ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ಹ್ಯಾರಿಯರ್ ಟಾಟಾ ಮೋಟಾರ್ಸ್ ಕಂಪನಿಯ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಗೆ ಯುವಕನೊಬ್ಬ ರೂ. 40 ಸಾವಿರ ಖರ್ಚು ಮಾಡಿ ಸ್ಟಿಕ್ಕರ್ ಗಳನ್ನು ಅಂಟಿಸಿದ್ದಾನೆ.

ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ಈಗಾಗಲೇ ಆಕರ್ಷಕವಾಗಿ ಕಾಣುವ ಹ್ಯಾರಿಯರ್ ಎಸ್‌ಯುವಿಯನ್ನು ಮತ್ತಷ್ಟು ಆಕರ್ಷಿಸಲು ಆತ ಈ ಕಾರ್ಯಕ್ಕೆ ಮುಂದಾಗಿದ್ದಾನೆ. ಟಾಟಾ ಮೋಟಾರ್ಸ್ ಕಂಪನಿಯು ಹ್ಯಾರಿಯರ್ ಎಸ್‌ಯುವಿಯ ಅಪ್ ಡೇಟೆಡ್ ಆವೃತ್ತಿಯನ್ನು ಕೆಲ ತಿಂಗಳುಗಳ ಹಿಂದಷ್ಟೇ ಬಿಡುಗಡೆಗೊಳಿಸಿತ್ತು. ಈ ಎಸ್‌ಯುವಿಯನ್ನು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯುನಿಟ್ ಹೊಂದಿರುವ ಬಲಶಾಲಿ ಎಂಜಿನ್ ನೊಂದಿಗೆ ಮಾರಾಟ ಮಾಡಲಾಗುತ್ತದೆ.

ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ಮೂಲಗಳ ಪ್ರಕಾರ ದೀಪು ಗೌಡ್ ಎಂಬುವವರು ತಮ್ಮ ಟಾಟಾ ಹ್ಯಾರಿಯರ್ ಎಸ್‌ಯುವಿಯಲ್ಲಿ ಸ್ಟಿಕ್ಕರ್ ಗಳನ್ನು ಅಂಟಿಸಿದ್ದಾರೆ. ಅವರು ಈ ಚಿತ್ರಗಳನ್ನು ಇಂಟರ್ ನೆಟ್ ನಲ್ಲಿ ಶೇರ್ ಮಾಡಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ಹ್ಯಾರಿಯರ್ ನ ಎಕ್ಸ್ ಟಿರಿಯರ್ ನಲ್ಲಿ ಬಹು ಬಣ್ಣದ ವಿನೈಲ್ ಸ್ಟಿಕ್ಕರ್ ಅಂಟಿಸಲಾಗಿದೆ. ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಾಫಿಕ್ಸ್ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ. ಈ ಕಾರಿನ ಸೈಡ್ ಪ್ರೊಫೈಲ್ ನಲ್ಲಿಯೂ ವಿಭಿನ್ನವಾದ ಸ್ಟಿಕ್ಕರ್ ಗಳನ್ನು ಕಾಣಬಹುದು.

ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ಹಿಂಭಾಗ ಹಾಗೂ ರೂಫ್ ಮೇಲೆಯೂ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಈ ಸ್ಟಿಕ್ಕರ್ ಗಳು ಕಾರಿಗೆ ವಿಭಿನ್ನವಾದ ಎಕ್ಸ್ ಟಿರಿಯರ್ ಲುಕ್ ಅನ್ನು ನೀಡುತ್ತವೆ. ಈ ಸ್ಟಿಕ್ಕರ್ ಗಳು ಟಾಟಾ ಹ್ಯಾರಿಯರ್ ಕಾರನ್ನು ಮತ್ತಷ್ಟು ಆಕರ್ಷಕವಾಗಿಸಿವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ಕಾರಿನ ಎಕ್ಸ್ ಟಿರಿಯರ್ ಮಾತ್ರವಲ್ಲದೆ ಅಲಾಯ್ ವ್ಹೀಲ್ ಗಳಿಗೂ ಹೊಸ ಬಣ್ಣ ನೀಡಲಾಗಿದೆ. ಇವುಗಳಿಗೆ ಕಪ್ಪು ಬಣ್ಣದ ಫಿನಿಶಿಂಗ್ ನೀಡಲಾಗಿದೆ.ಕಾರಿನ ವಿಂಡೋಗಳನ್ನು ಸಹ ಬದಲಿಸಲಾಗಿದೆ.

ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ವಿಂಡೋ ಪ್ಯಾನೆಲ್ ಗಳನ್ನು ತೆಗೆದುಹಾಕಲಾಗಿದ್ದು, ಟೀಂಟೆಡ್ ಗ್ಲಾಸ್ ಅನ್ನು ಅಳವಡಿಸಲಾಗಿದೆ. ಹ್ಯಾರಿಯರ್ ಕಾರಿನಲ್ಲಿ ಇಷ್ಟೆಲ್ಲಾ ಬದಲಾವಣೆಗಳನ್ನು ಮಾಡಲು ರೂ.40,000 ಖರ್ಚು ಮಾಡಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ಇದನ್ನು ದುಬಾರಿ ಬೆಲೆಯ ಸ್ಟಿಕ್ಕರ್ ಅಳವಡಿಕೆ ಎಂದು ಹೇಳಲಾಗಿದೆ. ಆದರೆ ಯಾವುದೇ ಕಾರುಗಳಲ್ಲಿ ಈ ರೀತಿಯ ಬದಲಾವಣೆಗಳನ್ನು ಮಾಡುವುದು ಭಾರತದ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕಾನೂನುಬಾಹಿರ.

ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ಕಾರು ವಿಂಡೋಗಳಿಗೆ ಟೀಂಟೆಡ್ ಗ್ಲಾಸ್ ಅಳವಡಿಸುವುದನ್ನು ಮೋಟಾರು ವಾಹನ ನಿಯಮಗಳಡಿಯಲ್ಲಿ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ರೀತಿಯಾಗಿ ಮಾಡಿಫೈಗೊಂಡಿರುವ ಕಾರುಗಳಿಗೆ ಪೊಲೀಸರು ದಂಡ ವಿಧಿಸುತ್ತಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ಸ್ಟಿಕ್ಕರ್ ಹಾಗೂ ಟೀಂಟೆಡ್ ಗ್ಲಾಸ್ ಅಂಟಿಸಿರುವುದನ್ನು ಹೊರತುಪಡಿಸಿ ಈ ಕಾರಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ಹೇಳಲಾಗಿದೆ.ಭಾರತದಲ್ಲಿ ಖರೀದಿಸಿದ ವಾಹನಗಳನ್ನು ಮೂಲ ಸ್ವರೂಪದಲ್ಲಿಯೇ ಉಳಿಸಿಕೊಳ್ಳಬೇಕು.

ಯಾವುದೇ ರೀತಿಯ ಬದಲಾವಣೆಗೆ ಮೋಟಾರು ವಾಹನ ಕಾಯ್ದೆಯು ಅನುಮತಿ ನೀಡುವುದಿಲ್ಲ. ವಾಹನಗಳ ಮಾರ್ಪಾಡು ಕಾನೂನುಬಾಹಿರ ಚಟುವಟಿಕೆಗಳಿಗೆ ಕಾರಣವಾಗಬಹುದು ಎಂಬುದು ಇದರ ಹಿಂದಿರುವ ಕಾರಣ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸ್ಟಿಕ್ಕರ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ಹ್ಯಾರಿಯರ್ ಎಸ್‌ಯುವಿ

ಟಾಟಾ ಹ್ಯಾರಿಯರ್ ಕಾರಿನ ಆರಂಭಿಕ ಬೆಲೆ ರೂ.13.69 ಲಕ್ಷಗಳಾಗಿದೆ. ಆಟೋಮ್ಯಾಟಿಕ್ ಮಾದರಿಯ ಬೆಲೆ ರೂ.16.25 ಲಕ್ಷಗಳಾಗಿದೆ. ಟಾಟಾ ಮೋಟಾರ್ಸ್ ಕೆಲ ತಿಂಗಳುಗಳ ಹಿಂದೆ ಈ ಕಾರನ್ನು ಬಿಎಸ್ 6 ಅಪ್‌ಡೇಟ್‌ನೊಂದಿಗೆ ಬಿಡುಗಡೆಗೊಳಿಸಿತ್ತು. ಬಿಎಸ್ 6 ಅಪ್‌ಡೇಟ್‌ ನಂತರ ಈ ಕಾರಿನ ಬೆಲೆಯನ್ನು ರೂ.70,000ಗಳಷ್ಟು ಹೆಚ್ಚಿಸಲಾಗಿದೆ.

Most Read Articles

Kannada
English summary
Tata Harrier modified with multiple color stickers. Read in Kannada.
Story first published: Friday, September 18, 2020, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X