ಹ್ಯಾರಿಯರ್ ಎಸ್‍ಯುವಿಯ ಕ್ಷಮತೆಯನ್ನು ಪ್ರದರ್ಶಿಸುವ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷ ಒಮೆಗಾ-ಎಆರ್ಸಿ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಹ್ಯಾರಿಯರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದ್ದರು. ಈ ಹೊಸ ಎಸ್‍ಯುವಿಯನ್ನು ಈ ವರ್ಷದ ಆರಂಭದಲ್ಲಿ ಹೆಚ್ಚು ಪವರ್ ಫುಲ್ ಎಂಜಿನ್‌ನೊಂದಿಗೆ ನವೀಕರಿಸಲಾಗಿತ್ತು.

ಹ್ಯಾರಿಯರ್ ಎಸ್‍ಯುವಿಯ ಕ್ಷಮತೆಯನ್ನು ಪ್ರದರ್ಶಿಸುವ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಮಾರಾಟ ಪಟ್ಟೆಯಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗದಿದ್ದರೂ ಈ ಎಸ್‍ಯುವಿಯು ಬಹಳಷ್ಟು ಗ್ರಾಹಕರನ್ನು ಆಕರ್ಷಸಿತು. ಹ್ಯಾರಿಯರ್ ಎಫ್‌ಡಬ್ಲ್ಯೂಡಿ ಫಾರ್ಮೆಟ್ ನಲ್ಲಿ ಮಾತ್ರ ಲಭ್ಯವಿದೆ. ಆದರೆ ಅದರ ಟ್ರಾಕ್ಷನ್ ಕಂಟ್ರೋಲ್ ಸಾಕಷ್ಟು ಸಮರ್ಥವಾಗಿದೆ. ಹ್ಯಾರಿಯರ್ 450 ಎಂಎಂ ನೀರಿನ ಅಲೆಗಳ ಆಳದಲ್ಲಿ ಸಲಿಸಾಗಿ ಚಲಿಸುತ್ತದೆ. ಟಾಟಾ ಅಧಿಕೃತವಾಗಿ ಬಿಡುಗಡೆಗೊಳಿಸಿದ ವೀಡಿಯೋದ ಆಕರ್ಷಕವಾಗಿದೆ.

ಹ್ಯಾರಿಯರ್ ಎಸ್‍ಯುವಿಯ ಕ್ಷಮತೆಯನ್ನು ಪ್ರದರ್ಶಿಸುವ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಟಾಟಾ ಕಂಪನಿಯು ಅಧಿಕೃತವಾಗಿ ಬಿಡುಗಡೆಗೊಳಿಸಿದ ವೀಡಿಯೋದಲ್ಲಿ ಹ್ಯಾರಿಯರ್ ಎಸ್‍ಯುವಿಯು ಯಾವುದೇ ಅಡತಡೆಗಳು ಇಲ್ಲದೇ ನದಿ ದಾಟುತ್ತಿರುವ ರೋಚಕ ದೃಶ್ಯವನ್ನು ಪ್ರದರ್ಶಿಸಿದ್ದಾರೆ. ಈ ಎಸ್‍ಯುವಿಯ ಗ್ರೌಂಡ್ ಕ್ಲಿಯರೆನ್ಸ್ ಉತ್ತಮವಾಗಿದೆ. ಇದು ವಾಟರ್ ವೇಡಿಂಗ್ ಸಾಮರ್ಥ್ಯಗಳಿಂದ ಯಶಸ್ವಿಯಾಗಿ ನೀರಿನ ಮೂಲಕ ಹೋಗುವುದನ್ನು ತೋರಿಸುತ್ತದೆ.

MOST READ: ಅನಾವರಣವಾಗಲಿದೆ ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಹ್ಯಾರಿಯರ್ ಎಸ್‍ಯುವಿಯ ಕ್ಷಮತೆಯನ್ನು ಪ್ರದರ್ಶಿಸುವ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಹ್ಯಾರಿಯರ್ 450 ಎಂಎಂ ಬೃಹತ್ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ನೀಡಿದ್ದರೂ ಸಹ, ಈ ಎಸ್‍ಯುವಿಯನ್ನು ನೀರಿನಲ್ಲಿ ಡ್ರಿಫ್ಟ್ ಅನ್ನು ಅಥವಾ ಮುಂತಾದ ಕ್ರೇಜಿ ಸಂಗತಿಗಳನ್ನು ಮಾಡಬಾರದು. ಏಕಂದರೆ ಈ ಎಸ್‍ಯುವಿಯ ಆಂತರಿಕ ಸರ್ಕ್ಯೂಟ್‌ಗೆ ತಲುಪುವ ಒಂದು ಹನಿ ನೀರು ವಾಹನಕ್ಕೆ ಮಾರಕವಾಗಿದೆ.

