ಬಿಡುಗಡೆಯ ಸನಿಹದಲ್ಲಿ ಟಾಟಾ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್ ವರ್ಷನ್

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್, ಆಲ್‌ಟ್ರೊಜ್ ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಬಿಡುಗಡೆಯ ಸನಿಹದಲ್ಲಿ ಟಾಟಾ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್

ಹೊಸ ಕಾರುಗಳ ಬಿಡುಗಡೆಗಾಗಿ ಈಗಾಗಲೇ ಅಂತಿಮ ಸಿದ್ದತೆಯಲ್ಲಿರುವ ಟಾಟಾ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೈಕ್ರೊ ಎಸ್‌ಯುವಿ ಹೆಚ್‌ಬಿಎಕ್ಸ್ ಕಾನ್ಸೆಪ್ಟ್, ಹ್ಯಾರಿಯರ್ ಪೆಟ್ರೋಲ್ ವರ್ಷನ್ ಮತ್ತು 7 ಸೀಟರ್ ಮಾದರಿಯಾದ ಗ್ರಾವಿಟಾಸ್ ಮಾದರಿಯನ್ನು ರಸ್ತೆಗಿಳಿಸುತ್ತಿದ್ದು, ಎಂಜಿನ್ ಮತ್ತು ತಾಂತ್ರಿಕ ಅಂಶಗಳ ಕುರಿತಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತಿದೆ.

ಬಿಡುಗಡೆಯ ಸನಿಹದಲ್ಲಿ ಟಾಟಾ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್

ಸಾಮಾನ್ಯವಾಗಿ ಹೊಸ ಕಾರುಗಳನ್ನು ಬಿಡುಗಡೆಗೂ ಮುನ್ನ ಪ್ರದೇಶಗಳಿಗೆ ಅನುಗುಣವಾಗಿ ರೋಡ್ ಟೆಸ್ಟಿಂಗ್ ನಡೆಸುವ ಆಟೋ ಕಂಪನಿಗಳು ವಿವಿಧ ಪ್ರದೇಶಗಳಲ್ಲಿನ ಪರ್ಫಾಮೆನ್ಸ್‌ಗೆ ಅನುಗುಣವಾಗಿರುವಂತೆ ಎಂಜಿನ್ ಕಾರ್ಯಕ್ಷಮತೆಯನ್ನು ನಿರ್ಧರಿಸುತ್ತವೆ.

ಬಿಡುಗಡೆಯ ಸನಿಹದಲ್ಲಿ ಟಾಟಾ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್

ಟಾಟಾ ಕೂಡಾ ಇದೀಗ ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ವಿಷೇಶ ಅಂದ್ರೆ ಟಾಟಾ ಬಿಡುಗಡೆ ಮಾಡಲಿರುವ ಹೊಸ ಕಾರುಗಳು ಒಂದೇ ಪ್ರದೇಶದಲ್ಲಿ ಒಟ್ಟಾಗಿ ರೋಡ್ ಟೆಸ್ಟಿಂಗ್ ನಡೆಸುತ್ತಿವೆ.

ಬಿಡುಗಡೆಯ ಸನಿಹದಲ್ಲಿ ಟಾಟಾ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್

ಕರೋನಾ ವೈರಸ್ ಹಿನ್ನಲೆಯಲ್ಲಿ ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಮೊಟಕುಗೊಳಿಸಿದ್ದ ಟಾಟಾ ಕಂಪನಿಯು ಇದೀಗ ಹೊಸ ಸುರಕ್ಷಾ ಕ್ರಮಗಳೊಂದಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಹೊಸ ಕಾರುಗಳಲ್ಲಿ ಮೊದಲ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿ ಬಿಡುಗಡೆಯಾಗಲಿದ್ದರೆ ತದನಂತರ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್ ಮಾದರಿಯು ಬಿಡುಗಡೆಯಾಗಲಿದೆ.

