ಲಾಕ್‌ಡೌನ್ ಸಂಕಷ್ಟ: ಹೊಸ ಕಾರು ಖರೀದಿದಾರರಿಗೆ ಟಾಟಾದಿಂದ ಸುಲಭ ಸಾಲ ಸೌಲಭ್ಯ

ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಆಟೋಮೊಬೈಲ್ ಸೇರಿದಂತೆ ಎಲ್ಲ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಹೀಗಿರುವಾಗ ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದ್ದು, ಹೊಸ ಕಾರುಗಳ ಮಾರಾಟವನ್ನು ಸುಧಾರಿಸಲು ಟಾಟಾ ಮೋಟಾರ್ಸ್ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

ಹೊಸ ಕಾರು ಖರೀದಿದಾರರಿಗೆ ಟಾಟಾದಿಂದ ಸುಲಭ ಸಾಲ ಸೌಲಭ್ಯ

ವೈರಸ್ ಪರಿಣಾಮ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಪ್ರತಿಯೊಬ್ಬರಲ್ಲೂ ಕಾಡತೊಡಗಿದೆ. ಹೀಗಿರುವಾಗ ಕಾರು ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಹೊಸ ಕಾರು ಖರೀದಿದಾರರಿಗೆ ಲಾಕ್‌ಡೌನ್ ಸಂದರ್ಭದಲ್ಲಿ ಇಎಂಐ ಪಾವತಿಯ ಹೊರೆಯನ್ನು ತಗ್ಗಿಸಲು ಕೆಲವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿವೆ.

ಹೊಸ ಕಾರು ಖರೀದಿದಾರರಿಗೆ ಟಾಟಾದಿಂದ ಸುಲಭ ಸಾಲ ಸೌಲಭ್ಯ

ಲಾಕ್‌ಡೌನ್ ವಿನಾಯ್ತಿ ನಂತರವು ಆಟೋ ಉದ್ಯಮವು ತೀವ್ರ ಹಿನ್ನಡೆಯನ್ನ ಅನುಭವಿಸುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿನ ಆರ್ಥಿಕ ಮುಗ್ಗಟ್ಟು ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ.

ಹೊಸ ಕಾರು ಖರೀದಿದಾರರಿಗೆ ಟಾಟಾದಿಂದ ಸುಲಭ ಸಾಲ ಸೌಲಭ್ಯ

ಜೊತೆಗೆ ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟ ಮಳಿಗೆಗಳು ಪುನಾರಂಭಗೊಂಡ ನಂತರ ವಾಹನ ಖರೀದಿ ಬದಲು ಬುಕ್ಕಿಂಗ್ ಹಣ ವಾಪಸ್ ನೀಡುವಂತೆ ಬೇಡಿಕೆಯಿಡುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.

ಹೊಸ ಕಾರು ಖರೀದಿದಾರರಿಗೆ ಟಾಟಾದಿಂದ ಸುಲಭ ಸಾಲ ಸೌಲಭ್ಯ

ಹೀಗಾಗಿ ಟಾಟಾ ಮೋಟಾರ್ಸ್ ಸೇರಿದಂತೆ ಬಹುತೇಕ ಆಟೋ ಕಂಪನಿಗಳು ಹೊಸ ವಾಹನಗಳ ಖರೀದಿದಾರರಿಗೆ ಸುಲಭ ಹಣಕಾಸು, ದೀರ್ಘಾವಧಿಯ ಸಾಲ ಸೌಲಭ್ಯ, ಕೈಗೆಟುಕುವ ಇಎಂಐ ಆಫರ್ ನೀಡುತ್ತಿವೆ.

ಹೊಸ ಕಾರು ಖರೀದಿದಾರರಿಗೆ ಟಾಟಾದಿಂದ ಸುಲಭ ಸಾಲ ಸೌಲಭ್ಯ

ಆಯ್ದ ಕಾರು ಮಾದರಿಯಗಳನ್ನು ಮೊದಲ ಆರು ತಿಂಗಳು ರೂ.5 ಸಾವಿರ ಇಎಂಐ ಸೌಲಭ್ಯದೊಂದಿಗೆ ಮಾಲೀಕತ್ವ ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಶೇ.100ರಷ್ಟು ಆನ್‌ರೋಡ್ ದರದ ಮೇಲೆ ಲೋನ್ ಸೌಲಭ್ಯಗಳನ್ನು ಒದಗಿಸಲಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಹೊಸ ಕಾರು ಖರೀದಿದಾರರಿಗೆ ಟಾಟಾದಿಂದ ಸುಲಭ ಸಾಲ ಸೌಲಭ್ಯ

ರೂ.5 ಲಕ್ಷ ಮೊತ್ತಕ್ಕೆ ಮೊದಲ ಆರು ತಿಂಗಳು ರೂ.5 ಸಾವಿರ ಇಎಂಐ ಆಫರ್ ಪ್ರಮುಖ ಆಕರ್ಷಣೆಯಾಗಿದ್ದು, ಲಾಕ್‌ಡೌನ್ ಸಂಕಷ್ಟ ತಗ್ಗಿದ ನಂತರ ಹೆಚ್ಚುವರಿ ಇಐಎಂ ದರದೊಂದಿಗೆ ಸಾಲಮರುಪಾವತಿಗೆ ಅವಕಾಶ ನೀಡಲಾಗಿದೆ.

ಹೊಸ ಕಾರು ಖರೀದಿದಾರರಿಗೆ ಟಾಟಾದಿಂದ ಸುಲಭ ಸಾಲ ಸೌಲಭ್ಯ

ಹಾಗೆಯೇ ಆಯ್ದ ಕಾರು ಮಾದರಿಗಳ ಮೇಲೆ ಗರಿಷ್ಠ 8 ವರ್ಷಗಳ ಸಾಲ ಸೌಲಭ್ಯವು ಲಭ್ಯವಿದ್ದು, ಗ್ರಾಹಕರ ತಮ್ಮ ಅನುಕೂಲಕ್ಕೆ ತಕ್ಕಂತೆ ಸಾಲ ಮರುಪಾವತಿಗೆ ಹಲವು ಹೊಸ ಆಯ್ಕೆಗಳನ್ನು ನೀಡಲಾಗುತ್ತಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಹೊಸ ಕಾರು ಖರೀದಿದಾರರಿಗೆ ಟಾಟಾದಿಂದ ಸುಲಭ ಸಾಲ ಸೌಲಭ್ಯ

ಇದಲ್ಲದೇ ಕರೋನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‌ಗೂ ಹೊಸ ಆಫರ್ ನೀಡಿರುವ ಟಾಟಾ ಕಂಪನಿಯು ಆಯ್ದ ಕಾರುಗಳ ಖರೀದಿಯ ಮೇಲೆ ರೂ. 45 ಸಾವಿರದಷ್ಟು ವಿನಾಯ್ತಿ ಘೋಷಿಸಿದ್ದು, ಸೀಮಿತ ಅವಧಿಯಲ್ಲಿ ಕಾರು ಖರೀದಿಸುವ ಕರೋನಾ ವಾರಿಯರ್ಸ್‌ಗೆ ಮಾತ್ರವೇ ಈ ಹೊಸ ಲಭ್ಯವಿರಲಿದೆ.

Most Read Articles

Kannada
English summary
Tata Introduces New EMI Schemes And Key To Safety Packages Amidst Covid-19. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X