ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್ ಎಸ್‌ಯುವಿ

ಟಾಟಾ ಮೋಟಾರ್ಸ್ ಹೊಸ ಗ್ರಾವಿಟಾಸ್ ಎಸ್‌ಯುವಿ ಕಾರು ಮಾದರಿಯು ಬಿಡುಗಡೆಗೂ ಮುನ್ನವೇ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಹೊಸ ಕಾರಿನ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸಲಾಗುತ್ತಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಗ್ರಾವಿಟಾಸ್ ಕಾರು ಟಾಟಾ ನಿರ್ಮಾಣದ ಕಾರುಗಳಲ್ಲೇ ವಿಶೇಷ ವಿನ್ಯಾಸದ ಎಸ್‌ಯುವಿ ಆವೃತ್ತಿಯಾಗಿದ್ದು, ಹ್ಯಾರಿಯರ್ ಉತ್ಪಾದನೆಗಾಗಿ ಬಳಕೆ ಮಾಡಲಾಗಿದ್ದ OMEGA ಪ್ಲ್ಯಾಟ್‌ಫಾರ್ಮ್‌ನಡಿಯಲ್ಲೇ ಹೊಸ ಗ್ರಾವಿಟಾಸ್ ಅನ್ನು ಕೂಡಾ ಅಭಿವೃದ್ದಿಗೊಳ್ಳುತ್ತಿದೆ. OMEGA ಕಾರು ಉತ್ಪಾದನಾ ತಂತ್ರಜ್ಞಾನವು ಟಾಟಾ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಗ್ರಾವಿಟಾಸ್ ಕಾರು ಕೂಡಾ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್

OMEGA(ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್)ತಂತ್ರಜ್ಞಾನವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಕಾಣಬಹುದಾಗಿದ್ದು, ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್

ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಅಭಿವೃದ್ದಿಗೊಳ್ಳುತ್ತಿದ್ದು, 6 ಸೀಟರ್ ಮಾದರಿಯು 2+2+2 ಮಾದರಿ ಆಸನ ಸೌಲಭ್ಯದೊಂದಿಗೆ ಮತ್ತು 7 ಸೀಟರ್ ಮಾದರಿಯು 2+2+3 ಮಾದರಿಯಲ್ಲಿ ಆಸನ ಸೌಲಭ್ಯ ಹೊಂದಿರಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್

ಈ ಮೂಲಕ ಹೊಸ ಕಾರು ಆವೃತ್ತಿಯು ಪ್ರತಿಸ್ಪರ್ಧಿ ಮಾದರಿಗಳಾದ ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ಟುರಾಸ್ ಜಿ4 ಜೊತೆಗೆ ಟೊಯೊಟಾ ಫಾರ್ಚೂನರ್‌ ಕಾರಿಗೂ ಪೈಪೋಟಿ ನೀಡಲಿದ್ದು, ಉತ್ತಮ ಸ್ಥಳಾವಕಾಶದೊಂದಿಗೆ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್

ಗ್ರಾವಿಟಾಸ್ ಕಾರು 4,661-ಎಂಎಂ ಉದ್ದ, 1786-ಎಂಎಂ ಎತ್ತರ ಮತ್ತು 2,741-ಎಂಎಂ ವೀಲ್ಹ್ ಬೆಸ್‌ನೊಂದಿಗೆ ಹ್ಯಾರಿಯರ್‌ಗಿಂತಲೂ 63-ಎಂಎಂ ಹೆಚ್ಚು ಉದ್ದ, 80-ಎಂಎಂ ಕಡಿಮೆ ಎತ್ತರ ಪಡೆದುಕೊಂಡಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್

ಗ್ರಾವಿಟಾಸ್ ಕಾರು ಹ್ಯಾರಿಯರ್‌ನಂತೆಯೇ ಎಕ್ಸ್ಇ, ಎಕ್ಸ್ಎಂ, ಎಕ್ಸ್ ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೆರಿಯೆಂಟ್‍‍ಗಳಲ್ಲಿ ಬಿಡುಗಡೆಯಾಗಲಿದ್ದು, 16-ಇಂಚಿನ ಅಲಾಯ್ ವ್ಹೀಲ್ಸ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ವಿಭಿನ್ನವಾದ ಬೂಟ್ ಲಿಡ್ ಮತ್ತು ಟೈಲ್ ಲ್ಯಾಂಪ್ಸ್ ಅನ್ನು ಹೊಂದಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್

ಜೊತೆಗೆ ಸ್ಪೋರ್ಟಿ ಸ್ಪಾಯ್ಲರ್, ಎಲ್ಇಡಿ ಟೈಲ್‍ಲೈಟ್ಸ್ ಅನ್ನು ಪಡೆದುಕೊಂಡಿದ್ದು, ಹ್ಯಾರಿಯರ್ ಕಾರಿನಲ್ಲಿ ಬಳಕೆ ಮಾಡಲಾಗುತ್ತಿರುವ ಬಿಎಸ್-6 ಡೀಸೆಲ್ ಎಂಜಿನ್ ಅನ್ನೇ ಗ್ರಾವಿಟಾಸ್ ಕೂಡಾ ಪಡೆದುಕೊಳ್ಳಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್

ಹೊಸ ಗ್ರಾವಿಟಾಸ್ ಕಾರು ಸದ್ಯಕ್ಕೆ ಹ್ಯಾರಿಯರ್ ಮಾದರಿಯಲ್ಲಿ ಬಳಕೆ ಮಾಡಲಾಗಿರುವ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಬಿಡುಗಡೆಯಾಗಲಿದ್ದು, ತದನಂತರವಷ್ಟೇ ಹ್ಯಾರಿಯರ್ ಮತ್ತು ಗ್ರಾವಿಟಾಸ್ ಕಾರುಗಳಲ್ಲಿ ಪೆಟ್ರೋಲ್ ಮಾದರಿಯು ಸಹ ಬಿಡುಗಡೆಯಾಗಲಿದೆ.

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್

ಇದಲ್ಲದೆ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, 4x4 ಡ್ರೈವ್ ಟೆಕ್ನಾಲಜಿಯು ಆಫ್ ರೋಡ್ ಎಸ್‌ಯುವಿ ಪ್ರಿಯರ ಪ್ರಮುಖ ಆಕರ್ಷಣೆಯಾಗಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್

ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)

ಈ ಮೊದಲು ನಿಗದಿಪಡಿಸಿದ ಯೋಜನೆಯೆಂತೆ ಹೊಸ ಗ್ರಾವಿಟಾಸ್ ಕಾರು ಇದೇ ವರ್ಷ ಜೂನ್ ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕರೋನಾ ವೈರಸ್ ಪರಿಣಾಮ ಹೊಸ ಕಾರಿನ ಬಿಡುಗಡೆಯು ಅಕ್ಟೋಬರ್ ಅಥವಾ ನವೆಂಬರ್‌‌‌ಗೆ ಮುಂದೂಡಿಕೆಯಾಗುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.22 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.25 ಲಕ್ಷ ಬೆಲೆ ಹೊಂದಿರಬಹುದೆಂದು ನೀರಿಕ್ಷಿಸಲಾಗಿದೆ.

Image Courtesy: 4x4 INDIA/Facebook

Most Read Articles

Kannada
English summary
Tata Gravitas 6-Seater Spotted Testing Launch Later This Year Details, Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X