ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ ಮೋಟಾರ್ಸ್

ಮಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಭಾರೀ ಪ್ರಮಾಣದ ದೇಣಿಗೆ ನೀಡಿರುವ ಟಾಟಾ ಮೋಟಾರ್ಸ್ ಕಂಪನಿಯು ವೈರಸ್ ವಿರುದ್ಧ ಹೋರಾಡುತ್ತಿರುವ ಕರೋನಾ ವಾರಿಯರ್ಸ್‌ಗೂ ವಿವಿಧ ಬಗೆಗೆ ಸೇವೆಗಳನ್ನು ಉಚಿತವಾಗಿದೆ ನೀಡಿದೆ.

ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ

ವೈರಸ್ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ಕರೋನಾ ವಾರಿಯರ್ಸ್‌ಗೆ ಕಳೆದ ತಿಂಗಳು ಕಾರು ಖರೀದಿಗಾಗಿ ಹಲವಾರು ಆಫರ್‌ ನೀಡಿದ್ದ ಟಾಟಾ ಕಂಪನಿಯು ಇದೀಗ ಕರೋನಾ ವಾರಿಯರ್ಸ್‌ ಕಾರುಗಳಿಗೆ ಉಚಿತವಾಗಿ ಸ್ಪೆಷಲ್ ಸರ್ವೀಸ್ ಆಫರ್ ನೀಡಿದೆ. ಹೊಸ ಸರ್ವೀಸ್ ಆಫರ್‌ನಲ್ಲಿ ಕರೋನಾ ವಾರಿಯರ್ಸ್ ವಾಹನಗಳಿಗೆ ಉಚಿತವಾಗಿ ಕಾಂಟ್ಯಾಕ್ಟ್ ಲೆಸ್ ಸ್ಯಾನಿಟೈಜ್ ಸರ್ವೀಸ್ ದೊರೆಯಲಿದೆ.

ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ

ಸ್ಪೆಷಲ್ ಸರ್ವೀಸ್‌ ಕುರಿತಾದ ಹೆಚ್ಚಿನ ಮಾಹಿತಿಗಾಗಿ 18002095554 ಹಾಟ್ ಲೈನ್ ನಂಬರ್ ಸಂಪರ್ಕಿಸಬಹುದಾಗಿದ್ದು, ದೇಶಾದ್ಯಂತವಿರುವ 653 ವರ್ಕ್ ಶಾಪ್‌ಗಳಲ್ಲಿ ಟಾಟಾ ಕಂಪನಿಯು ಹೊಸ ಸರ್ವೀಸ್‌ಗಳಿಗಾಗಿ ಚಾಲನೆ ನೀಡಿದೆ.

ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ

ಇನ್ನು ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಹೀಗಿರುವಾಗ ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ

ಲಾಕ್‌ಡೌನ್‌ನಿಂದ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಪ್ರತಿಯೊಬ್ಬರಲ್ಲೂ ಕಾಡತೊಡಗಿದೆ. ಹೀಗಿರುವಾಗ ಕಾರು ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಹೊಸ ಕಾರು ಖರೀದಿದಾರರಿಗೆ ಇಎಂಐ ಪಾವತಿ ಚಿಂತೆಯನ್ನು ಹೊಗಲಾಡಿಸಲು ಕೆಲವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿವೆ.

ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ

ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ

ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿವೆ. ಜೊತೆಗೆ ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟ ಮಳಿಗೆಗಳು ಪುನಾರಂಭಗೊಂಡ ನಂತರ ವಾಹನ ಖರೀದಿ ಬದಲು ಬುಕ್ಕಿಂಗ್ ಹಣ ವಾಪಸ್ ನೀಡುವಂತೆ ಬೇಡಿಕೆಯಿಡುತ್ತಿದ್ದಾರೆ.

ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ

ಸದ್ಯಕ್ಕೆ ವಾಹನ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದು, ಲಾಕ್‌ಡೌನ್ ನಂತರ ವಾಹನ ಮಾರಾಟ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುವ ಮೂಲಕ ಮತ್ತೊಂದು ಶಾಕ್ ನೀಡುತ್ತಿದ್ದಾರೆ.

ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ

ಇದರಿಂದ ಗ್ರಾಹಕರನ್ನು ಸೆಳೆಯಲು ಆಟೋ ಕಂಪನಿಗಳು ಅತಿ ಸುಲಭವಾದ ಸಾಲಸೌಲಭ್ಯಗಳನ್ನು ನೀಡುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ಆಕರ್ಷಕ ಇಎಂಐ ಮರುಪಾವತಿ ಸೌಲಭ್ಯಗಳನ್ನು ಘೋಷಿಸಿದೆ.

ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ

ತನ್ನದೆ ಪ್ರಮುಖ ಹಣಕಾಸು ಸಂಸ್ಥೆಗಳಿಂದ ಅತಿ ಸುಲಭವಾದ ವಾಹನ ಸಾಲಗಳನ್ನು ನೀಡುತ್ತಿರುವ ಟಾಟಾ ಕಂಪನಿಯು ಮೊದಲ ಆರು ತಿಂಗಳು ಕಾಲ ಅತಿ ಕಡಿಮೆ ಇಎಂಐ ಮರುಪಾವತಿಗೆ ಅವಕಾಶ ನೀಡಿದ್ದು, ಲಾಕ್‌ಡೌನ್ ಆರ್ಥಿಕ ಸಂಕಷ್ಟ ಎದುರಾಗದಂತೆ ಇಎಂಐ ನಿಗದಿಪಡಿಸಿದೆ.

Most Read Articles

Kannada
English summary
Tata Motors Introduces Special Hotline Number For Car Servicing. Read in Kannada.
Story first published: Tuesday, June 16, 2020, 22:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X