ಮೇ ಅವಧಿಯ ಕಾರು ಮಾರಾಟದಲ್ಲಿ ಐ20 ಮತ್ತು ಗ್ಲಾಂಝಾ ಹಿಂದಿಕ್ಕಿದ ಆಲ್‌ಟ್ರೊಜ್

ಲಾಕ್‌ಡೌನ್ ವಿನಾಯ್ತಿ ನಂತರ ಹಲವು ಕಾರು ಮಾರಾಟ ಕಂಪನಿಗಳು ಸಂಕಷ್ಟದ ಪರಿಸ್ಥಿತಿಯಲ್ಲೂ ಗರಿಷ್ಠ ಮಟ್ಟದ ವಾಹನಗಳ ಮಾರಾಟಕ್ಕೆ ಯತ್ನಿಸಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟ ವಿಭಾಗದಲ್ಲಿ ಆಲ್‌ಟ್ರೊಜ್ ಮೂಲಕ ಸದ್ದು ಮಾಡಿದೆ.

 ಕಾರು ಮಾರಾಟದಲ್ಲಿ ಐ20 ಮತ್ತು ಗ್ಲಾಂಝಾ ಹಿಂದಿಕ್ಕಿದ ಆಲ್‌ಟ್ರೊಜ್

ಮೇ 4 ರಿಂದ ನೀಡವಾಗಿದ್ದ ಲಾಕ್‌ಡೌನ್ ವಿನಾಯ್ತಿ ನಂತರ ಕಾರು ಮಾರಾಟವನ್ನು ಹೊಸ ಸುರಕ್ಷಾ ಕ್ರಮಗಳೊಂದಿಗೆ ಪುನಾರಂಭಗೊಳಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಮೇ ತಿಂಗಳಾಂತ್ಯಕ್ಕೆ 1,379 ಯುನಿಟ್ ಆಲ್‌ಟ್ರೊಜ್ ಕಾರುಗಳನ್ನು ಮಾರಾಟ ಮಾಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಎಲೈಟ್ ಐ20 ಕಾರು 878 ಯುನಿಟ್ ಮಾರಾಟಗೊಂಡಿದ್ದರೆ ಟೊಯೊಟಾ ಆಲ್‌ಟ್ರೊಜ್ ಕಾರು 507 ಯನಿಟ್ ಮಾರಾಟಗೊಂಡಿವೆ.

 ಕಾರು ಮಾರಾಟದಲ್ಲಿ ಐ20 ಮತ್ತು ಗ್ಲಾಂಝಾ ಹಿಂದಿಕ್ಕಿದ ಆಲ್‌ಟ್ರೊಜ್

ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವ ಟಾಟಾ ಆಲ್‌ಟ್ರೊಜ್ ಕಾರು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆಗಳನ್ನು ಪಡೆದುಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ.

 ಕಾರು ಮಾರಾಟದಲ್ಲಿ ಐ20 ಮತ್ತು ಗ್ಲಾಂಝಾ ಹಿಂದಿಕ್ಕಿದ ಆಲ್‌ಟ್ರೊಜ್

ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಆಪ್ಷನ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಆಲ್‌ಟ್ರೊಜ್ ಕಾರು ಆಕರ್ಷಕ ಬೆಲೆಗಳನ್ನು ಹೊಂದಿದ್ದು, 5 ಡೀಸೆಲ್ ಮಾದರಿಗಳನ್ನು ಮತ್ತು 5 ಪೆಟ್ರೋಲ್ ಮಾದರಿಗಳ ಆಯ್ಕೆಯನ್ನು ಹೊಂದಿದೆ.

 ಕಾರು ಮಾರಾಟದಲ್ಲಿ ಐ20 ಮತ್ತು ಗ್ಲಾಂಝಾ ಹಿಂದಿಕ್ಕಿದ ಆಲ್‌ಟ್ರೊಜ್

ಆಲ್‌ಟ್ರೊಜ್ ಪೆಟ್ರೋಲ್ ವೆರಿಯೆಂಟ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 5.29 ಲಕ್ಷ ಮತ್ತು ಹೈ ಎಂಡ್ ಆವೃತ್ತಿಯು ರೂ. 7.69 ಲಕ್ಷ ಬೆಲೆ ಹೊಂದಿದ್ದರೆ ಡೀಸೆಲ್ ಎಂಜಿನ್ ಮಾದರಿಯ ಬೆಲೆಯು ಆರಂಭಿಕವಾಗಿ ರೂ. 6.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.9.29 ಲಕ್ಷ ಬೆಲೆ ಪಡೆದುಕೊಂಡಿದೆ.

