜುಕಿ ಎಕ್ರಾಸ್ ಎಸ್‍ಯುವಿಯಲ್ಲಿ 2.5-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ. ಇದು 173 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಸುಜುಕಿ ಎಕ್ರಾಸ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಲೇನ್ ಟ್ರೇಸಿಂಗ್ ಅಸಿಸ್ಟ್ ಮತ್ತು ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್ (ಡಿಆರ್‌ಸಿಸಿ) ನಂತಹ ಡ್ರೈವಿಂಗ್ ಅಸಿಸ್ಟ್ ಫೀಚರ್ ಗಳನ್ನು ಹೊಂದಿದೆ. ಈ ಸುಜುಕಿ ಎಕ್ರಾಸ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗುವುದ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

Most Read Articles

Kannada
English summary
Suzuki Across (Rebadged Toyota RAV4) Launched In The UK Details. Read In Kannada.
Story first published: Thursday, October 22, 2020, 9:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X