ಕರೋನಾ ವೈರಸ್ ಭೀತಿ ಹೋಗಲಾಡಿಸಲು ಸೇಫ್ಟಿ ಬಬಲ್ ಅಳವಡಿಸಿಕೊಂಡ ಟಾಟಾ ಮೋಟಾರ್ಸ್

ಕರೋನಾ ವೈರಸ್‌ನಿಂದಾಗಿ ಸುರಕ್ಷಿತ ವ್ಯಾಪಾರ ವಹಿವಾಟು ನಡೆಸುತ್ತಿರುವ ಉದ್ಯಮ ಸಂಸ್ಥೆಗಳು ಗ್ರಾಹಕರು ಮತ್ತು ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡಿದ್ದು, ಹೊಸ ಸುರಕ್ಷಾ ಕ್ರಮಗಳೇ ಇದೀಗ ಅತಿದೊಡ್ಡ ಉದ್ಯಮವಾಗಿ ಬದಲಾಗಿದೆ.

ಸೇಫ್ಟಿ ಬಬಲ್ ಅಳವಡಿಸಿಕೊಂಡ ಟಾಟಾ ಮೋಟಾರ್ಸ್

ಆಟೋ ಉದ್ಯಮದಲ್ಲೂ ಕೂಡಾ ವಿವಿಧ ಆಟೋ ಕಂಪನಿಗಳು ಗ್ರಾಹಕರ ಮತ್ತು ಸಿಬ್ಬಂದಿಗೆ ಗರಿಷ್ಠ ಸುರಕ್ಷತೆ ಒದಗಿಸುವ ಉದ್ದೇಶದಿಂದ ಹಲವಾರು ಪ್ರೊಟೋಕಾಲ್ ಅಳವಡಿಸಿಕೊಂಡಿದ್ದು, ಗ್ರಾಹಕರಲ್ಲಿ ಕರೋನಾ ವೈರಸ್ ಭೀತಿ ಹೋಗಲಾಡಿಸಲು ಟಾಟಾ ಮೋಟಾರ್ಸ್ ಕಂಪನಿಯು ಹೊಸ ಸುರಕ್ಷಾ ಮಾರ್ಗ ಒಂದನ್ನು ಅಳವಡಿಸಿಕೊಂಡಿದೆ. ಹೊಸ ವಾಹನಗಳ ವಿತರಣೆ ವೇಳೆ ಗ್ರಾಹಕರಿಗೆ ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾದ ವಾಹನ ಒದಗಿಸುವ ಸಂಬಂಧ ಸೇಫ್ಟಿ ಬಬಲ್ ಬಳಕೆ ಮಾಡುತ್ತಿದೆ.

ಸೇಫ್ಟಿ ಬಬಲ್ ಅಳವಡಿಸಿಕೊಂಡ ಟಾಟಾ ಮೋಟಾರ್ಸ್

ಸೇಫ್ಟಿ ಬಬಲ್ ಮೂಲಕ ವಾಹನಗಳನ್ನು ಸಂಪೂರ್ಣವಾಗಿ ಒಂದೇ ಬಾರಿಗೆ ಸ್ಯಾನಿಟೈಜ್ ಮಾಡಬಹುದಾಗಿದ್ದು, ಸಾಮಾನ್ಯ ಸ್ಯಾನಿಟೈಜ್ ಮಾದರಿಗಿಂತಲೂ ಸೇಫ್ಟಿ ಬಬಲ್ ಮೂಲಕ ಮಾಡಲಾದ ಸ್ಯಾನಿಟೈಜ್ ಪರಿಣಾಮಕಾರಿಯಾಗರಲಿದೆ.

ಸೇಫ್ಟಿ ಬಬಲ್ ಅಳವಡಿಸಿಕೊಂಡ ಟಾಟಾ ಮೋಟಾರ್ಸ್

ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಈಗಾಗಲೇ ವಿವಿಧ ಮಾದರಿಯ ಸ್ಯಾನಿಟೈಜ್ ಮೂಲಕ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿದ್ದು, ಇದೀಗ ಟಾಟಾ ಮೋಟಾರ್ಸ್ ಕಂಪನಿಯು ಕಾರು ವಿತರಣೆ ವೇಳೆ ಹೊಸ ಸುರಕ್ಷಾ ಮಾರ್ಗಸೂಚಿಯನ್ನು ಅನುಸರಿಸುತ್ತಿದೆ.

