ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಭವಿಷ್ಯದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಇಂಧನಗಳು ಖಾಲಿಯಾಗುವುದು ಖಚಿತ. ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಯು ಸಹ ಹೆಚ್ಚುತ್ತಿದೆ.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ವಾಹನಗಳಿಂದ ಹೆಚ್ಚಿನ ಪ್ರಮಾಣದ ಕಾರ್ಬನ್ ಡೈ‍ಆಕ್ಸೈಡ್ ಉತ್ಪತ್ತಿಯಾಗುತ್ತದೆ. ಆದರೆ ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿರುತ್ತವೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳು ಗ್ಲೋಬಲ್ ವಾರ್ಮಿಂಗ್ ಹಾಗೂ ಹವಾಮಾನ ಬದಲಾವಣೆಯಾಗದಂತೆ ತಡೆಯಲು ತಮ್ಮದೇ ಆದ ಕೊಡುಗೆ ನೀಡುತ್ತವೆ.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ವಾಹನಗಳ ಮೆಂಟೆನೆನ್ಸ್ ಕೂಡ ಹೆಚ್ಚಿರುವುದಿಲ್ಲ. ಈ ಕಾರಣಕ್ಕೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಬಹುತೇಕ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಈಗ ಏಷ್ಯಾದ ದೇಶವೊಂದು ತನ್ನ ಸೇನೆಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಈ ಕಾರಣಕ್ಕೆ ಪ್ರಪಂಚದ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅಂದ ಹಾಗೆ ತನ್ನ ಸೇನೆಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಬಳಸಲು ಮುಂದಾಗಿರುವ ದೇಶ ತೈವಾನ್. ತೈವಾನ್ ಟೆಸ್ಲಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ತೈವಾನ್, ಟೆಸ್ಲಾ ಕಂಪನಿಯ ಮಾಡೆಲ್ 3 ಎಲೆಕ್ಟ್ರಿಕ್ ಕಾರುಗಳನ್ನು ತನ್ನ ಸೇನೆಯಲ್ಲಿ ಬಳಸಲು ಮುಂದಾಗಿದೆ. ಇದಕ್ಕಾಗಿ ತೈವಾನ್ ಸರ್ಕಾರವು ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ 20 ಯುನಿಟ್‍‍ಗಳನ್ನು ಖರೀದಿಸುವ ಯೋಜನೆಯನ್ನು ಹೊಂದಿದೆ.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಈ ವಿಷಯವನ್ನು ತೈವಾನ್‍‍ನಲ್ಲಿರುವ ಟೆಸ್ಲಾ ಕಂಪನಿಯ ಅಧಿಕಾರಿಗಳು ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ. ಟ್ವಿಟರ್‍‍ನಲ್ಲಿರುವ ಫೋಟೊದಲ್ಲಿ ಮಾಡೆಲ್ 3 ಕಾರು ಸೇನೆಯ ಅಧಿಕೃತ ಸ್ಟಿಕ್ಕರ್‍‍ಗಳನ್ನು ಹೊಂದಿವೆ. ಮಾಡೆಲ್ 3 ಎಲೆಕ್ಟ್ರಿಕ್ ಸೆಡಾನ್ ಕಾರು ಬೇರೆ ಎಲೆಕ್ಟ್ರಿಕ್ ಕಾರುಗಳಿಗಿಂತ ಉತ್ತಮವಾಗಿರುವುದಾಗಿ ಹೇಳಲಾಗಿದೆ.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಮಾಡೆಲ್ 3 ಎಲೆಕ್ಟ್ರಿಕ್ ಕಾರು ಹಿಂಭಾಗದಲ್ಲಿ ಎರಡು ಚಾರ್ಜರ್ ಪಾಯಿಂಟ್, ಸೋಲಾರ್ ರೂಫ್ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ಹೊಂದಿದೆ. ಟೆಸ್ಲಾ ಕಂಪನಿಯ ಈ ಮಾಡೆಲ್ 3 ಕಾರು ಪೊಲೀಸ್ ಇಲಾಖೆಯಿಂದಲೂ ಉತ್ತಮವಾದ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಕಾರ್ ಅನ್ನು ತೈವಾನ್‍‍ನಲ್ಲಿ ಮಾತ್ರವಲ್ಲದೇ ಪ್ರಪಂಚದ ಬೇರೆ ದೇಶಗಳಲ್ಲಿಯೂ ಸಹ ಕಾಣಬಹುದು.