Just In
- 1 hr ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 2 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 2 hrs ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 2 hrs ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಮ್ಮ ಬೆಂಗಳೂರಿನಲ್ಲೂ ಭರ್ಜರಿಯಾಗಿ ಬಿಡುಗಡೆಗೊಂಡ ಟಾಟಾ ಆಲ್ಟ್ರೊಜ್
ಟಾಟಾ ಮೋಟಾರ್ಸ್ ಸಂಸ್ಥೆಯು ಮೊನ್ನೆಯಷ್ಟೇ ಆಲ್ಟ್ರೊಜ್ ಹ್ಯಾಚ್ಬ್ಯಾಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ್ದು, ನಮ್ಮ ಬೆಂಗಳೂರಿನಲ್ಲೂ ನಿನ್ನೆಯಷ್ಟೇ ಹೊಸ ಕಾರು ಖರೀದಿಗೆ ಅಧಿಕೃತವಾಗಿ ಚಾಲನೆ ನೀಡಿತು.
ಹ್ಯಾಚ್ಬ್ಯಾಕ್ ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿರುವ ಹೊಸ ಆಲ್ಟ್ರೊಜ್ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.29 ಲಕ್ಷಕ್ಕೆ ಮತ್ತು ಟಾಪ್ ಆವೃತ್ತಿಯು ರೂ.9.29 ಲಕ್ಷ ಬೆಲೆ ಪಡೆದುಕೊಂಡಿದ್ದು, ಆಕರ್ಷಕ ಬೆಲೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ಪಡೆದುಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.
ಹ್ಯಾರಿಯರ್ ಕಾರು ಬಿಡುಗಡೆಯ ಯಶಸ್ವಿ ನಂತರ ಕಾರು ಮಾರಾಟದಲ್ಲಿ ಮಹತ್ವದ ಬದಲಾಣೆ ಪರಿಚಯಿಸುತ್ತಿರುವ ಟಾಟಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಆಲ್ಫಾ ಪ್ಲ್ಯಾಟ್ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ದಿಗೊಳಿಸಿದ್ದು, ಬಿಎಸ್-6 ಎಂಜಿನ್ ಆಯ್ಕೆಯನ್ನು ಹೊಂದಿದೆ.
ಹ್ಯಾರಿಯರ್ ಕಾರು ಬಿಡುಗಡೆಯ ಯಶಸ್ವಿ ನಂತರ ಕಾರು ಮಾರಾಟದಲ್ಲಿ ಮಹತ್ವದ ಬದಲಾಣೆ ಪರಿಚಯಿಸುತ್ತಿರುವ ಟಾಟಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಆಲ್ಫಾ ಪ್ಲ್ಯಾಟ್ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ದಿಗೊಳಿಸಿದ್ದು, ಬಿಎಸ್-6 ಎಂಜಿನ್ ಆಯ್ಕೆಯನ್ನು ಹೊಂದಿದೆ.
ಆಲ್ಟ್ರೊಜ್ ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
ಎಕ್ಸ್ಇ (ಪೆಟ್ರೋಲ್ ಮ್ಯಾನುವಲ್) - ರೂ. 5.29 ಲಕ್ಷ
ಎಕ್ಸ್ಎಂ (ಪೆಟ್ರೋಲ್ ಮ್ಯಾನುವಲ್)- ರೂ. 6.15 ಲಕ್ಷ
ಎಕ್ಸ್ಟಿ (ಪೆಟ್ರೋಲ್ ಮ್ಯಾನುವಲ್)- ರೂ. 6.84 ಲಕ್ಷ
ಎಕ್ಸ್ಜೆಡ್ (ಪೆಟ್ರೋಲ್ ಮ್ಯಾನುವಲ್)- ರೂ. 7.44 ಲಕ್ಷ
ಎಕ್ಸ್ಜೆಡ್ ಆಪ್ಷನ್ (ಪೆಟ್ರೋಲ್ ಮ್ಯಾನುವಲ್)- ರೂ. 7.69 ಲಕ್ಷ
****
ಎಕ್ಸ್ಇ (ಡೀಸೆಲ್ ಮ್ಯಾನುವಲ್) - ರೂ. 6.99 ಲಕ್ಷ
ಎಕ್ಸ್ಎಂ (ಡೀಸೆಲ್ ಮ್ಯಾನುವಲ್)- ರೂ. 7.75 ಲಕ್ಷ
ಎಕ್ಸ್ಟಿ (ಡೀಸೆಲ್ ಮ್ಯಾನುವಲ್)- ರೂ. 8.44 ಲಕ್ಷ
ಎಕ್ಸ್ಜೆಡ್ (ಡೀಸೆಲ್ ಮ್ಯಾನುವಲ್)- ರೂ. 9.04 ಲಕ್ಷ
ಎಕ್ಸ್ಜೆಡ್ ಆಪ್ಷನ್ (ಡೀಸೆಲ್ ಮ್ಯಾನುವಲ್)- ರೂ. 9.29 ಲಕ್ಷ
ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್
ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್ಪಿ, 113-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಆವೃತ್ತಿಯು 90-ಬಿಎಚ್ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
ಡಿಸೈನ್ ಮತ್ತು ಸ್ಟೈಲ್
ಶಾರ್ಕ್ ನೊಸ್ ಡಿಸೈನ್ ಹೊಂದಿರುವ ಆಲ್ಟ್ರೊಜ್ ಕಾರು ಸ್ವೆಪ್ಟ್ ಬ್ಯಾಕ್ ಪ್ರೋಜೆಕ್ಟರ್ ಹೆಡ್ಲ್ಯಾಂಪ್, ಸ್ಟ್ರೀಪ್ ಕ್ರೋಮ್, ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ಹೈ ಮೌಂಟೆಡ್ ಫಾಗ್ ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್ಎಲ್ಎಸ್ ಜೋಡಿಸಲಾಗಿದ್ದು, 16-ಇಂಚಿನ ಸ್ಟ್ಯಾಂಡರ್ಡ್ ಡ್ಯುಯಲ್ ಟೋನ್ ಲೇಸರ್ ಕಟ್ ಅಲಾಯ್ ವೀಲ್ಹ್, ಸಿ ಪಿಲ್ಲರ್ ಹೊಂದಿಕೊಂಡಿರುವ ಹಿಂಭಾಗದ ಡೋರ್ ಲಾಕ್, ಸ್ಮೊಕ್ಡ್ ಟೈಲ್ಲೈಟ್ಸ್, ಬೂಟ್ ಲೀಡ್ ಸೌಲಭ್ಯವು ಕಾರಿನ ಅಂದವನ್ನು ಹೆಚ್ಚಿಸಿವೆ.
