ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ಹ್ಯಾರಿಯರ್ ಎಸ್‌ಯುವಿ ಮಾದರಿಯನ್ನು ಬಿಎಸ್-6 ಎಮಿಷನ್‌ನೊಂದಿಗೆ ಉನ್ನತೀಕರಿಸಿ ಬಿಡುಗಡೆ ಮಾಡಿದ್ದು, ಹೊಸ ಕಾರಿನಲ್ಲಿ ಪರಿಚಯಿಸಲಾಗಿದ್ದ ಬ್ಲ್ಯಾಕ್ ಎಡಿಷನ್ ಸಹ ಇದೀಗ ಖರೀದಿಗೆ ಲಭ್ಯವಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಹ್ಯಾರಿಯರ್ ಫೇಸ್‌ಲಿಫ್ಟ್ ಆವೃತ್ತಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಸೇರಿದಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಜೊತೆಗೆ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಹೊಸ ಕಾರಿನ ಬೆಲೆಯು ತುಸು ದುಬಾರಿಯಾಗಿದ್ದರೂ ಸಹ ಹೊಸ ಮಾದರಿಯ ಫೀಚರ್ಸ್‌ಗಳು ಫೇಸ್‌ಲಿಫ್ಟ್ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡಲಿದ್ದು, ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ತಂದಿರುವುದು ಮಾಲಿನ್ಯ ತಡೆಗೆ ಸಾಕಷ್ಟು ಸಹಕಾರಿಯಾಗಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.25 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದರಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.25 ಲಕ್ಷದಿಂದ ಆರಂಭಗೊಳ್ಳಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಬ್ಲ್ಯಾಕ್ ಎಡಿಷನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.17.07 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.25 ಲಕ್ಷ ಬೆಲೆ ಹೊಂದಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಸದ್ಯ ಮಾರುಕಟ್ಟೆಯಲ್ಲಿ ಹ್ಯಾರಿಯರ್ ಕಾರು ಡೀಸೆಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಆವೃತ್ತಿಯು ಕೂಡಾ ಬಿಡುಗಡೆಯ ಪಟ್ಟಿಯಲ್ಲಿದೆ. ಈ ಮೂಲಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಸಜ್ಜಾಗುತ್ತಿರುವ ಹೊಸ ಹ್ಯಾರಿಯರ್ ಕಾರು ಅಧಿಕೃತ ಮಾರುಕಟ್ಟೆ ಪ್ರವೇಶಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 16 ವೆರಿಯೆಂಟ್‌ಗಳನ್ನು ಹೊಂದಿದೆ.

ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಇದರಲ್ಲಿ ಎಕ್ಸ್ಎಂಎ, ಎಕ್ಸ್‌ಜೆಡ್ಎ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಮಾದರಿಗಳಲ್ಲಿ ಮಾತ್ರವೇ ಆಟೋಮ್ಯಾಟಿಕ್ ವರ್ಷನ್ ಖರೀದಿಗೆ ಲಭ್ಯವಿದ್ದು, ಎಕ್ಸ್‌ಜೆಡ್ಎ ಮತ್ತು ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್‌ಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಹೊಂದಿವೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹ್ಯಾರಿಯರ್ ಎಸ್‌ಯುವಿ ಕಾರು 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 170-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಹೊಸ ಡೀಸೆಲ್ ಆಟೋಮ್ಯಾಟಿಕ್ ಫೀಚರ್ಸ್‌ಗಳು(ಎಕ್ಸ್ಎಂಎ ವೆರಿಯೆಂಟ್‌ನಲ್ಲಿ)

*ಡ್ಯುಯಲ್ ಏರ್‌ಬ್ಯಾಗ್ *ಎಬಿಎಸ್ ಜೊತೆ ಇಬಿಡಿ *ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ *ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೋಲ್ *ಹಿಲ್ ಹೋಲ್ಡ್ ಅಸಿಸ್ಟ್ * ಟ್ರಾಕ್ಷನ್ ಕಂಟ್ರೋಲ್ *ರೋಲ್ ಓವರ್ ಮಿಟಿಗೆಷನ್ *ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ *ಫ್ರಂಟ್ ಫಾಗ್ ಲ್ಯಾಂಪ್ಸ್ *ಮಲ್ಟಿಪಲ್ ಡ್ರೈವ್ ಮೋಡ್(ಇಕೋ, ಸ್ಪೋರ್ಟ್ ಮತ್ತು ಸಿಟಿ) *7.0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ *6 ಸ್ಪೀಕರ್ಸ್ *ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ *ಎಲೆಕ್ಟ್ರಿಕ್‌ ಅಡ್ಜೆಸ್ಟೆಬಲ್ ರಿಯರ್ ವ್ಯೂ ಮಿರರ್ *ರಿಯರ್ ವೈಪರ್ *6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್

ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಎಕ್ಸ್‌ಜೆಡ್ಎ ವೆರಿಯೆಂಟ್‌ನಲ್ಲಿರುವ ಫೀಚರ್ಸ್‌ಗಳು

*6 ಏರ್‌ಬ್ಯಾಗ್‌ಗಳು *ಹಿಲ್ ಡಿಸೆಂಟ್ ಕಂಟ್ರೋಲ್ *ಆಫ್ ರೋಡ್ ಎಬಿಎಸ್ *ISOFIX ಚೈಲ್ಡ್ ಸೀಟ್ ಮೌಂಟ್ *ಜೆನಾನ್ ಹೆಚ್‌ಡಿಐ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್ *ಎಲ್ಇಡಿ ಡಿಆರ್‌ಎಸ್ *ಆಟೋ ಹೆಡ್‌ಲ್ಯಾಂಪ್ ಮತ್ತು ವೈಪರ್ಸ್ *ಕಾರ್ನರಿಂಗ್ ಫ್ರಂಟ್ ಫಾಗ್ ಹೆಡ್‌ಲ್ಯಾಂಪ್ಸ್ *17-ಇಂಚಿನ ಅಲಾಯ್ ವೀಲ್ಹ್ *ಫಕ್ಸ್ ವುಡ್ ಇಂಟಿರಿಯರ್ ಟ್ರಿಮ್ *ಬ್ರೌನ್ ಲೆದರ್ ಆಸನಗಳು *ಲೆದರ್ ಹೊದಿಕೆಯ ಸ್ಟೀರಿಂಗ್ ಮತ್ತು ಗೇರ್ ನಾಬ್, 9-ಸ್ಪೀಕರ್ಸ್ ಜೆಬಿಎಲ್ ಆಡಿಯೋ ಮತ್ತು ಆ್ಯಪಲ್ ಕಾರ್ ಪ್ಲೇ *7.0-ಇಂಚಿನ ಪಾರ್ಟ್-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ *ಸಾಫ್ಟ್ ಟಚ್ ಡ್ಯಾಶ್‌ಬೋರ್ಡ್ *ರಿಯರ್ ಪಾರ್ಕಿಂಗ್ ಕ್ಯಾಮೆರಾ *ಫುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ *ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ *ಕ್ರೂಸ್ ಕಂಟ್ರೋಲ್ *ಎಲೆಕ್ಟ್ರಿಕ್‌ ಅಡ್ಜೆಸ್ಟೆಬಲ್ ರಿಯರ್ ವ್ಯೂ ಮಿರರ್ *ರಿಯರ್ ಆರ್ಮ್ ರೆಸ್ಟ್ ಜೊತೆ ಕಪ್ ಹೋಲ್ಡ್ *60:40 ಅನುಪಾತದ ಹಿಂಭಾಗದ ಆಸನಗಳು

ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್‌ನಲ್ಲಿರುವ ಫೀಚರ್ಸ್‌ಗಳು

ಎಕ್ಸ್ಎಂಎ ಮತ್ತು ಎಕ್ಸ್‌ಜೆಡ್ಎ ವೆರಿಯೆಂಟ್‌ನಲ್ಲಿರುವ ಫೀಚರ್ಸ್‌ಗಳ ಜೊತೆಗೆ ಹೆಚ್ಚುವರಿಯಾಗಿ ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್‌ನಲ್ಲಿರುವ ನೀಡಲಾಗಿರುವ ಫೀಚರ್ಸ್‌ಗಳಿವು. *ಪನೊರಮಿಕ್ ಸನ್‌ರೂಫ್ * ಆಟೋ-ಡಿಮಿಂಗ್ ರಿಯರ್ ವ್ಯೂ ಮಿಯರ್ *17-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು

Source: Gaadiwaadi

Most Read Articles

Kannada
English summary
Tata Harrier Dark Edition BS6 Reaches Dealership. Read in Kannada.
Story first published: Sunday, May 31, 2020, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X