ಬಿಡುಗಡೆಯ ಸನಿಹದಲ್ಲಿ ಟಾಟಾ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್

ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ನಂತರ ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಮೇಲೆ ಉತ್ಪಾದನೆ ಮಾಡಲಾಗುತ್ತಿರುವ ಎರಡನೇ ಆವೃತ್ತಿಯಾಗಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಶೀಘ್ರದಲ್ಲೇ ಮಾರಾಟಕ್ಕೆ ಲಭ್ಯವಾಗಲಿದ್ದು, ತದನಂತರ ಹ್ಯಾರಿಯರ್ ಪೆಟ್ರೋಲ್ ಮತ್ತು ಗ್ರಾವಿಟಾಸ್ ಬಿಡುಗಡೆಯಾಗಲಿದೆ.

ಬಿಡುಗಡೆಯ ಸನಿಹದಲ್ಲಿ ಟಾಟಾ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್

ಹ್ಯಾರಿಯರ್ ಕಾರಿನಲ್ಲಿ ಸದ್ಯ 2.0-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಪೆಟ್ರೋಲ್ ಮಾದರಿಯು 1.5-ಲೀಟರ್ ಟರ್ಬೋ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಹ್ಯಾರಿಯರ್ ಕಾರಿನ ಪೆಟ್ರೋಲ್ ಮಾದರಿಯು ಗ್ರಾವಿಟಾಸ್ ನಲ್ಲೂ ಜೋಡಣೆ ಮಾಡಬಹುದಾಗಿದ್ದು, ಡೀಸೆಲ್ ಮಾದರಿಯಲ್ಲೂ ಒಂದೇ ಆಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಡುಗಡೆಯ ಸನಿಹದಲ್ಲಿ ಟಾಟಾ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್

ಗ್ರಾವಿಟಾಸ್ ಕಾರು ಟಾಟಾ ನಿರ್ಮಾಣದ ಕಾರುಗಳಲ್ಲೇ ವಿಶೇಷ ವಿನ್ಯಾಸದ ಎಸ್‌ಯುವಿ ಆವೃತ್ತಿಯಾಗಿದ್ದು, ಹ್ಯಾರಿಯರ್ ಉತ್ಪಾದನೆಗಾಗಿ ಬಳಕೆ ಮಾಡಲಾಗಿದ್ದ OMEGA ಪ್ಲ್ಯಾಟ್‌ಫಾರ್ಮ್‌ನಡಿಯಲ್ಲೇ ಹೊಸ ಗ್ರಾವಿಟಾಸ್ ಅನ್ನು ಕೂಡಾ ಅಭಿವೃದ್ದಿಗೊಳಿಸಲಾಗಿದೆ.

ಬಿಡುಗಡೆಯ ಸನಿಹದಲ್ಲಿ ಟಾಟಾ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್

OMEGA ಕಾರು ಉತ್ಪಾದನಾ ತಂತ್ರಜ್ಞಾನವು ಟಾಟಾ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಗ್ರಾವಿಟಾಸ್ ಕಾರು ಕೂಡಾ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬಿಡುಗಡೆಯ ಸನಿಹದಲ್ಲಿ ಟಾಟಾ ಗ್ರಾವಿಟಾಸ್ ಮತ್ತು ಹ್ಯಾರಿಯರ್ ಪೆಟ್ರೋಲ್

2+3+2 ಆಸನ ಸೌಲಭ್ಯ ಹೊಂದಿರುವ ಗ್ರಾವಿಟಾಸ್ ಕಾರು ಹ್ಯಾರಿಯರ್ ಮಾದರಿಯನ್ನೇ ಆಧರಿಸಿದ್ದು, ಹ್ಯಾರಿಯರ್ ಕಾರಿಗಿಂತಲೂ ರೂ.2 ಲಕ್ಷದಿಂದ ರೂ.3 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿರುವ ಹೊಸ ಕಾರು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ರಸ್ತೆಗಿಳಿಯಲಿದೆ.

Most Read Articles

Kannada
English summary
Tata Gravitas And The Harrier Petrol Spotted Testing. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X