ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ದಸರಾ ಸಂಭ್ರಮದಲ್ಲಿ ಬಹುತೇಕ ಆಟೋ ಕಂಪನಿಗಳು ನೀರಿಕ್ಷೆಗೂ ಮೀರಿ ಗ್ರಾಹಕರ ಬೇಡಿಕೆ ಪಡೆದುಕೊಂಡಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದೆ.

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ಕರೋನಾ ವೈರಸ್ ಪರಿಣಾಮ ಕುಸಿದಿದ್ದ ವಾಹನ ಮಾರಾಟವು ಇದೀಗ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಟಾಟಾ ಮೋಟಾರ್ಸ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಹೊಸ ವಾಹನ ಮಾರಾಟದಲ್ಲಿ ನೀರಿಕ್ಷೆಗೂ ಮೀರಿ ಬೆಳವಣಿಗೆ ಕಂಡಿವೆ. ಕರೋನಾ ವೈರಸ್ ಪರಿಣಾಮ ಏಪ್ರಿಲ್, ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಸತತ ಮಾರಾಟ ಕುಸಿತ ಕಂಡಿದ್ದ ಆಟೋ ಕಂಪನಿಗಳು ಅಗಸ್ಟ್ ಅವಧಿಯಲ್ಲಿ ಸಾಧರಣ ಮಟ್ಟದಲ್ಲಿ ವಾಹನಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ್ದವು.

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ಆದರೆ ಸೆಪ್ಟೆಂಬರ್ ಅವಧಿಯಲ್ಲಿ ಹಲವು ಆಟೋ ಕಂಪನಿಗಳು ಶೇ. 10 ರಿಂದ ಶೇ. 30 ರಷ್ಟು ಬೆಳವಣಿಗೆ ಸಾಧಿಸಿದ್ದರೆ ಇನ್ನೂ ಕೆಲವು ಕಂಪನಿಗಳು ತುಸು ಹಿನ್ನಡೆ ಅನುಭವಿಸಿದ್ದವು. ಆದರೆ ಇದೀಗ ಬಹುತೇಕ ಆಟೋ ಕಂಪನಿಗಳ ಬುಕ್ಕಿಂಗ್ ಪ್ರಮಾಣವು ಕಳೆದ ವರ್ಷಕ್ಕಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ದಸರಾ ಹಿನ್ನಲೆಯಲ್ಲಿ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಗರಿಷ್ಠ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಅಕ್ಟೋಬರ್ ಅವಧಿಯಲ್ಲಿ ವಾಹನಗಳ ಮಾರಾಟ ಪ್ರಮಾಣವು ನವೆಂಬರ್ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆಯಾಗಲಿದೆ.

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ಸದ್ಯ ಬೇಡಿಕೆಯ ಪ್ರಕಾರ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಕನಿಷ್ಠ ಶೇ. 30 ರಿಂದ ಶೇ.75 ರಷ್ಟು ಹೆಚ್ಚುವರಿ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದು, ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಟಾಟಾ ಮೋಟಾರ್ಸ್ ಕಾರುಗಳ ಬೇಡಿಕೆಯಲ್ಲಿಯೇ ಬರೋಬ್ಬರಿ ಶೇ.97 ರಷ್ಟು ಹೆಚ್ಚಳವಾಗಿದೆಯೆಂತೆ. ಹಾಗೆಯೇ ಟಾಟಾ ಕಾರುಗಳ ಬುಕ್ಕಿಂಗ್ ಪ್ರಮಾಣವು ಕಳೆದ ವರ್ಷದ ಅಕ್ಟೋಬರ್ ಅವಧಿಗಿಂತ ಶೇ.103 ರಷ್ಟು ಹೆಚ್ಚಳವಾಗಿದ್ದು, ನಿಗದಿತ ಅವಧಿಯಲ್ಲಿ ಕಾರುಗಳ ವಿತರಣೆಗಾಗಿ ಉತ್ಪಾದನಾ ಪ್ರಮಾಣವನ್ನು ತೀವ್ರಗೊಳಿಸಲಾಗಿದೆ.

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ಹಾಗೆಯೇ ಮುಂಬರುವ ದೀಪಾವಳಿ ಸಂಭ್ರಮದ ವೇಳೆ ಮತ್ತಷ್ಟು ಹೊಸ ವಾಹನ ಮಾರಾಟ ಗುರಿಹೊಂದಿರುವ ಕಾರು ಕಂಪನಿಗಳು ಕಾಯುವಿಕೆ ಅವಧಿಯನ್ನು ತಗ್ಗಿಸುತ್ತಿದ್ದು, ವಾಹನಗಳ ಮಾರಾಟದಲ್ಲಿ ಸತತ ಕುಸಿತ ಅನುಭವಿಸಿದ್ದ ವಾಹನ ಕಂಪನಿಗಳಿಗೆ ದಸರಾ ಸಂಭ್ರಮವು ಭರ್ಜರಿ ಆದಾಯ ತಂದುಕೊಡುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ಇನ್ನು ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರುಗಳ ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಟಾಟಾ ಮೋಟಾರ್ಸ್ ಕೂಡಾ ತನ್ನ ಬಹುತೇಕ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್‌ಗಳನ್ನು ಘೋಷಣೆ ಮಾಡಿದೆ.