ಹ್ಯಾರಿಯರ್ ಎಸ್‍ಯುವಿಯ ಕ್ಷಮತೆಯನ್ನು ಪ್ರದರ್ಶಿಸುವ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಆಂತರಿಕ ಸರ್ಕ್ಯೂಟ್ ಅನ್ನು ತಲುಪುವ ನೀರು ಇಸಿಯುವನ್ನು ಸ್ಫೋಟಿಸಲು ಸಹ ಕಾರಣವಾಗಬಹುದು. ಇದನ್ನು ಚಾಲಕರು ಗಮನದಲ್ಲಿಟ್ಟುಕೊಳ್ಳಬೇಕು. ಇದು ಅಪಾಯಕಾರಿಯಾಗಿದೆ.

MOST READ: ಡೀಲರ್ ಬಳಿ ತಲುಪಿದ ಹೊಸ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹ್ಯಾರಿಯರ್ ಎಸ್‍ಯುವಿಯ ಕ್ಷಮತೆಯನ್ನು ಪ್ರದರ್ಶಿಸುವ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಅಲ್ಲದೇ ಈ ವಿಡಿಯೋ ಪ್ರದರ್ಶನಗಳಂತೆ ಹೆಚ್ಚಿನ ವೇಗದಲ್ಲಿ ನೀರಿನ ಮೂಲಕ ಚಲಿಸುವುದರಿಂದ ನೀರು ಕಾರಿನ ಏರ್ ಇನ್ ಟೆಕ್ ಗೆ ತಲುಪುತ್ತದೆ. ಒಂದು ದೊಡ್ಡ ಪ್ರಮಾಣದ ನೀರು ಪಿಸ್ಟನ್ ತಲುಪಿದರೆ ಮತ್ತು ಅದನ್ನು ಎಂಜಿನ್‌ನಿಂದ ಸಂಕುಚಿತಗೊಳಿಸಲಾಗದಿದ್ದರೆ, ಎಂಜಿನ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

ಇದನ್ನು ಹೈಡ್ರೋಸ್ಟಾಟಿಕ್ ಲಾಕ್ ಎಂದು ಕರೆಯಲಾಗುತ್ತದೆ ಮತ್ತು ಎಂಜಿನ್ ಅನ್ನು ಸಂಪೂರ್ಣವಾಗಿ ತೆರೆಯಲು ಮತ್ತು ಸ್ವಚ ಗೊಳಿಸಲು ಹೆಚ್ಚಿನ ಮೊತ್ತದ ಅಗತ್ಯವಿದೆ. ಅನೇಕ ಆಧುನಿಕ ವಾಹನಗಳು ಎಂಜಿನ್ ಅನ್ನು ನೀರಿನಿಂದ ರಕ್ಷಿಸಲು ಸೆನ್ಸರ್ ಗಳನ್ನು ಹೊಂದಿವೆ.

MOST READ: ಹೊಸ ನಿವಸ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹ್ಯಾರಿಯರ್ ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ ಆರು ಏರ್‍‍ಬ್ಯಾಗ್‍ಗಳು, ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಗಳನ್ನು ಅಳವಡಿಸಲಾಗಿದೆ.

ಹ್ಯಾರಿಯರ್ ಎಸ್‍ಯುವಿಯ ಕ್ಷಮತೆಯನ್ನು ಪ್ರದರ್ಶಿಸುವ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ನೀವು ವೀಡಿಯೋದಲ್ಲಿರುವ ಹಾಗೆ ಮಾಡಲು ಪ್ರಯತ್ನಿಸುವಾಗ ಎಚ್ಚರವಹಿಸಬೇಕು. ನೀವು ಹಾಗೆ ಮಾಡಲು ಬಯಸಿದರೆ ನಿಮ್ಮ ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಸ್ನಾರ್ಕೆಲ್ ಅನ್ನು ಅಳವಡಿಸಿ. ಇದು ಹೈಡ್ರೋಸ್ಟಾಟಿಕ್ ಲಾಕ್ ಆಗದಂತೆ ನೋಡಿಕೊಳ್ಳುತ್ತದೆ.

Most Read Articles

Kannada
English summary
Tata Harrier can water wade like a BOSS. Read In Kannada.
Story first published: Monday, June 1, 2020, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X