ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತಲೂ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಟಾಟಾ ಮೋಟಾರ್ಸ್ ಸಂಸ್ಥೆಯು ಆಲ್‌ಟ್ರೊಜ್ ಕಾರಿನ ವಿತರಣೆಯನ್ನು ಆರಂಭಿಸಿದ್ದು, ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಸೌಲಭ್ಯಗಳನ್ನು ಹೊತ್ತುಬಂದಿರುವ ಆಲ್‌ಟ್ರೊಜ್ ಖರೀದಿಗಾಗಿ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ಸಲ್ಲಿಸಿದ್ದಾರೆ.

ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಆಲ್‌ಟ್ರೊಜ್ ಕಾರು ಗ್ರಾಹಕರ ಬೇಡಿಕೆಯೆಂತೆ ಬಿಎಸ್-6 ಎಂಜಿನ್ ಪ್ರೇರಿತ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಶೇ.70ಕ್ಕೂ ಹೆಚ್ಚು ಗ್ರಾಹಕರು ಪೆಟ್ರೋಲ್ ಕಾರುಗಳನ್ನೇ ಆಯ್ಕೆ ಮಾಡಿದ್ದಾರೆ. ಡೀಸೆಲ್ ಕಾರುಗಳಿಂತಲೂ ಪೆಟ್ರೋಲ್ ಕಾರುಗಳು ವ್ಯಯಕ್ತಿಕ ಬಳಕೆಗೆ ಸೂಕ್ತವಾಗಿದ್ದು, ಮೈಲೇಜ್ ಹೊರತುಪಡಿಸಿ ಕಡಿಮೆ ನಿರ್ವಹಣೆ ಮತ್ತು ಭವಿಷ್ಯದಲ್ಲಿ ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಸಂಚಾರಕ್ಕೆ ವಿನಾಯ್ತಿಗಳಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.

ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಇನ್ನು ಹ್ಯಾರಿಯರ್ ಕಾರು ಬಿಡುಗಡೆಯ ಯಶಸ್ವಿ ನಂತರ ಕಾರು ಮಾರಾಟದಲ್ಲಿ ಮಹತ್ವದ ಬದಲಾಣೆ ಪರಿಚಯಿಸುತ್ತಿರುವ ಟಾಟಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಆಲ್ಫಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ದಿಗೊಳಿಸಿದ್ದು, ಹ್ಯಾಚ್‌ಬ್ಯಾಕ್ ಪ್ರಿಯರನ್ನು ಆಕರ್ಷಿಸುತ್ತಿದೆ.

ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿರುವ ಆಲ್‌ಟ್ರೊಜ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.29 ಲಕ್ಷಕ್ಕೆ ಮತ್ತು ಟಾಪ್ ಆವೃತ್ತಿಯು ರೂ.9.29 ಲಕ್ಷ ಬೆಲೆ ಪಡೆದುಕೊಂಡಿದ್ದು, ಆಕರ್ಷಕ ಬೆಲೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಆಲ್‌ಟ್ರೊಜ್ ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಎಕ್ಸ್‌ಇ (ಪೆಟ್ರೋಲ್ ಮ್ಯಾನುವಲ್) - ರೂ. 5.29 ಲಕ್ಷ

ಎಕ್ಸ್ಎಂ (ಪೆಟ್ರೋಲ್ ಮ್ಯಾನುವಲ್)- ರೂ. 6.15 ಲಕ್ಷ

ಎಕ್ಸ್‌ಟಿ (ಪೆಟ್ರೋಲ್ ಮ್ಯಾನುವಲ್)- ರೂ. 6.84 ಲಕ್ಷ

ಎಕ್ಸ್‌ಜೆಡ್ (ಪೆಟ್ರೋಲ್ ಮ್ಯಾನುವಲ್)- ರೂ. 7.44 ಲಕ್ಷ

ಎಕ್ಸ್‌ಜೆಡ್ ಆಪ್ಷನ್ (ಪೆಟ್ರೋಲ್ ಮ್ಯಾನುವಲ್)- ರೂ. 7.69 ಲಕ್ಷ

*****

ಎಕ್ಸ್‌ಇ (ಡೀಸೆಲ್ ಮ್ಯಾನುವಲ್) - ರೂ. 6.99 ಲಕ್ಷ

ಎಕ್ಸ್ಎಂ (ಡೀಸೆಲ್ ಮ್ಯಾನುವಲ್)- ರೂ. 7.75 ಲಕ್ಷ

ಎಕ್ಸ್‌ಟಿ (ಡೀಸೆಲ್ ಮ್ಯಾನುವಲ್)- ರೂ. 8.44 ಲಕ್ಷ

ಎಕ್ಸ್‌ಜೆಡ್ (ಡೀಸೆಲ್ ಮ್ಯಾನುವಲ್)- ರೂ. 9.04 ಲಕ್ಷ

ಎಕ್ಸ್‌ಜೆಡ್ ಆಪ್ಷನ್ (ಡೀಸೆಲ್ ಮ್ಯಾನುವಲ್)- ರೂ. 9.29 ಲಕ್ಷ

ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಡಿಸೈನ್ ಮತ್ತು ಸ್ಟೈಲ್

ಶಾರ್ಕ್ ನೊಸ್ ಡಿಸೈನ್ ಹೊಂದಿರುವ ಆಲ್‌ಟ್ರೊಜ್ ಕಾರು ಸ್ವೆಪ್ಟ್ ಬ್ಯಾಕ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಸ್ಟ್ರೀಪ್ ಕ್ರೋಮ್, ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ಹೈ ಮೌಂಟೆಡ್ ಫಾಗ್ ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್ ಜೋಡಿಸಲಾಗಿದ್ದು, 16-ಇಂಚಿನ ಸ್ಟ್ಯಾಂಡರ್ಡ್ ಡ್ಯುಯಲ್ ಟೋನ್ ಲೇಸರ್ ಕಟ್ ಅಲಾಯ್ ವೀಲ್ಹ್, ಸಿ ಪಿಲ್ಲರ್ ಹೊಂದಿಕೊಂಡಿರುವ ಹಿಂಭಾಗದ ಡೋರ್ ಲಾಕ್, ಸ್ಮೊಕ್ಡ್ ಟೈಲ್‌ಲೈಟ್ಸ್, ಬೂಟ್ ಲೀಡ್ ಸೌಲಭ್ಯವು ಕಾರಿನ ಅಂದವನ್ನು ಹೆಚ್ಚಿಸಿವೆ.

ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಹೊಸ ಕಾರಿನಲ್ಲಿ ಪ್ರೀಮಿಯಂ ಲುಕ್ ಹೆಚ್ಚಿಸುವುದಕ್ಕಾಗಿ ರೂಫ್ ಮೌಂಟೆಡ್ ಸ್ಪಾಯ್ಲರ್, ರಿಯರ್ ವಿಂಡ್‌ಸ್ಕ್ರೀನ್‌ನಲ್ಲಿ ಇಂಟ್ರಾಗ್ರೆಟೆಡ್ ಬ್ರೇಕಿಂಗ್ ಲೈಟ್ಸ್ ಜೋಡಿಸಲಾಗಿದ್ದು, ಟಾಟಾ ಲೊಗೋ ಕೆಳಭಾಗದಲ್ಲಿ 'ALTROZ' ಬ್ರಾಂಡ್ ನೆಮ್ ನೀಡಲಾಗಿದೆ.

ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಒಳಭಾಗದ ವಿನ್ಯಾಸ ಮತ್ತು ಸೌಲಭ್ಯಗಳು

ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಸೌಲಭ್ಯಗಳನ್ನು ಹೊತ್ತುಬಂದಿರುವ ಆಲ್‌ಟ್ರೊಜ್ ಕಾರಿನಲ್ಲಿ 90 ಡಿಗ್ರಿ ಆ್ಯಂಗಲ್‌ನಲ್ಲಿ ತೆರೆಯಬಹುದಾದ ಬಾಗಿಲುಗಳು ಪ್ರಮುಖ ಆಕರ್ಷಣೆಯಾಗಿದ್ದು, ಸಾಫ್ಟ್-ಟಚ್ ಡ್ಯಾಶ್‌ಬೋರ್ಡ್‌, ಸೆಂಟರ್ ಕನ್ಸೋಲ್‌, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ, ಎರಡು ಬದಿಯಲ್ಲೂ ಸೆಂಟರ್ ಆರ್ಮ್ ರೆಸ್ಟ್, 12 ವೊಲ್ಟ್ ಚಾರ್ಜಿಂಗ್ ಪೋರ್ಟ್ಸ್, ನಾಲ್ಕು ಬಾಗಿಲುಗಳಲ್ಲೂ ಬಾಟಲ್ ಹೋಲ್ಡರ್ಸ್, ಕೀ ಲೆಸ್ ಎಂಟ್ರಿ, ಹಿಂಬದಿಯ ಸವಾರರಿಗೂ ಎಸಿ ವೆಂಟ್ಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳು ಆಲ್‌ಟ್ರೊಜ್ ಕಾರಿನಲ್ಲಿವೆ.

ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಸುರಕ್ಷಾ ಸೌಲಭ್ಯಗಳು

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಈಗಾಗಲೇ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿರುವ ಆಲ್‌ಟ್ರೊಜ್ ಕಾರಿನಲ್ಲಿ ಡ್ಯಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಮತ್ತು ಇಬಿಡಿ, ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೊಲ್, ಆಟೋ ಹೆಡ್‌ಲ್ಯಾಂಪ್, ಹೈ ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಐಸೊಫಿಕ್ಸ್ ಚೈಲ್ಡ್ ಮೌಂಟ್ ಸೀಟ್, ಫ್ರಂಟ್ ಫಾಗ್ ಲೈಟ್ ಜೊತೆ ಕಾರ್ನಿಂಗ್ ಫಂಕ್ಷನ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಟಾಟಾ ಆಲ್‌ಟ್ರೊಜ್ ವಿತರಣೆ ಆರಂಭ- ಡೀಸೆಲ್‌ಗಿಂತ ಪೆಟ್ರೋಲ್ ಕಾರಿಗಳಿಗೆ ಹೆಚ್ಚು ಡಿಮ್ಯಾಂಡ್..!

ಖರೀದಿಗೆ ಲಭ್ಯವಿರುವ ಬಣ್ಣಗಳು

ಆಲ್‌ಟ್ರೊಜ್‌ನಲ್ಲಿ ಹೈ-ಸ್ಟ್ರೀಟ್ ಗೋಲ್ಡ್, ಸ್ಕೈಲೈನ್ ಸಿಲ್ವರ್, ಡೌನ್‌ಟೌನ್ ರೆಡ್, ಮಿಡ್‌ಟೌನ್ ಗ್ರೇ ಮತ್ತು ಅವೆನ್ಯೂ ವೈಟ್ ಎನ್ನುವ ಐದು ಬಣ್ಣಗಳ ಆಯ್ಕೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಡ್ಯುಯಲ್ ಟೋನ್ ಕೂಡಾ ಬಿಡುಗಡೆ ಸಾಧ್ಯತೆಗಳಿವೆ.

Most Read Articles

Kannada
English summary
Tata Altroz Premium Hatchback deliveries begin in India. Read in Kannada.
Story first published: Saturday, January 25, 2020, 17:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X