51 ವಿಂಗರ್ ಆಂಬುಲೆನ್ಸ್‌ಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಕರೋನಾ ವೈರಸ್ ಇಡೀ ಮಾನವ ಕುಲವನ್ನೇ ತತ್ತರಿಸುವಂತೆ ಮಾಡಿದೆ. ಈ ವರ್ಷಾರಂಭದಲ್ಲಿ ಕಾಣಿಸಿಕೊಂಡ ಈ ಮಹಾಮಾರಿ ವೈರಸ್ ವಿಶ್ವದ್ಯಾಂತ ಜನಜೀವನವನ್ನು ತತ್ತರಿಸುವಂತೆ ಮಾಡಿದೆ.

51 ವಿಂಗರ್ ಆಂಬುಲೆನ್ಸ್‌ಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಕರೋನಾ ವೈರಸ್ ಈಗಾಗಲೇ ಹಲವರ ಜೀವನವನ್ನು ಬಲಿ ಪಡೆದಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಹಲವಾರು ವಾಹನ ತಯಾರಕ ಕಂಪನಿಗಳೂ ಸಹ ಕರೋನಾ ವೈರಸ್ ಯುದ್ದದಲ್ಲಿ ಸರ್ಕಾರಗಳೊಂದಿಗೆ ಕೈ ಜೋಡಿಸಿವೆ.

51 ವಿಂಗರ್ ಆಂಬುಲೆನ್ಸ್‌ಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಈಗ ಟಾಟಾ ಮೋಟಾರ್ಸ್ ಜೀವ ರಕ್ಷಣೆ ಒಂದಾದ ಆಂಬುಲೆನ್ಸ್‌ಗಳನ್ನು ವಿತರಿಸಿದೆ. ಕರೋನಾ ವೈರಸ್ ಹರಡುವುದು ಆರಂಭವಾದಾಗಿನಿಂದ ಟಾಟಾ ಮೋಟಾರ್ಸ್ ತನ್ನದೇ ಆದ ರೀತಿಯಲ್ಲಿ ನೆರವಾಗುತ್ತಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

51 ವಿಂಗರ್ ಆಂಬುಲೆನ್ಸ್‌ಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಈ ಹಿಂದೆ ಟಾಟಾ ಮೋಟಾರ್ಸ್, ವಿಪತ್ತು ಪರಿಹಾರ ನಿಧಿಗೆ ಹಲವಾರು ಸಾವಿರ ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿತ್ತು. ಇದು ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಾದ ವೈದ್ಯಕೀಯ ನೆರವನ್ನೂ ಒದಗಿಸಿದೆ.

51 ವಿಂಗರ್ ಆಂಬುಲೆನ್ಸ್‌ಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಈಗ ಟಾಟಾ ಮೋಟಾರ್ಸ್ ಮಹಾರಾಷ್ಟ್ರದ ಮುನ್ಸಿಪಲ್ ಆಡಳಿತಕ್ಕೆ 51 ಆಂಬುಲೆನ್ಸ್‌ಗಳನ್ನು ವಿತರಿಸಿರುವುದಾಗಿ ವರದಿಯಾಗಿದೆ. ಈ ಟಾಟಾ ವಿಂಗರ್ ಆಂಬುಲೆನ್ಸ್‌ಗಳಲ್ಲಿ ಜೀವ ರಕ್ಷಕ ಸಾಧನಗಳನ್ನು ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

51 ವಿಂಗರ್ ಆಂಬುಲೆನ್ಸ್‌ಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಈ ಆಂಬುಲೆನ್ಸ್‌ಗಳಲ್ಲಿ ಕರೋನಾ ಪೀಡಿತರ ಚಿಕಿತ್ಸೆಗೆ ಅಗತ್ಯವಿರುವ ವೆಂಟಿಲೇಟರ್‌, ಆಕ್ಸಿಜನ್ ನಂತಹ ಪ್ರಾಥಮಿಕ ಸಾಧನಗಳನ್ನು ಅಳವಡಿಸಿರುವುದಾಗಿ ವರದಿಯಾಗಿದೆ. ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರವು ಆಂಬುಲೆನ್ಸ್‌ಗಳನ್ನು ಖರೀದಿಸಲು ಇ-ಮಾರ್ಕೆಟ್ ಪ್ಲೇಸ್ ನಲ್ಲಿ ಪ್ರಕಟಣೆ ಹೊರಡಿಸಿತ್ತು.

51 ವಿಂಗರ್ ಆಂಬುಲೆನ್ಸ್‌ಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಇದಾದ ನಂತರ ಪುಣೆಯ ಮುನ್ಸಿಪಲ್ ಆಡಳಿತವು ಆಂಬುಲೆನ್ಸ್ ಖರೀದಿಗೆ ಟಾಟಾ ಮೋಟಾರ್ಸ್ ಕಂಪನಿಗೆ ವರ್ಕ್ ಆರ್ಡರ್ ನೀಡಿತ್ತು. ಅದರಂತೆ ಈಗ ಟಾಟಾ ಮೋಟಾರ್ಸ್ ಕಂಪನಿಯು ಈ 51 ಆಂಬುಲೆನ್ಸ್‌ಗಳನ್ನು ಒದಗಿಸಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

51 ವಿಂಗರ್ ಆಂಬುಲೆನ್ಸ್‌ಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಈ 51 ಆಂಬುಲೆನ್ಸ್‌ಗಳನ್ನು ಬಿಎಸ್ 6 ನಿಯಮಗಳಿಗೆ ತಕ್ಕಂತೆ ಉತ್ಪಾದಿಸಲಾಗಿದೆ. ಈ ಆಂಬುಲೆನ್ಸ್‌ಗಳನ್ನು ಇತರ ಆಂಬುಲೆನ್ಸ್‌ಗಳಿಗಿಂತ ಭಿನ್ನವಾಗಿ ಚಾಲಕರಿಗೆ ಹೆಚ್ಚುವರಿ ರಕ್ಷಣೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

51 ವಿಂಗರ್ ಆಂಬುಲೆನ್ಸ್‌ಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಈ ಆಂಬುಲೆನ್ಸ್‌ನಲ್ಲಿ ಚಾಲಕರಿಗಾಗಿ ಖಾಸಗಿ ಕೋಣೆ ನೀಡಲಾಗಿದೆ. ಇದರಿಂದಾಗಿ ಕರೋನಾ ವೈರಸ್ ಸೋಂಕಿತರನ್ನು ಸಾಗಿಸುವ ಚಾಲಕರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

51 ವಿಂಗರ್ ಆಂಬುಲೆನ್ಸ್‌ಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಇದರ ಜೊತೆಗೆ ಈ ಆಂಬುಲೆನ್ಸ್‌ಗಳು ಇಂಧನ ಉಳಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಆಂಬುಲೆನ್ಸ್‌ಗಳಲ್ಲಿರುವ ಇಕೋ ಮೋಡ್ ಬಳಸಿದರೆ ಆಂಬುಲೆನ್ಸ್‌ಗಳು ಕಡಿಮೆ ಇಂಧನವನ್ನು ಬಳಸುತ್ತವೆ. ಇದರಿಂದ ಇವುಗಳ ಮೈಲೇಜ್ ಸಹ ಹೆಚ್ಚುತ್ತದೆ.

Most Read Articles
 
Kannada
English summary
Tata Motors delivers 51 winger based ambulances to Pune Municipality. Read in Kannada.
Story first published: Monday, September 28, 2020, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X