 ಕಾರು ಮಾರಾಟದಲ್ಲಿ ಐ20 ಮತ್ತು ಗ್ಲಾಂಝಾ ಹಿಂದಿಕ್ಕಿದ ಆಲ್‌ಟ್ರೊಜ್

ಹೊಸ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋದಿಂದ ಮತ್ತು ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್ ಕಾರಿನಿಂದ ಎರವಲು ಪಡೆಯಲಾಗಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

 ಕಾರು ಮಾರಾಟದಲ್ಲಿ ಐ20 ಮತ್ತು ಗ್ಲಾಂಝಾ ಹಿಂದಿಕ್ಕಿದ ಆಲ್‌ಟ್ರೊಜ್

ಸದ್ಯಕ್ಕೆ ಹೊಸ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

 ಕಾರು ಮಾರಾಟದಲ್ಲಿ ಐ20 ಮತ್ತು ಗ್ಲಾಂಝಾ ಹಿಂದಿಕ್ಕಿದ ಆಲ್‌ಟ್ರೊಜ್

ಇನ್ನು ಶಾರ್ಕ್ ನೊಸ್ ಡಿಸೈನ್ ಹೊಂದಿರುವ ಆಲ್‌ಟ್ರೊಜ್ ಕಾರು ಸ್ವೆಪ್ಟ್ ಬ್ಯಾಕ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಸ್ಟ್ರೀಪ್ ಕ್ರೋಮ್, ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ಹೈ ಮೌಂಟೆಡ್ ಫಾಗ್ ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್ ಜೋಡಿಸಲಾಗಿದ್ದು, 16-ಇಂಚಿನ ಸ್ಟ್ಯಾಂಡರ್ಡ್ ಡ್ಯುಯಲ್ ಟೋನ್ ಲೇಸರ್ ಕಟ್ ಅಲಾಯ್ ವೀಲ್ಹ್, ಸಿ ಪಿಲ್ಲರ್ ಹೊಂದಿಕೊಂಡಿರುವ ಹಿಂಭಾಗದ ಡೋರ್ ಲಾಕ್, ಸ್ಮೊಕ್ಡ್ ಟೈಲ್‌ಲೈಟ್ಸ್, ಬೂಟ್ ಲೀಡ್ ಸೌಲಭ್ಯವು ಕಾರಿನ ಅಂದವನ್ನು ಹೆಚ್ಚಿಸಿವೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

 ಕಾರು ಮಾರಾಟದಲ್ಲಿ ಐ20 ಮತ್ತು ಗ್ಲಾಂಝಾ ಹಿಂದಿಕ್ಕಿದ ಆಲ್‌ಟ್ರೊಜ್

ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಸೌಲಭ್ಯಗಳನ್ನು ಹೊತ್ತುಬಂದಿರುವ ಆಲ್‌ಟ್ರೊಜ್ ಕಾರಿನಲ್ಲಿ 90 ಡಿಗ್ರಿ ಆ್ಯಂಗಲ್‌ನಲ್ಲಿ ತೆರೆಯಬಹುದಾದ ಬಾಗಿಲುಗಳು ಪ್ರಮುಖ ಆಕರ್ಷಣೆಯಾಗಿದ್ದು, ಸಾಫ್ಟ್-ಟಚ್ ಡ್ಯಾಶ್‌ಬೋರ್ಡ್‌, ಸೆಂಟರ್ ಕನ್ಸೋಲ್‌, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

Most Read Articles

Kannada
English summary
Tata Altroz Sales May Overtakes Hyundai Elite i20, Toyota Glanza Details. Read in Kannada.
Story first published: Saturday, June 6, 2020, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X