ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಆಟೋ ಉದ್ಯಮ ಮೇಲೆ ಭಾರೀ ಹೊಡೆತ ನೀಡಿರುವ ಕರೋನಾ ವೈರಸ್ ತಡೆಗೆ ವಿಶ್ವಾದ್ಯಂತ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿರುವ ಭಾರತದಲ್ಲೂ ಸೋಂಕು ತಡೆಗಾಗಿ ವಿವಿಧ ಹಂತದಲ್ಲಿ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಕರೋನಾ ವೈರಸ್‌ನಿಂದಾಗಿ ವಿಶ್ವಾದ್ಯಂತ ಇದುವರೆಗೆ ಸುಮಾರು 11 ಸಾವಿರಕ್ಕೂ ಜನ ಪ್ರಾಣಕಳೆದುಕೊಂಡಿದ್ದು, ಭಾರತದಲ್ಲೂ ಇದುವರೆಗೆ 300ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ ಐವರು ಪ್ರಾಣಬಿಟ್ಟಿದ್ದಾರೆ. ಈ ಹಿನ್ನಲೆ ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ ಪುಣೆಯಲ್ಲಿರುವ ತನ್ನ ಕಾರು ಉತ್ಪಾದನಾ ಘಟಕದಲ್ಲಿನ ಉತ್ಪಾದನಾ ಪ್ರಕ್ರಿಯೆಯನ್ನು ಗಣನೀಯವಾಗಿ ಇಳಿಕೆ ಮಾಡಲು ನಿರ್ಧರಿಸಿದೆ.

ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ 8 ಕರೋನಾ ವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಪುಣೆಯ ಯವತ್ಮಲ್ ಮತ್ತು ಕಲ್ಯಾಣ್ ನಗರಗಳಲ್ಲಿ ತಲಾ ಒಂದೊಂದು ಕೇಸ್ ಖಚಿತವಾಗಿದೆ.

ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಈ ಹಿನ್ನಲೆಯಲ್ಲಿ ಸೋಂಕು ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಪಾಲಿಸುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ತಿಂಗಳು 23ರಿಂದ ಕಾರು ಉತ್ಪಾದನೆಯನ್ನು ಗಣನೀಯವಾಗಿ ತಗ್ಗಿಸುವುದಾಗಿ ಸ್ಪಷ್ಟಪಡಿಸಿದೆ.

ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ತನಕ ಯಾವುದೇ ಹೆಚ್ಚುವರಿ ಕಾರು ಉತ್ಪಾದನಾ ಪ್ರಕ್ರಿಯೆಯನ್ನು ಮುಂದುವರಿಸದಿರಲು ನಿರ್ಧರಿಸಲಾಗಿದ್ದು, ಕಾರು ಮಾರಾಟ ವೇಳೆಯು ಸೋಂಕಿನಿಂದ ರಕ್ಷಣೆಗಾಗಿ ಹಲವಾರು ಮುಂಜಾಗ್ರತ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಹೊಸ ಕಾರುಗಳ ಕುರಿತಾದ ಹೊರಭಾಗದ ಪ್ರಚಾರ, ಗ್ರಾಹಕರ ಜೊತೆಗಿನ ಮುಖಾಮುಖಿ ಚೆರ್ಚೆ ಬದಲಿಗೆ ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳನ್ನು ಹೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಅಂತಿಮ ಹಂತದ ಗ್ರಾಹಕರ ಸೇವೆಗಳಿಗಾಗಿ ಮಾತ್ರವೇ ಭೇಟಿಗೆ ಆದ್ಯತೆ ನೀಡಲಾಗಿದ್ದು, ಈ ವೇಳೆಯು ಗ್ರಾಹಕರು ಮತ್ತು ಸಿಬ್ಬಂದಿಗೆ ಸೋಂಕಿಗೆ ಒಳಗಾಗದಂತೆ ಹಲವಾರು ಮುನ್ನೆಚ್ಚೆರಿಕೆ ಕ್ರಮಗಳನ್ನು ಜಾರಿಗೆ ತರವಾಗಿದೆ.

ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಇನ್ನು ವೈರಸ್ ಅಟ್ಟಹಾಸದಿಂದ ಚೀನಾದಲ್ಲಿ ಹಲವಾರು ಆಟೋ ಕಂಪನಿಗಳು ತಮ್ಮ ಉತ್ಪಾದನಾ ಘಟಕವನ್ನು ಮುಚ್ಚಿದ ಬೆನ್ನಲ್ಲೇ ಯುರೋಪಿನಲ್ಲಿಯೂ ಸಹ ಹಲವಾರು ಆಟೋ ಕಂಪನಿಗಳು ತಮ್ಮ ಪ್ರಮುಖ ಕಾರು ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಬೆಂಟ್ಲಿ ಕೂಡಾ ಯುಕೆಯಲ್ಲಿರುವ ತನ್ನ ಅತಿ ದೊಡ್ಡ ಕಾರು ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ್ದು, ಮಾರ್ಚ್ 20ರಿಂದ ಎಪ್ರಿಲ್ 20ರ ತನಕ ಯಾವುದೇ ಉತ್ಪಾದನಾ ಪ್ರಕ್ರಿಯೆಗಳನ್ನು ಕೈಗೊಳ್ಳದಿರಲು ನಿರ್ಧರಿಸಿದೆ.

ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಯುರೋಪಿನಲ್ಲಿ ಪ್ರಮುಖ ಕಾರು ಮಾರಾಟ ಕಂಪನಿಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಗ್ರೂಪ್ ಕೂಡಾ ಮುಂದಿನ ಎರಡು ವಾರಗಳ ಕಾಲ ಯಾವುದೇ ಉತ್ಪಾದನಾ ಚಟುವಟಿಕೆಯನ್ನು ಕೈಗೊಳ್ಳದಿರಲು ನಿರ್ಧರಿಸಿದ್ದು, ಕಾರ್ಮಿಕರಿಗೆ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳವಾಗಿದೆ.

ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಫೋಕ್ಸ್‌ವ್ಯಾಗನ್ ಮಾತ್ರವಲ್ಲದೆ ಅಂಗಸಂಸ್ಥೆಗಳಾದ ಸ್ಕೋಡಾ, ಆಡಿ, ಫೋರ್ಷೆ ಮತ್ತು ಬುಗಾಟಿ ಕಾರುಗಳ ಉತ್ಪಾದನೆಯನ್ನು ಸಹ ಸ್ಥಗಿತಗೊಳಿಸಲಾಗಿದ್ದು, ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ.

ಮಾ.23ರಿಂದ ಕಾರುಗಳ ಉತ್ಪಾದನೆಯನ್ನು ತಗ್ಗಿಸಲಿದೆ ಟಾಟಾ ಮೋಟಾರ್ಸ್

ಇನ್ನುಳಿದಂತೆ ಯುರೋಪ್ ರಾಷ್ಟ್ರಗಳಲ್ಲಿ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳಾದ ಟೊಯೊಟಾ, ಸುಜುಕಿ, ಫಿಯೆಟ್ ಕ್ಲೈಸರ್, ರೆನಾಲ್ಟ್, ಪಿಎಸ್ಎ ಗ್ರೂಪ್‌ಗೆ ಸೇರಿದ 35ಕ್ಕೂ ಹೆಚ್ಚು ವಾಹನ ಉತ್ಪಾದನಾ ಘಟಕಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Most Read Articles

Kannada
English summary
Tata Motors To Slowdown production from 23 march at pune plant. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X