ಹೊಸ ಕಾರಿನಲ್ಲಿ ಪ್ರೀಮಿಯಂ ಲುಕ್ ಹೆಚ್ಚಿಸುವುದಕ್ಕಾಗಿ ರೂಫ್ ಮೌಂಟೆಡ್ ಸ್ಪಾಯ್ಲರ್, ರಿಯರ್ ವಿಂಡ್ಸ್ಕ್ರೀನ್ನಲ್ಲಿ ಇಂಟ್ರಾಗ್ರೆಟೆಡ್ ಬ್ರೇಕಿಂಗ್ ಲೈಟ್ಸ್ ಜೋಡಿಸಲಾಗಿದ್ದು, ಟಾಟಾ ಲೊಗೋ ಕೆಳಭಾಗದಲ್ಲಿ 'ALTROZ' ಬ್ರಾಂಡ್ ನೆಮ್ ನೀಡಲಾಗಿದೆ.
ಒಳಭಾಗದ ವಿನ್ಯಾಸ ಮತ್ತು ಸೌಲಭ್ಯಗಳು
ಹ್ಯಾಚ್ಬ್ಯಾಕ್ ಕಾರುಗಳಲ್ಲೇ ವಿಶೇಷ ಸೌಲಭ್ಯಗಳನ್ನು ಹೊತ್ತುಬಂದಿರುವ ಆಲ್ಟ್ರೊಜ್ ಕಾರಿನಲ್ಲಿ 90 ಡಿಗ್ರಿ ಆ್ಯಂಗಲ್ನಲ್ಲಿ ತೆರೆಯಬಹುದಾದ ಬಾಗಿಲುಗಳು ಪ್ರಮುಖ ಆಕರ್ಷಣೆಯಾಗಿದ್ದು, ಸಾಫ್ಟ್-ಟಚ್ ಡ್ಯಾಶ್ಬೋರ್ಡ್, ಸೆಂಟರ್ ಕನ್ಸೋಲ್, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ, ಎರಡು ಬದಿಯಲ್ಲೂ ಸೆಂಟರ್ ಆರ್ಮ್ ರೆಸ್ಟ್, 12 ವೊಲ್ಟ್ ಚಾರ್ಜಿಂಗ್ ಪೋರ್ಟ್ಸ್, ನಾಲ್ಕು ಬಾಗಿಲುಗಳಲ್ಲೂ ಬಾಟಲ್ ಹೋಲ್ಡರ್ಸ್, ಕೀ ಲೆಸ್ ಎಂಟ್ರಿ, ಹಿಂಬದಿಯ ಸವಾರರಿಗೂ ಎಸಿ ವೆಂಟ್ಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ಗಳು ಆಲ್ಟ್ರೊಜ್ ಕಾರಿನಲ್ಲಿವೆ.
ಸುರಕ್ಷಾ ಸೌಲಭ್ಯಗಳು ಕ್ರ್ಯಾಶ್ ಟೆಸ್ಟಿಂಗ್ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿರುವ ಆಲ್ಟ್ರೊಜ್ ಕಾರಿನಲ್ಲಿ ಡ್ಯಯಲ್ ಫ್ರಂಟ್ ಏರ್ಬ್ಯಾಗ್, ಎಬಿಎಸ್ ಮತ್ತು ಇಬಿಡಿ, ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೊಲ್, ಆಟೋ ಹೆಡ್ಲ್ಯಾಂಪ್, ಹೈ ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಐಸೊಫಿಕ್ಸ್ ಚೈಲ್ಡ್ ಮೌಂಟ್ ಸೀಟ್, ಫ್ರಂಟ್ ಫಾಗ್ ಲೈಟ್ ಜೊತೆ ಕಾರ್ನಿಂಗ್ ಫಂಕ್ಷನ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಖರೀದಿಗೆ ಲಭ್ಯವಿರುವ ಬಣ್ಣಗಳು
ಆಲ್ಟ್ರೊಜ್ನಲ್ಲಿ ಹೈ-ಸ್ಟ್ರೀಟ್ ಗೋಲ್ಡ್, ಸ್ಕೈಲೈನ್ ಸಿಲ್ವರ್, ಡೌನ್ಟೌನ್ ರೆಡ್, ಮಿಡ್ಟೌನ್ ಗ್ರೇ ಮತ್ತು ಅವೆನ್ಯೂ ವೈಟ್ ಎನ್ನುವ ಐದು ಬಣ್ಣಗಳ ಆಯ್ಕೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಡ್ಯುಯಲ್ ಟೋನ್ ಕೂಡಾ ಬಿಡುಗಡೆ ಸಾಧ್ಯತೆಗಳಿವೆ.