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಅಮೇರಿಕಾದ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯು ಟೆಸ್ಲಾ ಕಂಪನಿಯ ಎಸ್ ಮಾಡೆಲ್ ಕಾರ್ ಅನ್ನು ಬಳಸುತ್ತಿದೆ. ಲಾಸ್ ಏಂಜಲೀಸ್‍‍ನ ಹಾಲಿವುಡ್ ಪೊಲೀಸರು ಕಪ್ಪು, ಬಿಳಿ ಬಣ್ಣದ ಕಾರುಗಳನ್ನು ಬಳಸುತ್ತಿದ್ದಾರೆ. ಈ ಕಾರು ಸಾಮಾನ್ಯವಾದ ಟೆಸ್ಲಾ ಮಾಡೆಲ್ ಎಸ್ ಕಾರಿಗಿಂತ ಹೆಚ್ಚು ದಕ್ಷತೆಯನ್ನು ಹೊಂದಿದೆ. ಈ ಕಾರು ಪೊಲೀಸರಿಗೆ ಅಗತ್ಯವಾಗಿರುವ ಹಲವಾರು ಎಕ್ವಿಪ್‍‍ಮೆಂಟ್‍‍ಗಳನ್ನು ಒಳಗೊಂಡಿದೆ.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಎಮರ್ಜೆನ್ಸಿ ಸಂದರ್ಭಗಳಲ್ಲಿ ಬೇಕಾಗುವ ಎಕ್ವಿಪ್‍‍ಮೆಂಟ್‍‍ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಅಮೇರಿಕಾದಲ್ಲಿಯೇ ಇರುವ ಇಂಡಿಯಾನಾದ ಬರ್ಗರ್ಸ್‍‍ವಿಲ್ಲೆ ಪೊಲೀಸರು ಸಹ ಟೆಸ್ಲಾ ಮಾಡೆಲ್ 3 ಕಾರುಗಳನ್ನು ಬಳಸುತ್ತಿದ್ದಾರೆ. ಈ ಕಾರು ಸಹ ಪೊಲೀಸರಿಗೆ ಅಗತ್ಯವಿರುವ ಫೀಚರ್‍‍ಗಳನ್ನು ಹೊಂದಿದೆ.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಇವುಗಳ ಜೊತೆಗೆ ಅತ್ಯಾಧುನಿಕ ವಾಹನಗಳನ್ನು ತನ್ನ ಪೊಲೀಸ್ ಇಲಾಖೆಯಲ್ಲಿ ಹೊಂದಿರುವ ದುಬೈ ಸರ್ಕಾರವು ಇತ್ತೀಚಿಗೆ ಬಿಡುಗಡೆಯಾದ ಟೆಸ್ಲಾ ಸೈಬರ್ ಟ್ರಕ್ ಅನ್ನು ಖರೀದಿಸುವ ಯೋಜನೆಯನ್ನು ಹೊಂದಿದೆ. ಈ ಕಾರುಗಳನ್ನು ಬುಕ್ಕಿಂಗ್ ಸಹ ಮಾಡಲಾಗಿದೆ.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಈ ಸೈಬರ್ ಎಲೆಕ್ಟ್ರಿಕ್ ಟ್ರಕ್ ಅನ್ನು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ಗಸ್ತು ತಿರುಗಳು ಬಳಸಲಾಗುವುದೆಂದು ದುಬೈನ ಪೊಲೀಸ್ ಜನರಲ್ ಅಬ್ದುಲ್ಲಾ ಖಲೀಫಾರವರು ತಿಳಿಸಿದ್ದಾರೆ. ದುಬೈ ಪೊಲೀಸರು ಸೈಬರ್ ಟ್ರಕ್‍ನ ಲುಕ್‍‍ಗೆ ಮನಸೋತಿದ್ದಾರೆ ಎಂದು ಹೇಳಲಾಗಿದೆ.

ಮಿಲಿಟರಿಯಲ್ಲೂ ಬಳಕೆಯಾಗಲಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು

ಸೈಬರ್ ಟ್ರಕ್ ಕಾರು ದುಬೈ ಪೊಲೀಸರನ್ನು ಮಾತ್ರವಲ್ಲದೇ ಅಭಿವೃದ್ಧಿ ಹೊಂದಿದ ದೇಶಗಳ ಉದ್ಯಮಿಗಳ ಗಮನವನ್ನೂ ಸಹ ಸೆಳೆದಿದೆ. ಇದರಲ್ಲಿರುವ ಪಿಕ್ ಅಪ್ ಟ್ರಕ್ ಸಿಸ್ಟಂನಿಂದಾಗಿ ಈ ಕಾರು ಹೆಚ್ಚು ಜನಪ್ರಿಯವಾಗುತ್ತಿದೆ.

Most Read Articles

Kannada
English summary
Taiwan Military to use Tesla Model 3 electric vehicle. Read in Kannada.
Story first published: Monday, February 17, 2020, 11:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X