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರುಗಳ ಖರೀದಿಯ ಮೇಲೆ ಗ್ರಾಡ್ಯುವಲ್ ಸ್ಟೆಪ್ ಅಪ್ ಸ್ಕೀಮ್ ಮತ್ತು ಟಿಎಂಎಲ್ ಫ್ಲೆಕ್ಸಿ ಡ್ರೈವ್ ಎನ್ನುವ ಎರಡು ಮಾದರಿಯ ಲೋನ್ ಸೌಲಭ್ಯಗಳನ್ನು ಘೋಷಣೆ ಮಾಡಿದ್ದು, ಶೇ.100ರಷ್ಟು ಎಕ್ಸ್‌ಶೋರೂಂ ದರದ ಮೇಲೆ ಸಾಲ ಸೌಲಭ್ಯ ಸಿಗಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ಗ್ರಾಡ್ಯುವಲ್ ಸ್ಟೆಪ್ ಅಪ್ ಸ್ಕೀಮ್ ಲೋನ್ ಆಫರ್‌ನಲ್ಲಿ ಗ್ರಾಹಕರಿಗೆ ಆಕರ್ಷಕ ಬಡ್ಡಿದರದಲ್ಲಿ ಒಂದು ಲಕ್ಷಕ್ಕೆ ರೂ. 799 ಇಎಂಐಯೊಂದಿಗೆ ತ್ವರಿತವಾಗಿ ಮಾಲೀಕತ್ವ ಪಡೆಯಬಹುದಾಗಿದ್ದು, ಕಾರು ಮಾಡಿದ 2 ವರ್ಷಗಳ ನಂತರ ಕ್ರಮೇಣ ಇಎಂಐ ಮೊತ್ತವು ಹೆಚ್ಚಳವಾಗುತ್ತದೆ. ಸಾಲ ಮರುಪಾವತಿಗೆ ಗರಿಷ್ಠ ಐದು ವರ್ಷಗಳನ್ನು ನೀಡಲಾಗಿದ್ದು, ಸದ್ಯ ಕರೋನಾ ವೈರಸ್ ಪರಿಣಾಮ ಹೊಸ ಕಾರು ಖರೀದಿ ಮುಂದೂಡಿರುವ ಗ್ರಾಹಕರಿಗೆ ಇದು ಅನುಕೂಲಕರವಾಗಲಿದೆ.

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ಟಿಎಂಎಲ್ ಫ್ಲೆಕ್ಸಿ ಡ್ರೈವ್ ಎನ್ನುವ ಇನ್ನೊಂದು ಲೋನ್ ಸ್ಕೀಮ್ ಅಡಿ ವಾಹನ ಸಾಲ ಪಡೆಯುವ ಗ್ರಾಹಕರಿಗೆ ಕಾರ್ ವೆರಿಯೆಂಟ್ ಆಧರಿಸಿ ಪ್ರತಿ ಲಕ್ಷಕ್ಕೆ ರೂ.789 ಗಳಂತೆ ವರ್ಷಕ್ಕೆ ಮೂರು ತಿಂಗಳು ಇಎಂಐ ಪಾವತಿಗೆ ವಿನಾಯ್ತಿ ದೊರೆಯಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ಟಿಎಂಎಲ್ ಫ್ಲೆಕ್ಸಿ ಡ್ರೈವ್ ಲೋನ್ ಅಡಿ ಕಾರು ಖರೀದಿ ಮಾಡುವುದರಿಂದ ಗ್ರಾಹಕರಿಗೆ ಐದು ವರ್ಷಗಳ ಕಾಲ ವರ್ಷಕ್ಕೆ ಮೂರು ತಿಂಗಳಂತೆ ಒಟ್ಟು 15 ತಿಂಗಳ ಕಾಲ ಇಎಂಐ ಮರುಪಾವತಿಗೆ ವಿನಾಯ್ತಿ ದೊರೆಯಲಿದ್ದು, ವಿನಾಯ್ತಿ ಪಡೆದ ಲೋನ್ ಇಎಂಐ ಮೊತ್ತವು ಇನ್ನುಳಿದ ತಿಂಗಳ ಇಎಂಐನಲ್ಲಿ ಸೇರ್ಪಡೆಗೊಳಿಸಿ ದರ ನಿಗದಿಮಾಡಲಾಗುತ್ತದೆ.

ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆ

ಅಂದರೆ ಕಾರು ಖರೀದಿ ಮಾಡುವ ಗ್ರಾಹಕನು ವರ್ಷದ ಯಾವ ತಿಂಗಳಿನಲ್ಲಿ ಆದಾಯ ಕಡಿಮೆ ಇರುತ್ತೆ ಎನ್ನಿಸುವುದೋ ಆ ತಿಂಗಳಿನಲ್ಲಿ ಇಎಂಐ ಮರುಪಾವತಿಗೆ ವಿನಾಯ್ತಿ ಪಡೆದುಕೊಳ್ಳುವ ಅವಕಾಶವಿದ್ದು, ಹೊಸ ಲೋನ್‌ಗಳನ್ನು ಹೆಚ್‌ಡಿಎಫ್‌ಪಿ ಜೊತೆಗೂಡಿ ನೀಡಲಾಗುತ್ತಿದೆ.

Most Read Articles

Kannada
English summary
Tata Motors Recorded Massive Jump In Bookings And Sales. Read in Kannada.
Story first published: Tuesday, October 27, 2020, 22:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X