ಸೇಫ್ಟಿ ಬಬಲ್ ಅಳವಡಿಸಿಕೊಂಡ ಟಾಟಾ ಮೋಟಾರ್ಸ್

ಸೇಫ್ಟಿ ಬಬಲ್ ಅಳವಡಿಕೆಗೂ ಮುನ್ನ ಕರೋನಾ ವೈರಸ್ ಭೀತಿಯನ್ನು ಹೋಗಲಾಡಿಸಲು ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಹೋಂ ಡೆಲಿವರಿ, ಗ್ರಾಹಕರ ಮನೆ ಬಾಗಿಲಿಗೆ ಕಾರ್ ಸರ್ವಿಸ್‌ಗಳನ್ನು ಒದಗಿಸುವ ಮೂಲಕ ಗ್ರಾಹಕರ ಜೊತೆ ನೇರ ಸಂಪರ್ಕವನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿತ್ತು.

ಸೇಫ್ಟಿ ಬಬಲ್ ಅಳವಡಿಸಿಕೊಂಡ ಟಾಟಾ ಮೋಟಾರ್ಸ್

ಇದೀಗ ಕಾರು ವಿತರಣೆ ವೇಳೆ ಗ್ರಾಹಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲು ಸೇಫ್ಟಿ ಬಬಲ್ ಮೂಲಕ ಸ್ಯಾನಿಟೈಜ್ ಸೇವೆಯನ್ನು ನೀಡಲಾಗುತ್ತಿದ್ದು, ಸೇಫ್ಟಿ ಬಬಲ್ ಒಳಗೆ ವಿವಿಧ ರಾಸಾಯನಿಕಗಳ ಸಿಂಪರಣೆ ಮೂಲಕ ವೈರಸ್‌ಗಳಿಂದ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಸೇಫ್ಟಿ ಬಬಲ್ ಅಳವಡಿಸಿಕೊಂಡ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ದೇಶಾದ್ಯಂತ ಹರಡಿಕೊಂಡಿರುವ ತನ್ನೆಲ್ಲಾ ಡೀಲರ್ಸ್‌ಗಳಲ್ಲೂ ಸೇಫ್ಟಿ ಬಬಲ್ ಮೂಲಕವೇ ಹೊಸ ವಾಹನಗಳನ್ನು ವಿತರಣೆ ಮಾಡುತ್ತಿದ್ದು, ಟಾಟಾ ಮೋಟಾರ್ಸ್ ಹೊಸ ಸುರಕ್ಷಾ ಕ್ರಮಕ್ಕೆ ಗ್ರಾಹಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸೇಫ್ಟಿ ಬಬಲ್ ಅಳವಡಿಸಿಕೊಂಡ ಟಾಟಾ ಮೋಟಾರ್ಸ್

ಇದರೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ವಿವಿಧ ವಾಹನ ಮಾದರಿಗಳಿಗಾಗಿ ಸೇಫ್ಟಿ ಕಿಟ್‌ಗಳನ್ನು ಕೂಡಾ ಮಾರಾಟ ಮಾಡುತ್ತಿದ್ದು, ಸ್ಯಾನಿಟೈಜ್ ಕಿಟ್‌ನಲ್ಲಿ ಹ್ಯಾಂಡ್ ಸ್ಯಾನಿಟೈಜ್, ಎನ್95 ಮಾಸ್ಕ್, ಹ್ಯಾಂಡ್ ಗ್ಲೌಸ್, ಸೇಫ್ಟಿ ಟಚ್ ಕೀ, ಟಿಷ್ಯೂ ಬಾಕ್ಸ್, ಮಿಸ್ಟ್ ಡಿಫ್ಯೂಸರ್ ಒಳಗೊಂಡಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಸೇಫ್ಟಿ ಬಬಲ್ ಅಳವಡಿಸಿಕೊಂಡ ಟಾಟಾ ಮೋಟಾರ್ಸ್

ಇನ್ನು ಕರೋನಾ ವೈರಸ್‌ ಹರಡುವಿಕೆಯನ್ನು ತಡೆಯಲು ವಿವಿಧ ಮುಂಜಾಗ್ರತ ಕ್ರಮಗಳು ಸಾಕಷ್ಟು ಸಹಕಾರಿಯಾಗಿದ್ದು, ಆಟೋ ಕಂಪನಿಗಳು ಕೂಡಾ ಸುರಕ್ಷಿತ ವ್ಯಾಪಾರ ವಹಿವಾಟು ನಡೆಸಲು ತೆಗೆದುಕೊಂಡಿರುವ ವಿವಿಧ ಮುಂಜಾಗ್ರತ ಕ್ರಮಗಳು ಕೂಡಾ ಸಾಕಷ್ಟು ಸಹಕಾರಿಯಾಗಿವೆ.

Most Read Articles

Kannada
English summary
Tata Motors Dealerships Introduce Car Safety Bubble. Read in Kannada.
Story first published: Monday, November 30, 2020, 14:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X